ಅಮೇಠಿ: 2019ರ ಚುನಾವಣೆಯಲ್ಲಿ ರಾಹುಲ್ ಗಾಂಧಿಗೆ ಸೋಲುಣಿಸಿದ್ದ ಸ್ಮೃತಿ ಇರಾನಿ ಈಗ ಅಮೇಠಿಯಲ್ಲಿ ಕಾಂಗ್ರೆಸ್ ನಾಯಕನಿಗೆ ಮತ್ತೂಂದು ಮುಜುಗರ ಸೃಷ್ಟಿಸಿದ್ದಾರೆ. ಅಮೇಠಿಯಲ್ಲಿ ಸ್ವಂತ ಮನೆ ನಿರ್ಮಿಸಲು ಸ್ಮೃತಿ ನಿವೇಶನ ಖರೀದಿಸಿದ್ದಾರೆ.
“ಈ ಹಿಂದೆ ಆಯ್ಕೆಯಾದ ಯಾವ ಸಂಸದರೂ ಅಮೇಠಿಯಲ್ಲಿ ಮನೆ ನಿರ್ಮಿಸಿಲ್ಲ. ಹೊರಗಿನಿಂದ ಬಂದು ಇಲ್ಲಿ ಓಡಾಡುತ್ತಿದ್ದರಷ್ಟೇ. ನಾನು ಇಲ್ಲಿ ಮನೆ ನಿರ್ಮಿಸಿದರೆ, ಖಂಡಿತಾ ಅಮೇಠಿ ಜನ ಅಚ್ಚರಿಗಣ್ಣಿಂದ ನೋಡುತ್ತಾರೆ’ ಎಂದು ರಾಹುಲ್ ಹೆಸರೆತ್ತದೆ ಸ್ಮತಿ ಟಾಂಗ್ ಕೊಟ್ಟಿದ್ದಾರೆ.
“2019ರ ಚುನಾವಣಾ ಪ್ರಚಾರದ ವೇಳೆ ಇಲ್ಲಿ ಮನೆ ಕಟ್ಟಿ, ಇಲ್ಲಿಂದಲೇ ಸಂಸದೀಯ ಕೆಲಸ ಮಾಡುತ್ತೇನೆ ಎಂದು ಕ್ಷೇತ್ರದ ಜನತೆಗೆ ಭರವಸೆ ನೀಡಿದ್ದೆ. ಗೃಹ ಪ್ರವೇಶಕ್ಕೆ ಕ್ಷೇತ್ರದ ಎಲ್ಲ ಜನರಿಗೂ ಆಹ್ವಾನ ನೀಡುವೆ’ ಎಂದಿದ್ದಾರೆ.
ಇದನ್ನೂ ಓದಿ:ರವಿ ಪೂಜಾರಿ 15 ದಿನ ಮುಂಬಯಿ ಪೊಲೀಸರ ವಶಕ್ಕೆ
ಅಮೇಠಿಯ ಗೌರಿಗಂಜ್ ನ ಮೇಡನ್ ಮವಾಯಿ ಪ್ರದೇಶದಲ್ಲಿ ಕೇಂದ್ರ ಸಚಿವೆ 12 ಲಕ್ಷ ರೂ. ವೆಚ್ಚದಲ್ಲಿ ನಿವೇಶನ ಖರೀದಿಸಿದ್ದು, ಸೋಮವಾರ ನೋಂದಣಿ ಮಾಡಿಕೊಂಡಿದ್ದಾರೆ. ಈಗ ಅವರು ಅಮೇಠಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.