Advertisement
ಎ.ಬಿ. ಶೆಟ್ಟಿ ವೃತ್ತದಿಂದ ಕ್ಲಾಕ್‌ಟವರ್‌ಗೆ ಬರುವ ರಸ್ತೆಯ ಎಡಭಾಗದಲ್ಲಿ (ನೆಹರೂ ಮೈದಾನ ಬದಿ) ಈಗಾಗಲೇ ಹಾಕಿರುವ ಇಂಟರ್‌ಲಾಕ್ ತೆಗೆದು ಅಲ್ಲಿ ಸ್ಮಾರ್ಟ್ ರಸ್ತೆಯ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಜನಸ್ನೇಹಿಯಾಗಿ ಸ್ಮಾರ್ಟ್‌ರೋಡ್ ಮಾಡಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ರಸ್ತೆಯ ಪಕ್ಕ ಅಲಂಕಾರಿಕವಾಗಿ ಹೂವುಗಳ ಜೋಡಣೆಗೆ ನಿರ್ಧರಿಸಲಾಗಿದೆ. ವಿಶೇಷವಾಗಿ ಈ ರಸ್ತೆಯ ಎರಡೂ ಭಾಗದಲ್ಲಿ ಸುಸಜ್ಜಿತ ಶೈಲಿಯಲ್ಲಿ ಫುಟ್‌ಪಾತ್ ನಿರ್ಮಾಣವಾಗಲಿದೆ. ಈಗ ನೆಹರೂ ಮೈದಾನ ಭಾಗದಲ್ಲಿ ಎ.ಬಿ. ಶೆಟ್ಟಿ ವೃತ್ತದಿಂದ ಪುರಭವನದವರೆಗೆ ರಸ್ತೆ ಬದಿ ವಾಹನ ಪಾರ್ಕಿಂಗ್‌ಗೆ ಅವಕಾಶ ನೀಡಲಾಗಿತ್ತು. ಆದರೆ ಮುಂದೆ ನಿರ್ದಿಷ್ಟ ಸ್ಥಳದಲ್ಲಿ ಮಾತ್ರ ವಾಹನ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗುತ್ತದೆ.
ಎ.ಬಿ. ಶೆಟ್ಟಿಯಿಂದ ಕ್ಲಾಕ್ ಟವರ್ ರಸ್ತೆ ಈಗಲೇ ವಿಸ್ತ ರಣೆಗೊಂಡಿರುವ ಹಿನ್ನೆಲೆಯಲ್ಲಿ ಈ ರಸ್ತೆ ಮತ್ತೆ ವಿಸ್ತರಿಸುವ ಉದ್ದೇಶ ಇಲ್ಲ. ರಸ್ತೆಯ ಮಧ್ಯ ಭಾಗದಲ್ಲಿ ಆಕರ್ಷಕ ಗಾರ್ಡನಿಂಗ್ ಮಾಡಲಾಗುತ್ತದೆ. ನಗರದಲ್ಲಿ ಎಲ್ಲೆಂದರಲ್ಲಿ ನೇತಾಡುವ ಕೇಬಲ್‌ಗಳಿಗೆ ಇನ್ನು ಮುಕ್ತಿ ಸಿಗಲಿವೆ. ಇದರಂತೆ ಎ.ಬಿ. ಶೆಟ್ಟಿ ರಸ್ತೆಯ ಕೇಬಲ್‌ಗಳೆಲ್ಲ ಫುಟ್‌ಪಾತ್‌ನ ಕೆಳಭಾಗದಲ್ಲಿ ಸಾಗಲಿದೆ. ಎಲ್ಲ ವಯರ್ ಗಳು ಅಂಡರ್‌ಗ್ರೌಂಡ್‌ನಲ್ಲಿರಲಿದೆ. ಎಲ್ಲೂ ಕೂಡ ಯಾವುದೇ ವ್ಯತ್ಯಾಸ ಆಗದಂತೆ ನೋಡಿಕೊಳ್ಳಲು ಸುಸಜ್ಜಿತ ‘ಸೆಂಟ್ರಲ್ ಕಮಾಂಡ್ ಸೆಂಟರ್’ ಕಾರ್ಯಾಚರಿಸಲಿದೆ. ಸ್ಮಾರ್ಟ್ ರೋಡ್‌ನಲ್ಲಿ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ಅಳವಡಿಸಿ ಕಸದ ತೊಟ್ಟಿ, ಸ್ವಯಂಚಾಲಿತ ತ್ಯಾಜ್ಯ ನಿರ್ವಹಣಾ ವಾಹನ, ಇ-ಟಾಯ್ಲೆಟ್, ಸಿಸಿ ಕೆಮರಾ ಅಳವಡಿಸಿದ ಟ್ರಾಫಿಕ್ ವ್ಯವಸ್ಥೆ, ಬಸ್ ಟ್ರ್ಯಾಕಿಂಗ್ ವ್ಯವಸ್ಥೆ, ವೈಫೈ ಕೇಂದ್ರ, ಮಾಹಿತಿ ಬೋರ್ಡ್, ವಾಕ್ ವೇ ವ್ಯವಸ್ಥೆ ಇರಲಿದೆ. ರಸ್ತೆ ಅಕ್ಕ ಪಕ್ಕ ಹಸಿರ ಹೊದಿಕೆ, ಎಲ್ ಇಡಿ, ಸ್ಮಾರ್ಟ್ ಬಸ್ ನಿಲ್ದಾಣ, ಕಿಯೋಸ್ಕ್ ಸೆಂಟರ್‌ಗಳು, ಬಸ್, ವಿಮಾನ, ರೈಲಿನ ಸಮಯದ ವಿವರ ಎಲ್ಲವೂ ಹೈಫೈ ರೀತಿಯಲ್ಲಿ ದೊರೆಯಲಿದೆ ಎನ್ನುತ್ತಾರೆ ಸ್ಮಾರ್ಟ್‌ಸಿಟಿ ಯೋಜನೆ ಅಧಿಕಾರಿಗಳು.
Related Articles
ಎ.ಬಿ. ಶೆಟ್ಟಿ ವೃತ್ತದಿಂದ ಮಿನಿ ವಿಧಾನಸೌಧದ ಮುಂಭಾಗದವರೆಗೆ (ಹಿಂದಿನ ಕ್ಲಾಕ್ ಟವರ್)ರಸ್ತೆ ಸ್ಮಾರ್ಟ್ ರಸ್ತೆಯಾಗಿ ಬದಲಾಗುವ ಜತೆಗೆ ಇಲ್ಲಿ ಆಲಂಕಾರಿಕ ದೀಪಗಳು ಕಂಗೊಳಿಸಲಿವೆ. ಎರಡೂ ಬದಿಯಲ್ಲಿ ಅಲಂಕಾರಿಕ ಬಲ್ಬ್ ಗಳನ್ನು ಸುಂದರ ಶೈಲಿಯಲ್ಲಿ ಜೋಡಿಸಲಾಗುತ್ತದೆ. ಜತೆಗೆ ನೆಹರೂ ಮೈದಾನ ಭಾಗದ ರಸ್ತೆಯಲ್ಲಿ ಮರಗಳಿರುವುದರಿಂದ ಅದರ ಮಧ್ಯೆ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಕರ್ಷಕ ಕುರ್ಚಿಯ ವ್ಯವಸ್ಥೆ ಇರಲಿದೆ. ಮುಂಜಾನೆ, ಸಂಜೆ ಇಲ್ಲಿ ವಿಶ್ರಾಂತಿ ಪಡೆಯಲು ಅವಕಾಶವಿದೆ.
Advertisement
ಕ್ಲಾಕ್ ಟವರ್; ಶೀಘ್ರ ಬರಲಿದೆ ಗಡಿಯಾರಸ್ಮಾರ್ಟ್ಸಿಟಿ ಯೋಜನೆಯಡಿ ಈಗಾಗಲೇ ಕ್ಲಾಕ್ ಟವರ್ ಕಾಮಗಾರಿ ಯನ್ನು ಕೈಗೆತ್ತಿಕೊಂಡಿದ್ದು, ಟವರ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಇನ್ನು ಕೆಲವೇ ದಿನದಲ್ಲಿ ಗಡಿಯಾರ ಜೋಡಣೆ ನಡೆಯಲಿದೆ. ಫುಟ್‌ಪಾತ್‌ಗೆ ವಿಶೇಷ ಆದ್ಯತೆ
ಸ್ಮಾರ್ಟ್‌ಸಿಟಿ ಯೋಜನೆಯಡಿ ಸ್ಮಾರ್ಟ್‌ರೋಡ್ ಕಾಮಗಾರಿಯನ್ನು ಈಗಾಗಲೇ ಆರಂಬಿಸಲಾಗಿದೆ. ಸುವ್ಯವಸ್ಥಿತ ರೀತಿಯಲ್ಲಿ ಫುಟ್‌ಪಾತ್ ವ್ಯವಸ್ಥೆಯನ್ನು ಕೈಗೊಳ್ಳಲು ಇಲ್ಲಿ ನಿರ್ಧರಿಸಲಾಗಿದೆ. ಮಂಗಳೂರಿನಲ್ಲಿಯೇ ಮಾದರಿ ರೂಪದಲ್ಲಿ ಸ್ಮಾರ್ಟ್‌ಸಿಟಿಗೆ ಬೆಳಕಾಗುವ ನಿಟ್ಟಿನಲ್ಲಿ ಸ್ಮಾರ್ಟ್‌ರೋಡ್ ಸಿದ್ಧಗೊಳ್ಳಲಿದೆ.
– ಮೊಹಮ್ಮದ್ ನಝೀರ್, ವ್ಯವಸ್ಥಾಪಕ ನಿರ್ದೆಶಕರು,
ಸ್ಮಾರ್ಟ್‌ಸಿಟಿ ಮಂಗಳೂರು.