ಬೆಂಗಳೂರು: ಕೆಪಿಸಿಸಿ ಪದಾಧಿಕಾರಿಗಳನ್ನು ವಿಸರ್ಜನೆ ಮಾಡಿ ಅಧ್ಯಕ್ಷರು, ಕಾರ್ಯಾಧ್ಯಕ್ಷರು, ರಾಜ್ಯ ಉಸ್ತುವಾರಿ ಪ್ರಧಾನ ಕಾರ್ಯ ದರ್ಶಿ ಹಾಗೂ ಐವರು ಉಸ್ತುವಾರಿ ಕಾರ್ಯದರ್ಶಿಗಳನ್ನು ಮುಂದು ವರಿಸಿರುವ ಬಗ್ಗೆ ಕಾಂಗ್ರೆಸ್‌ನಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ.
ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಯಾರು ಕಾರಣರು ಎನ್ನುವ ಬಗ್ಗೆ ನಾಯಕರಲ್ಲಿ ಸ್ಪಷ್ಟತೆ ಯಿಲ್ಲ. ಅದಕ್ಕಾಗಿ ಕೆಪಿಸಿಸಿ ನೇಮಿಸಿರುವ ಸತ್ಯ ಶೋಧನಾ ಸಮಿತಿ ಕೂಡ ಜಿಲ್ಲೆಗಳಿಗೆ ಭೇಟಿ ನೀಡಿ ವರದಿ ನೀಡಿಲ್ಲ. ಈ ಸಂದರ್ಭದಲ್ಲಿ ಬೇಕಾಬಿಟ್ಟಿಯಾಗಿ ವಿಸರ್ಜನೆ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆ ಕಾಂಗ್ರೆಸ್ ಪಾಳಯದಲ್ಲಿ ಕೇಳಿ ಬರುತ್ತಿದೆ.
ಕೆಪಿಸಿಸಿ ಅಧ್ಯಕ್ಷರು ಹಾಗೂ ಶಾಸ ಕಾಂಗ ಪಕ್ಷದ ನಾಯಕರ ನೇತೃತ್ವ ದಲ್ಲಿಯೇ ಚುನಾವಣೆ ಎದುರಿಸ ಲಾಗಿದೆ. ಚುನಾವಣೆ ಸೋಲಿಗೆ ಪದಾ ಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ ಎಂದು ಶಾಸ ಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೈಕ ಮಾಂಡ್ ಮುಂದೆ ಕಾರಣ ನೀಡಿ ಪದಾಧಿಕಾರಿ ಗಳನ್ನು ವಿಸರ್ಜನೆ ಮಾಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಅದರಲ್ಲಿ ಕೆಪಿಸಿಸಿ ಅಧ್ಯಕ್ಷರು, ಕಾರ್ಯಾಧ್ಯಕ್ಷರು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣು ಗೋಪಾಲ್, ಉಸ್ತುವಾರಿ ಕಾರ್ಯದರ್ಶಿಗಳಾದ ಸಾಕೇ ಶೈಲಜನಾಥ್, ವಿಷ್ಣುನಾಥನ್, ಮಧು ಯಕ್ಸಿಗೌಡ, ಯಶೋಮತಿ ಠಾಕೂರ್ ಹಾಗೂ ಮಾಣಿಕ್ಯಂ ಠಾಕೂರ್ ಕೂಡ ಜವಾಬ್ದಾರರಾಗುತ್ತಾರೆ. ಈ ಎಲ್ಲ ನಾಯಕರ ಉಸ್ತುವಾರಿಯಲ್ಲಿಯೇ ಚುನಾವಣೆ ಎದುರಿಸಿರುವುದರಿಂದ ಸೋಲಿಗೆ ಅವರೂ ಪ್ರಮುಖ ಕಾರಣರಾಗುತ್ತಾರೆ.
ಅವರಿಗೆ ಯಾವುದೇ ರೀತಿಯ ಶಿಕ್ಷೆ ನೀಡದೇ ಮೇಲಿನ ನಾಯಕರು ಆದೇಶ ಮಾಡಿದಂತೆ ಕೆಲಸ ಮಾಡುವ ಪದಾಧಿಕಾರಿಗಳನ್ನು ವಿಸರ್ಜನೆ ಮಾಡುವ ಮೂಲಕ ನಾಯಕರು ಕೆಳ ಹಂತದ ಕಾರ್ಯಕರ್ತರಿಗೆ ಅವಮಾನ ಮಾಡಿದ್ದಾರೆ ಎಂಬ ಮಾತುಗಳು ಪದಾಧಿಕಾರಿಗಳ ವಲಯದಲ್ಲಿ ಕೇಳಿ ಬರುತ್ತಿದೆ. ಚುನಾವಣೆಯಲ್ಲಿ ಕೆಲಸ ಮಾಡದ ಪದಾಧಿಕಾರಿಗಳನ್ನು ಪತ್ತೆ ಹಚ್ಚಿ ಅವರನ್ನು ಬದಲಾಯಿಸಿದ್ದರೆ, ಸಕ್ರಿಯವಾಗಿ ಕೆಲಸ ಮಾಡಿದವರಿಗೆ ಮರ್ಯಾದೆ ಸಿಕ್ಕಂತಾಗುತ್ತಿತ್ತು. ಪದಾಧಿಕಾರಿಗಳನ್ನು ಕೈ ಬಿಡಲು ಯಾವುದೇ ಮಾನದಂಡ ಅನುಸರಿಸದೇ ತೀರ್ಮಾನ ಕೈಗೊಂಡಿರುವುದು ಆಂತರಿಕ ಬೇಗುದಿ ಹೆಚ್ಚಾಗಲು ಕಾರಣವಾಗಿದೆ ಎಂದು ತಿಳಿದು ಬಂದಿದೆ.
ವಿಶೇಷವಾಗಿ ಡಾ.ಜಿ. ಪರಮೇಶ್ವರ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನೇಮಕಗೊಂಡಿ ದ್ದರಿಂದ ಅವರನ್ನು ಟಾರ್ಗೆಟ್ ಮಾಡಿ ಕಿತ್ತು ಹಾಕಿ, ತಮಗೆ ಬೇಕಾದವರನ್ನು ಸೇರಿಸಿಕೊಳ್ಳಲು ಸಿದ್ದರಾಮಯ್ಯ ಮಾಡಿರುವ ತಂತ್ರ ಇದಾಗಿದ್ದು, ಇದು ಪದಾಧಿಕಾರಿಗಳನ್ನು ಇಬ್ಟಾಗ ಮಾಡಿದಂತಾ ಗಿದೆ ಎಂಬುದು ಅಸಮಾಧಾನಿತರ ವಾದ.
-ಶಂಕರ ಪಾಗೋಜಿ