Advertisement

ನದಿಗೆಸೆದ ಪೂಜಾ ಸಾಮಗ್ರಿಯನ್ನು ಕಾದು ಕುಳಿತ ಸರ್ಪ!

03:16 PM Oct 18, 2022 | Team Udayavani |

ಗುತ್ತಿಗಾರು: ನದಿಯಲ್ಲಿ ಎಸೆದಿದ್ದ ಪೂಜಾ ಸಾಮಗ್ರಿಯ ಪಕ್ಕದಲ್ಲಿ ಕಾಳಿಂಗ ಸರ್ಪವೊಂದು ಕಾದು ಕುಳಿತ ಪ್ರಸಂಗ ನಾಲ್ಕೂರು ಗ್ರಾಮದ ಇಜಿನಡ್ಕದಲ್ಲಿ ನಡೆದಿದೆ.

Advertisement

ಇದನ್ನು ಗಮನಿಸಿದ ಸ್ಥಳೀಯರು ಪೂಜಾ ಸಾಮಗ್ರಿಯನ್ನು ಎತ್ತಿ ಕೊಂಡೊಯ್ದ ಬಳಿಕ ಕಾಳಿಂಗ ಸರ್ಪವೂ ಅಲ್ಲಿಂದ ತೆರಳಿದೆ ಎನ್ನಲಾಗಿದೆ.

ಕಾಲುದೀಪ, ಆರತಿ, ಘಂಟೆ, ಹರಿವಾಣ ಸಹಿತ ಹಳೆಯ ಪೂಜಾ ಸಾಮಗ್ರಿಗಳನ್ನು ಇಜಿನಡ್ಕ ಎಂಬಲ್ಲಿ ನದಿಯಲ್ಲಿ ಎಸೆದಿರುವುದನ್ನು ಅದೇ ದಾರಿಯಲ್ಲಿ ಬಂದವರು ನೋಡಿದ್ದರು. ಈ ವೇಳೆ ಪೂಜಾ ಸಾಮಗ್ರಿ ಇದ್ದ ಜಾಗದ ಸನಿಹದಲ್ಲೇ ಬೃಹತ್‌ ಗಾತ್ರದ ಕಾಳಿಂಗ ಸರ್ಪವೊಂದನ್ನೂ ಅವರು ಗಮನಿಸಿದ್ದಾರೆ. ಅವರು ಇತರರಿಗೆ ಮಾಹಿತಿ ನೀಡಿದ್ದು, ಇದನ್ನು ವೀಕ್ಷಿಸಲು ಹಲವಾರು ಜನರು ಸ್ಥಳಕ್ಕಾಗಮಿಸಿದ್ದರು. ಈ ಪೂಜಾ ಸಾಮಗ್ರಿಯನ್ನು ಯಾರು ಎಸೆದಿದ್ದರು ಎಂಬುದು ತಿಳಿದು ಬಂದಿರಲಿಲ್ಲ. ಹೀಗಾಗಿ ಪಕ್ಕದಲ್ಲೇ ಇರುವ ಚಾರ್ಮತ ನಾಗನ ಸನ್ನಿಧಿಯಲ್ಲಿ ಸ್ಥಳೀಯರು ಸೇರಿ ಪ್ರಾರ್ಥನೆ ನೆರವೇರಿಸಿ ಪೂಜಾ ಸಾಮಗ್ರಿ ಎಸೆದವರ ಕುರಿತು ಗೊತ್ತಾಗಬೇಕು ಎಂದು ದೇವರ ಮೊರೆ ಹೋದರು.

ಈ ವಿಚಾರ ತಿಳಿದ ರಾಮಣ್ಣ ಎಂಬವರು ಸ್ಥಳಕ್ಕಾಗಮಿಸಿ ಪೂಜಾ ಪರಿಕರಗಳನ್ನು ತಾನೇ ನದಿಗೆ ಎಸೆದಿರುವುದಾಗಿ ಹೇಳಿಕೊಂಡರು ಅದಕ್ಕೆ ಕಾರಣವನ್ನೂ ಕೊಟ್ಟರು. ಬಳಿಕ ಜನರು ನದಿಯಿಂದ ಎತ್ತಿ ದಡಕ್ಕೆ ತಂದಿದ್ದ ಪೂಜಾ ಸಾಮಗ್ರಿಗಳನ್ನು ರಾಮಣ್ಣ ಅವರು ಮರಳಿ ಮನೆಗೆ ಕೊಂಡೊಯ್ದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next