Advertisement
ಹೀಗಾಗಿಯೇ, ಮನೆ ಮುಂದಿನ ಕೈದೋಟ ಇಲ್ಲವೇ ಮನೆಯೊಳಗೆ ಪಾಟ್‌ನಲ್ಲಿ ಬೆಳೆಸುವುದೇ ಆಗಿರಬಹುದು; ಅಲ್ಲೆಲ್ಲ, ಗಾಳಿ ಶುದ್ಧೀಕರಿಸುವ ಗಿಡಗಳನ್ನೇ ಬೆಳೆಸುತ್ತಾರೆ. ಅವುಗಳಲ್ಲೊಂದು “ಸ್ನೇಕ್ ಪ್ಲಾಂಟ್’. ಈ ಗಿಡದ ಎಲೆಗಳು ಉದ್ದುದ್ದಕ್ಕೆ ಹಾವಿನ ರೀತಿಯಲ್ಲಿ ಬೆಳೆಯುವುದರಿಂದ, ಇದಕ್ಕೆ ಸ್ನೇಕ್ ಪ್ಲಾಂಟ್ ಎಂಬ ಹೆಸರು ಬಂದಿದೆ. ಇದಕ್ಕೆ ಸಹಿಷ್ಣು ಎಂಬ ವಿಶೇಷಣವೂ ಇದೆ. ಏಕೆಂದರೆ, ನೀರಿಲ್ಲದೆಯೂ ಈ ಗಿಡ, ಹೆಚ್ಚು ಸಮಯ ತನ್ನ ಆರೋಗ್ಯ ಕಾಪಾಡಿಕೊಳ್ಳಬಲ್ಲುದು. ಹೀಗಾಗಿ, ಮನೆಯವರು ಮನೆಬಿಟ್ಟು ದೂರ ಹೋಗಬೇಕಾದ ಸಂದರ್ಭದಲ್ಲಿ ಚಿಂತಿತರಾಗಬೇಕಿಲ್ಲ. ಅಲ್ಲದೆ, ಇದು ಕಡಿಮೆ ಬೆಳಕಿನಲ್ಲೂ ಬೆಳೆಯಬಲ್ಲುದು. ಸ್ನೇಕ್ ಪ್ಲಾಂಟ್ ಗಾಳಿಯಲ್ಲಿನ ಫಾರ್ಮಾಲ್ಡಿಹೈಡ್, ಬೆಂಝೀನ್ ಮುಂತಾದ ಕಲ್ಮಶಗಳನ್ನು ಶುದ್ಧೀಕರಿಸುತ್ತದೆ ಎಂದು ಅಂತಾರಾಷ್ಟ್ರೀಯ ವಿಜ್ಞಾನ ಸಂಸ್ಥೆಗಳೇ ಖಚಿತ ಪಡಿಸಿವೆ. ಹೆಚ್ಚಿನ ಮಾಹಿತಿಗಾಗಿ: tinyurl.com/y8h5umml Advertisement
ಮಣ್ಣು ಹೊನ್ನು ಮೆಶಿನ್ನು: ಸ್ನೇಕ್ ಪ್ಲಾಂಟ್
01:53 PM May 04, 2020 | Suhan S |
Advertisement
Udayavani is now on Telegram. Click here to join our channel and stay updated with the latest news.