Advertisement

ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್‌ ವಿತರಣೆ

05:31 PM Nov 08, 2020 | Suhan S |

ಚನ್ನಪಟ್ಟಣ: ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ ನೀಡುತ್ತಿರುವ ಸ್ಮಾರ್ಟ್‌ಫೋನ್‌ ಸದ್ಬಳಕೆ ಯಾಗಬೇಕೆಂದು ಶಿಶು ಅಭಿವೃದ್ದಿ ಯೋಜನಾಧಿಕಾರಿ ಸಿದ್ದಲಿಂಗಯ್ಯ ತಿಳಿಸಿದರು.

Advertisement

ತಾಲೂಕು ಪಂಚಾಯ್ತಿ ಕಚೇರಿಯ ಬಳಿಯಿರುವಸ್ತ್ರೀಶಕ್ತಿ ಭವನದಲ್ಲಿ ಆಯೋಜಿಸಲಾಗಿದ್ದ ಅಂಗನವಾಡಿ ಕಾರ್ಯಕರ್ತೆಯಲ್ಲಿ ಸ್ಮಾರ್ಟ್‌ಫೋನ್‌ ವಿತರಣೆ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿ ಅವರು ಮಾತನಾಡಿದರು. ತಮ್ಮ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಸ್ಮಾರ್ಟ್‌ಫೋನ್‌ ನಿಮ್ಮ ಸಹಾಯಕ್ಕೆ ಬರಲಿದೆ. ಸ್ಮಾರ್ಟ್‌ಪೋನ್‌ನಲ್ಲಿ ಇಲಾಖೆಯ ಪ್ರತಿಯೊಂದು ತತ್ರಾಂಶಗಳನ್ನು ಅಳವಡಿಸಲಾಗಿದೆ. ಕ್ಷಣದಲ್ಲಿ ನಿಮ್ಮ ವ್ಯಾಪ್ತಿಯ ಯಾವುದೇ ಮಾಹಿತಿಯನ್ನು ತೆಗೆಯಲು ಸಹಕಾರಿಯಾಗಿದೆ. ಅಲ್ಲದೆ ಅಧಿಕಾರಿಗಳು ಯಾವುದೇ ಮಾಹಿತಿಯನ್ನು ಕೇಳಿದಾಗ ಸಂಬಂಧಿಸಿದ ಮಾಹಿತಿಯನ್ನು ನೀಡಬಹುದಾಗಿದೆ ಎಂದು ತಿಳಿಸಿದರು.

ಸ್ಮಾರ್ಟ್‌ಫೋನ್‌ ಜೊತೆ ಪವರ್‌ಬ್ಯಾಂಕ್‌ ಪೌಚ್‌, ಸ್ಕ್ರೀನ್‌ಗಾರ್ಡ್‌, ಇಯರ್‌ಫೋನ್‌ ನೀಡಿದ ಅವರು, ಇ.ಐ.ಎಲ್‌ ತರಬೇತಿ ಬಗ್ಗೆ ಹಲವಾರು ಮಾಹಿತಿಯನ್ನುನೀಡಿದರು. ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಶಿಕ್ಷಣ ಸಂಯೋಜಕ ಚಕ್ಕೆರೆ ಯೋಗೇಶ್‌ ಮಾತನಾಡಿ, ನಿತ್ಯ 24 ತಾಸು ಕೂಡ ಸಾರ್ವಜನಿಕ ಸೇವೆಯಲ್ಲಿರುವ ಶಿಶು ವಿಹಾರದಲ್ಲಿ ಕರ್ತವ್ಯ ನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ ಸ್ಮಾರ್ಟ್‌ಫೋನ್‌ ನೀಡುತ್ತಿರುವುದು ಆರೋಗ್ಯಕರ ಬೆಳವಣಿಗೆ ಎಂದರು. ಇಲಾಖೆ ಮೇಲ್ವಿಚಾರಕಿ ಲೀಲಾವತಿ ಸೇರಿದಂತೆ ಹಲವಾರು ಮಂದಿ ಹಾಜರಿದ್ದರು.

ದಿನಸಿ ಕಿಟ್‌ ನೀಡುವುದು ಶ್ಲಾಘನೀಯ: ನಾಗೇಶ್‌ :

ಚನ್ನಪಟ್ಟಣ: ಮನುಕುಲಕ್ಕೆ ಮಾರಣಾಂತಿಕವಾಗಿರುವ ಕೋವಿಡ್  ಸಮಾಜದ ಎಲ್ಲಾ ವರ್ಗದವರಿಗೂ ಸಂಕಷ್ಟ ತಂದೊಡ್ಡಿದ್ದು, ಈ ಸಮಯದಲ್ಲಿ ಸಂಘ ಸಂಸ್ಥೆಗಳು ಬಡವರಿಗೆ ನೆರವಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ತಹಶೀಲ್ದಾರ್‌ ನಾಗೇಶ್‌ ಹೇಳಿದರು.

Advertisement

ತಾಲೂಕಿನ ದೇವರಹಳ್ಳಿ ಶ್ರೀ ಶಿರಡಿಸಾಯಿಬಾಬಾ ವೃದ್ಧಾಶ್ರಮದಲ್ಲಿ ನವ್ಯ ಫೌಂಡೇಷನ್‌ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಫಿನೋಲೆಕ್ಸ್‌ ಪೈಪ್ಸ್‌ ಹಾಗೂ ಅದರ ಸಿಎಸ್‌ಆರ್‌ ಪಾಲುದಾರ ಸಂಸ್ಥೆಯಾದ ಮುಕುಲ್‌ ಮಾಧವ್‌ ಫೌಂಡೇಷನ್‌ನಿಂದ ನೀಡಲಾದ ದಿನಸಿ ಕಿಟ್‌ ವಿತರಣೆ ಮಾಡಿ ಮಾತನಾಡಿದರು.

ಕೋವಿಡ್ ದಿಂದಾಗಿ ಕೆಲಸವಿಲ್ಲದೆ ಸಾವಿರಾರು ಮಂದಿ ಕುಟುಂಬ ನಿರ್ವಹಣೆಗೆ ಪರಿತಪಿಸುತ್ತಿದ್ದಾರೆ. ಕಷ್ಟದ ಪರಿಸ್ಥಿತಿಯಲ್ಲಿ

ಬಿಪಿಎಲ್‌ ಕುಟುಂಬಗಳಿಗೆ ದಿನಸಿ ಪದಾರ್ಥ

ನೀಡುವ ಮೂಲಕ ನೆರವಾಗುತ್ತಿದ್ದಾರೆ. ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು. ನವ್ಯ ಫೌಂಡೇಷನ್‌ ಅಧ್ಯಕ್ಷೆ ಆರ್‌.

ನವ್ಯಶ್ರೀ ಮಾತನಾಡಿ, ಕೋವಿಡ್ ತಂದೊಡ್ಡಿರುವ ಕಷ್ಟಕಾಲದಲ್ಲಿ ಸಾಲು ಸಾಲು ಹಬ್ಬಗಳು ಎದುರಾಗಿವೆ. ಮೊದಲೇ ಕಷ್ಟದಲ್ಲಿರುವಕುಟುಂಬಕ್ಕೆ ಇದರಿಂದ ದಿಕ್ಕು ತೋಚದಂತಾಗಿದೆ. ಇದನ್ನು ಮನಗಂಡು ಬಡವರಿಗೆ ಆಹಾರ ಪದಾರ್ಥ ನೀಡಲಾಗುತ್ತಿದೆ ಎಂದು ಹೇಳಿದರು.

ಫಿನೋಲೆಕ್ಸ್‌ ಇಂಡಸ್ಟ್ರೀಸ್‌ ಹಿರಿಯ ಕಾರ್ಯನಿರ್ವಾಹಕ ಮಹಾಂತೇಶ್‌ ಕುಮಾರ್‌, “ಗೀವ್‌ ವಿತ್‌ ಡಿಗ್ನಿಟಿ’ ಎಂಬ ಕಾರ್ಯಕ್ರಮದಡಿ ದೇಶದಾದ್ಯಂತ ಸುಮಾರು 70 ಸಾವಿರ ಆಹಾರ ಪದಾರ್ಥ ಗಳಕಿಟ್‌ ವಿತರಣೆ ಮಾಡುತ್ತಿದೆ ಎಂದರು.

ಎಂ.ಕೆ.ದೊಡ್ಡಿ ಠಾಣೆ ಪಿಎಸ್‌ಐ ಸದಾನಂದ ಮಾತನಾಡಿ, ಕೋವಿಡ್ ನಿರ್ಲಕ್ಷ್ಯ ಮಾಡಿದರೆ ಇಡೀ ಕುಟುಂಬ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಸಲಹೆ ನೀಡಿದರು. ಈ ವೇಳೆ ಗಣ್ಯರನ್ನು ಸನ್ಮಾನಿಸಲಾಯಿತು. ಸಾಂಕೇತಿಕವಾಗಿ ತಹಶೀಲ್ದಾರ್‌ ಕಿಟ್‌ ವಿತರಣೆ ಮಾಡಲಾಯಿತು. ಉದ್ಯಮಿಗಳಾದ ಬಿ.ಎಚ್‌. ಮಂಜುನಾಥ್‌, ಬಿ.ವಿ.ಹನುಮಂತರಾವ್‌, ಸಮಾಜ ಸೇವಕ ಡಿ.ಕೆ.ಧರಣೀಶ್‌, ಸಾಯಿಬಾಬಾ ಆಶ್ರಮದ ಮುಖ್ಯಸ್ಥ ಹರೀಶ್‌ ಹೆಗ್ಗಡೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next