Advertisement

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

08:04 PM Apr 28, 2024 | Team Udayavani |

ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರಿಂದ 54.3 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಏಪ್ರಿಲ್ 27 ರಂದು ಜಪ್ತಿ ಮಾಡಿದ್ದಾರೆ.

Advertisement

ಶನಿವಾರ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಸೌದಿ ಅರೇಬಿಯಾದ ದಮ್ಮಾಮ್‌ನಿಂದ ಆಗಮಿಸಿದ ಪ್ರಯಾಣಿಕನನ್ನು ಸ್ಪಾಟ್ ಪ್ರೊಫೈಲಿಂಗ್ ಮತ್ತು ಅನುಮಾನಾಸ್ಪದ ಚಲನವಲನದ ಆಧಾರದ ಮೇಲೆ ಪ್ರಶ್ನಿಸಿದಾಗ ಚಿನ್ನ ಪತ್ತೆಯಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಮೂಲದ ಪ್ರಯಾಣಿಕ ತನ್ನ ಗುದನಾಳದಲ್ಲಿ 825 ಗ್ರಾಂ ತೂಕದ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಮೂರು ಅಂಡಾಕಾರದ ವಸ್ತುಗಳಲ್ಲಿ ಬಚ್ಚಿಟ್ಟಿರುವುದು ಕಂಡುಬಂದಿದೆ. ಹೊರತೆಗೆದ ಬಳಿಕ ಪ್ರಕ್ರಿಯೆಗಳನ್ನು ನಡೆಸಿದ ಬಳಿಕ ನಿವ್ವಳ 750 ಗ್ರಾಂ ತೂಕದ 24 ಕ್ಯಾರೆಟ್ ಶುದ್ಧತೆಯ ಚಿನ್ನ 54 ಲಕ್ಷದ 30 ಸಾವಿರ ರೂ. ಮೌಲ್ಯದ್ದು ದೊರಕಿದೆ ಎಂದು ಅಧಿಕಾರಿಗಳು ಎಕ್ಸ್ ನಲ್ಲಿ ಪ್ರಕಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next