ಸುರತ್ಕಲ್: ಹೊಸಬೆಟ್ಟು ವೆಟ್ ವೆಲ್ ಸೋರಿಕೆಯಿಂದ ಮಳೆ ನೀರು ಹರಿಯುವ ತೋಡಿನಲ್ಲಿ ಮ.ನ.ಪಾದ ವೆಟ್‌ವೆಲ್ ನಂಬರ್ .4 (ರೇಚಕ ಸ್ಥಾವರ) ದಿಂದ ತ್ಯಾಜ್ಯ ಹರಿಯುತ್ತಿದ್ದು ಬಾವಿ ನೀರು ಕಲುಷಿತಗೊಂಡಿದ್ದು ಮಾತ್ರವಲ್ಲ ಬಾವಿ ನೀರು ಕಲುಷಿತವಾಗಿದೆ.
ಹೊಸಬೆಟ್ಟು ನವಗಿರಿ ಕಲ್ಯಾಣ ಮಂಟಪದ ಸಮೀಪದಿಂದ ಹೊನ್ನಕಟ್ಟೆಯಾಗಿ ಸಮುದ್ರ ಸೇರುವ ಮಳೆ ನೀರು ಹರಿಯಲು ಅಗಲವಾದ ತೋಡಿದೆ. ಆ ತೋಡಿನಲ್ಲಿ ಮಳೆನೀರು ಮಾತ್ರ ಹರಿಯುತ್ತಿದ್ದು, ಬೇಸಿಗೆಯ ಕಾಲದಲ್ಲಿ ಸಂಪೂರ್ಣ ಬರಿದಾಗಿರುತ್ತದೆ.
ಇದೀಗ ಆ ತೋಡಿನಲ್ಲಿ ಮನಪಾದ ವೆಟ್ ವೆಲ್ ನಂಬರ್.4 (ರೇಚಕ ಸ್ಥಾವರ) ದಿಂದ ತ್ಯಾಜ್ಯವನ್ನು ಹರಿಯ ಬಿಡಲಾಗಿದ್ದು , ಸುತ್ತೆಲ್ಲಾ ಗಬ್ಬು ನಾರುತ್ತಿದೆ. ಇದರಿಂದಾಗಿ ನವಗಿರಿ ಕಲ್ಯಾಣ ಮಂಟಪದಿಂದ ಹೊನ್ನಕಟ್ಟೆ ವರೆಗಿನ 2 ಕಿ.ಮೀ ದೂರ ವ್ಯಾಪ್ತಿಯಲ್ಲಿ ಸುಮಾರು150 ಮನೆಗಳಿದ್ದು ಎಲ್ಲರೂ ಸಂಕಷ್ಟಕ್ಕೀಡಾಗಿದ್ದಾರೆ. ತೀವ್ರ ವಾಸನೆಯಿಂದ ಇಲ್ಲಿ ಜೀವನ ಮಾಡುವುದು ಕಷ್ಟವಾಗಿದೆ.
ವಾಯು ಮಾಲಿನ್ಯ ಉಂಟಾಗಿ ಉಸಿರಾಡಲು ತೊಂದರೆಯಾಗಿದೆ. ಇಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದೆ. ಬಾವಿಯ ನೀರು ಕೂಡಾ ಹಾಳಾಗಿ ಕುಡಿಯಲು ಅಯೋಗ್ಯವಾಗಿದೆ. ಆದುದರಿಂದ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳ ಬೇಕು ಎಂದು ಸ್ಥಳೀಯರು ಪಾಲಿಕೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.