ವಾಷಿಂಗ್ಟನ್: ವಿದ್ಯುತ್ ಇಲಾಖೆಯ ಸಬ್ ಸ್ಟೇಷನ್ ಗೆ ಹಾವೊಂದು ನುಗ್ಗಿದ ಪರಿಣಾಮ ಅಮೆರಿಕದ ಆಸ್ಟಿನ್ ನಗರದ ಸುಮಾರು 16,000 ಗ್ರಾಹಕರು ವಿದ್ಯುತ್ ಇಲ್ಲದೇ ಪರದಾಡುವಂತಾದ ಪ್ರಸಂಗ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:5ಗ್ಯಾರಂಟಿ ಯೋಜನೆಗೆ ತಾತ್ವಿಕ ಒಪ್ಪಿಗೆ ಮಾತ್ರ; ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಅಧಿಕೃತ ಜಾರಿ
ಆಸ್ಟಿನ್ ಎನರ್ಜಿ ವಕ್ತಾರ ಮ್ಯಾಟ್ ಮಿಚೆಲ್ ಪ್ರಕಾರ, ಇತ್ತೀಚೆಗೆ ವಿದ್ಯುತ್ ಸ್ಥಗಿತಗೊಂಡಿದ್ದ ಪರಿಣಾಮ ಅಂದಾಜು 16,000 ಜನರು ವಿದ್ಯುತ್ ಇಲ್ಲದೇ ಪರದಾಡುವಂತಾಗಿತ್ತು ಎಂದು ಫ್ಯಾಕ್ಸ್ ಆಸ್ಟಿನ್ 7 ವರದಿ ಮಾಡಿದೆ.
ಹಾವೊಂದು ಸಬ್ ಸ್ಟೇಷನ್ ಗೆ ನುಗ್ಗಿದ್ದು, ಇದರಂದಾಗಿ ವಿದ್ಯುದ್ದೀಕರಿಸಿದ ಸರ್ಕ್ಯೂಟ್ ನೊಂದಿಗೆ ಸಂಪರ್ಕ ಸಾಧಿಸಿದಾಗ ವಿದ್ಯುತ್ ಸಮಸ್ಯೆ ತಲೆದೋರಿತ್ತು ಎಂದು ವರದಿ ತಿಳಿಸಿದೆ.
ಸಾಕಷ್ಟು ಪರಿಶೀಲನೆಯ ನಂತರ ಹಾವನ್ನು ಪತ್ತೆಹಚ್ಚಿದ ಮೇಲೆ ಅಮೆರಿಕದ ಆಸ್ಟಿನ್ ನಗರದ ಜನತೆಗೆ ಮಧ್ಯಾಹ್ನ 2ಗಂಟೆಗೆ ಎಲ್ಲಾ ಗ್ರಾಹಕರಿಗೂ ವಿದ್ಯುತ್ ಸಂಪರ್ಕ ನೀಡಲಾಯ್ತು ಎಂದು ವರದಿ ಹೇಳಿದೆ.
ಇದು ವಿದ್ಯುತ್ ಗ್ರಿಡ್ ನಿಂದಾದ ಸಮಸ್ಯೆ ಅಲ್ಲ, ಕೇವಲ ಒಂದು ಹಾವಿನಿಂದಾಗಿ ಉಂಟಾದ ಸಮಸ್ಯೆಯಾಗಿದೆ ಎಂದು ಆಸ್ಟಿನ್ ಎನರ್ಜಿ ವಕ್ತಾರ ಮ್ಯಾಟ್ ಮಿಚೆಲ್ ಸಿಬಿಎಸ್ ನ್ಯೂಸ್ ಗೆ ತಿಳಿಸಿದ್ದಾರೆ.