Advertisement

BOULT ನಿಂದ ಸ್ಮಾರ್ಟ್ ವಾಚ್ ಮತ್ತು ಇಯರ್ ಬಡ್ ಬಿಡುಗಡೆ

10:07 PM Sep 07, 2023 | Team Udayavani |

ಹೊಸದಿಲ್ಲಿ: ಭಾರತದ ಸ್ವದೇಶಿ ಬ್ರಾಂಡ್ ಆದ ಬೌಲ್ಟ್ ಹೊಸ ಸ್ಮಾರ್ಟ್ ವಾಚ್ ಮತ್ತು ಟ್ರೂ ವೈರ್ ಲೆಸ್ ಇಯರ್ ಬಡ್ ಗಳನ್ನು ಬಿಡುಗಡೆ ಮಾಡಿದೆ. Sterling Pro Smartwatch ಮತ್ತು Astra, ಗೇಮಿಂಗ್ BT ವೈರ್ಲೆಸ್ ಇಯರ್ಬಡ್ಗಳನ್ನು ಇದೀಗ ಹೊರತಂದಿದೆ.

Advertisement

ಹೊಸ BOULT ಸ್ಟರ್ಲಿಂಗ್ ಪ್ರೊ ಸ್ಮಾರ್ಟ್ವಾಚ್ 1.43-ಇಂಚಿನ AMOLED HD ಪರದೆ, 466×466 ಪಿಕ್ಸೆಲ್ಗಳ ರೆಸಲ್ಯೂಶನ್ನೊಂದಿಗೆ ಹೊಂದಿದೆ, ಇದು 800 nits ಹೊಳಪು ನೀಡುತ್ತದೆ. ಪ್ರೀಮಿಯಂ ಸ್ಟೇನ್ಲೆಸ್ ಸ್ಟೀಲ್ ನ ವಾಚ್ ಕಪ್ಪು ಮತ್ತು ಬೆಳ್ಳಿ ಬಣ್ಣದಲ್ಲಿ ದೊರಕುತ್ತದೆ.

ಸಿಂಗಲ್-ಚಿಪ್ BT 5.3 ತಂತ್ರಜ್ಞಾನವು ಸ್ಪೀಕರ್ ಮತ್ತು ಮೈಕ್ರೊಫೋನ್ ಮೂಲಕ ಬ್ಲೂಟೂತ್ ಕರೆ ಮಾಡಬಹುದು. ಹೃದಯ ಬಡಿತ ಮಾನಿಟರಿಂಗ್ ಮತ್ತು SpO2 ಬ್ಲಡ್ ಆಕ್ಸಿಜನ್ ಟ್ರ್ಯಾಕಿಂಗ್ನಿಂದ, ಸ್ತ್ರೀ ಋತುಚಕ್ರದ ಟ್ರ್ಯಾಕಿಂಗ್, ಡ್ರಿಂಕ್ ವಾಟರ್ ರಿಮೈಂಡರ್ ಮತ್ತು ಸೆಡೆಂಟರಿ ರಿಮೈಂಡರ್ನಂತಹ ವೈಶಿಷ್ಟ್ಯಗಳನ್ನು ಸಹ ಒಳಗೊಂಡಿದೆ.

ಬೌಲ್ಟ್ನ ಸ್ಟರ್ಲಿಂಗ್ ಪ್ರೊ ಫಿಟ್ನೆಸ್ ಪ್ರಿಯರಿಗಾಗಿ 100 ಕ್ಕೂ ಹೆಚ್ಚು ಕ್ರೀಡೆಗಳು, ವ್ಯಾಯಾಮ, ಓಟ ಇತ್ಯಾದಿಗಳ ಆಯ್ಕೆ ನೀಡಿದೆ. IP68 ನೀರು-ನಿರೋಧಕ ರೇಟಿಂಗ್ ಹೊಂದಿದೆ. 250+ ಕ್ಲೌಡ್-ಆಧಾರಿತ ವಾಚ್ ಫೇಸ್ ಹೊಂದಿದೆ.

ಬೌಲ್ಟ್ ಆಸ್ಟ್ರಾ TWS
BOULT’s Astra TWS ಗೇಮಿಂಗ್ ಬಳಸಬಹುದಾದ ಬಡ್ ಆಗಿದ್ದು, ಕಡಿಮೆ ಲೇಟೆನ್ಸಿ TWS 100 ನಿಮಿಷಗಳ ಪ್ಲೇಟೈಮ್ ಅನ್ನು ನೀಡುತ್ತದೆ, ತಡೆರಹಿತ ಸಂಪರ್ಕಗಳಿಗಾಗಿ ಬ್ಲೂಟೂತ್ 5.3 ಸಂಪರ್ಕವನ್ನು ಹೊಂದಿದೆ.

Advertisement

ಅಸ್ಟ್ರಾ 40 ಮಿಲಿಸೆಕೆಂಡ್ ನ ಅತಿ ಕಡಿಮೆ ಲೇಟೆನ್ಸಿಯನ್ನು ಹೊಂದಿದೆ. ಹೆಚ್ಚುವರಿಯಾಗಿ, ಅದರ BoomX™ ತಂತ್ರಜ್ಞಾನವು ಉತ್ತಮ ಆಡಿಯೊ ಅನುಭವ ನೀಡುತ್ತದೆ. ಉತ್ತಮ ಧ್ವನಿ ಸ್ಪಷ್ಟತೆಗಾಗಿ ಝೆನ್™ ಕ್ವಾಡ್ ಮೈಕ್ ಇಎನ್ಸಿಯನ್ನು ಒಳಗೊಂಡಿದೆ. TWS IPX5 ನೀರು-ನಿರೋಧಕವಾಗಿದೆ, ಇದು ಬ್ಲ್ಯಾಕ್ ಗ್ಲೋಸ್, ವೈಟ್ ಓಪಲ್, ಸ್ಮೋಕಿ ಮೆಟಲ್ ಬಣ್ಣಗಳಲ್ಲಿ ಲಭ್ಯವಿದೆ.

ಬೌಲ್ಟ್ ಸ್ಟರ್ಲಿಂಗ್ ಪ್ರೊ ವಾಚಿನ ದರ 2499 ರೂ. ಮತ್ತು ಆಸ್ಟ್ರಾ ಟಿಡಬ್ಲೂಎಸ್ ದ 1399 ರೂ. ಆಗಿದ್ದು, www.boultaudio.com ಮತ್ತು ಅಧಿಕೃತ ರೀಟೇಲರ್ ಗಳಲ್ಲಿ ಲಭ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next