ಹೊಸದಿಲ್ಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಪುತ್ರಿ ಶಾನೆಲ್ ಅವರ ನಿಶ್ಚಿತಾರ್ಥವು ಅರ್ಜುನ್ ಭಲ್ಲಾ ಜೊತೆಯಲ್ಲಿ ನಡೆದಿದೆ. ಸ್ಮೃತಿ ಇರಾನಿ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಜೋಡಿಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ತಮ್ಮ ಮಗಳು ಮತ್ತು ಭಾವಿ ಅಳಿಯನ ಸುಂದರ ಚಿತ್ರಗಳನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ:ಸುಧಾರಿಸಿದೆ ಉ.ಪ್ರ.ಆಡಳಿತ: ಉತ್ತಮ ಆಡಳಿತ ಸೂಚ್ಯಂಕ 2021 ವರದಿಯಲ್ಲಿ ಉಲ್ಲೇಖ
ಮೊದಲ ಫೋಟೋದಲ್ಲಿ ಅರ್ಜುನ್ ಅವರು ಶಾನೆಲ್ಗೆ ಪ್ರಪೋಸ್ ಮಾಡುತ್ತಿರುವುದನ್ನು ನೋಡಬಹುದು. ಹಾಗೇ ಎರಡನೇ ಫೋಟೋ, ಇವರಿಬ್ಬರೂ ಪ್ರೀತಿಯಿಂದ ಮುಖಕ್ಕೆ-ಮುಖ ತಾಗಿಸಿ ನಗುತ್ತ ನಿಂತಿರುವುದನ್ನು ನೋಡಬಹುದು. ಅರ್ಜುನ್ ಭಲ್ಲಾ ನಮ್ಮ ಹೃದಯವನ್ನು ಗೆದ್ದ ವ್ಯಕ್ತಿ. ಅವರಿಗೆ ನಮ್ಮ ಕ್ರೇಜಿ ಕುಟುಂಬಕ್ಕೆ ಸ್ವಾಗತ. ಹಾಗೇ, ನೀವು ಇನ್ನು ಮುಂದೆ ನಮ್ಮ ಹುಚ್ಚುತನವನ್ನೆಲ್ಲ ಸಹಿಸಿಕೊಳ್ಳಬೇಕು ಎಂದು ಅರ್ಜುನ್ಗೆ ಪ್ರೀತಿಯಿಂದ ಎಚ್ಚರಿಕೆಯನ್ನೂ ನೀಡಿದ್ದಾರೆ. ಹಾಗೇ, ದೇವರು ಒಳ್ಳೆಯದು ಮಾಡಲಿ ಎಂದು ಕೇಂದ್ರ ಸಚಿವೆ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಶಾನೆಲ್ ಅವರು ಸ್ಮೃತಿ ಇರಾನಿಯವರ ಸ್ವಂತ ಮಗಳಲ್ಲ. ಪತಿ ಜುಬಿನ್ ಇರಾನಿ ಅವರ ಮೊದಲ ಪತ್ನಿಯ ಮಗಳು. ಆದರೆ ಸ್ಮೃತಿ ಇರಾನಿ ಅವರು ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸ್ಮೃತಿ ಇರಾನಿ ಅವರಿಗೆ ಜೋಹರ್ ಎಂಬ ಮಗ ಮತ್ತು ಜೋಯಿಶ್ ಎಂಬ ಇಬ್ಬರು ಮಕ್ಕಳಿದ್ದಾರೆ.