Advertisement
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸುವ ನಿರ್ಧಾರದಲ್ಲಿ ಇಂಗ್ಲೆಂಡ್ ಅಷ್ಟೇನೂ ಯಶಸ್ಸು ಕಾಣಲಿಲ್ಲ. 6 ವಿಕೆಟಿಗೆ 142 ರನ್ ಗಳಿಸಿ ಸವಾಲೊಡ್ಡಿತು. ಭಾರತ 16.4 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 146 ರನ್ ಬಾರಿಸಿ ಗೆದ್ದು ಬಂದಿತು.
ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ ಮಿಂಚಿನ ಬ್ಯಾಟಿಂಗ್ ಮೂಲಕ ಅಜೇಯ 79 ರನ್ ಬಾರಿಸಿದರು. 53 ಎಸೆತಗಳ ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್‌ನಲ್ಲಿ 13 ಬೌಂಡರಿ ಒಳಗೊಂಡಿತ್ತು. ಶಫಾಲಿ ವರ್ಮ ಕೂಡ ಬಿರುಸಿನ ಆಟಕ್ಕಿಳಿದರು. 17 ಎಸೆತಗಳಿಂದ 20 ರನ್ ಹೊಡೆದರು (4 ಬೌಂಡರಿ). ಭರ್ತಿ 6 ಓವರ್ ನಿಭಾಯಿಸಿದ ಇವರು 55 ರನ್ ಒಟ್ಟುಗೂಡಿಸಿ ಭದ್ರ ಬುನಾದಿ ನಿರ್ಮಿಸಿದರು.
Related Articles
Advertisement
ಫ್ರೆಯಾ ಕೆಂಪ್ ಅಬ್ಬರಭಾರತದ ನಿಖರ ಬೌಲಿಂಗ್ ದಾಳಿಗೆ ಸಿಲುಕಿದ ಇಂಗ್ಲೆಂಡ್‌ಗೆ ಬಿರುಸಿನ ಬ್ಯಾಟಿಂಗ್ ಸಾಧ್ಯವಾಗಲಿಲ್ಲ. 3 ಓವರ್‌ಗಳಲ್ಲಿ 16ಕ್ಕೆ 3 ವಿಕೆಟ್, 10 ಓವರ್ ಒಳಗೆ 54 ರನ್ನಿಗೆ 5 ವಿಕೆಟ್ ಉದುರಿ ಹೋಗಿತ್ತು. ಆರಂಭದಲ್ಲಿ ದೀಪ್ತಿ ಶರ್ಮ, ರೇಣುಕಾ ಸಿಂಗ್ ಘಾತಕವಾಗಿ ಪರಿಣಮಿಸಿದರು. ಬಳಿಕ ಸ್ನೇಹ್ ರಾಣಾ ಬೌಲಿಂಗ್ ಆಕ್ರಮಣ ತೀವ್ರಗೊಂಡಿತು. ಫೀಲ್ಡಿಂಗ್ ಕೂಡ ಉತ್ತಮ ಮಟ್ಟದಲ್ಲಿತ್ತು. ಇನ್ನೇನು ಇಂಗ್ಲೆಂಡ್ ಸಣ್ಣ ಮೊತ್ತಕ್ಕೆ ಕುಸಿಯುತ್ತದೆ ಎನ್ನುವಾಗ 17 ವರ್ಷದ ಕಿರಿಯ ಆಟಗಾರ್ತಿ ಫ್ರೆàಯಾ ಕೆಂಪ್ ಸಿಡಿದು ನಿಂತರು. 7ನೇ ಕ್ರಮಾಂಕದಲ್ಲಿ ಆಡಲಿಳಿದ ಅವರು 37 ಎಸೆತಗಳಿಂದ 3 ಬೌಂಡರಿ, 3 ಸಿಕ್ಸರ್ ನೆರವಿನಿಂದ ಅಜೇಯ 51 ರನ್ ಬಾರಿಸಿದರು. ಈ ಪಂದ್ಯದಲ್ಲಿ ಕೆಂಪ್ ಹೊರತುಪಡಿಸಿ ಬೇರೆ ಯಾರಿಂದಲೂ ಸಿಕ್ಸರ್ ಬಾರಿಸಲು ಸಾಧ್ಯವಾಗಲಿಲ್ಲ. ಮೇಯಾ ಬೌಷೀರ್-ಫ್ರೆಯಾ ಕೆಂಪ್ 6ನೇ ವಿಕೆಟಿಗೆ 65 ರನ್ ಪೇರಿಸಿ ಮೊತ್ತವನ್ನು 140ರ ಗಡಿ ದಾಟಿಸಿದರು. ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್-6 ವಿಕೆಟಿಗೆ 142 (ಫ್ರೆಯಾ ಕೆಂಪ್ ಔಟಾಗದೆ 51, ಮೇಯಾ ಬೌಷಿರ್ 34, ಆ್ಯಮಿ ಜೋನ್ಸ್ 17, ಸ್ನೇಹ್ ರಾಣಾ 24ಕ್ಕೆ 3, ದೀಪ್ತಿ ಶರ್ಮ 24ಕ್ಕೆ 1, ರೇಣುಕಾ ಸಿಂಗ್ 30ಕ್ಕೆ 1). ಭಾರತ-16.4 ಓವರ್‌ಗಳಲ್ಲಿ 2 ವಿಕೆಟಿಗೆ 146 (ಸ್ಮತಿ ಮಂಧನಾ ಔಟಾಗದೆ 79, ಹರ್ಮನ್‌ಪ್ರೀತ್ ಕೌರ್ ಔಟಾಗದೆ 29, ಶಫಾಲಿ ವರ್ಮ 20, ಸೋಫಿ 22ಕ್ಕೆ 1, ಫ್ರೆಯಾ ಡೇವಿಸ್ 30ಕ್ಕೆ 1). ಪಂದ್ಯಶ್ರೇಷ್ಠ: ಸ್ಮತಿ ಮಂಧನಾ.