Advertisement

ದಾನಿಗಳಿಂದ ವಿದ್ಯಾರ್ಥಿಗಳ ಪೋಷಕರಿಗೆ ಸ್ಮಾರ್ಟ್ ಫೋನ್ ವಿತರಣೆ

01:05 PM Jul 06, 2021 | Team Udayavani |

ಬದಿಯಡ್ಕ: ಎಯುಪಿ ಶಾಲೆ ಪಳ್ಳತ್ತಡ್ಕ ದಲ್ಲಿ ಆನ್ಲೈನ್ ಕಲಿಕಾ ಸೌಲಭ್ಯವಿಲ್ಲದ ಒಟ್ಟು 25 ಮಕ್ಕಳಿಗೆ ಶಾಲಾ ಅಧ್ಯಾಪಕರು ಹಾಗೂ ನೌಕರ ವೃಂದ , ವಿವಿಧ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ಊರ ದಾನಿಗಳ ನೆರವಿನೊಂದಿಗೆ  ಮಕ್ಕಳ ಹೆತ್ತವರಿಗೆ ಮೊಬೈಲನ್ನು ವಿತರಿಸಲಾಯಿತು.

Advertisement

ಕಾರ್ಯಕ್ರಮವನ್ನು ವಾರ್ಡ್ ಮೆಂಬರ್ ಹಮೀದ್ ಪಳ್ಳತಡ್ಕ ಉದ್ಘಾಟಿಸಿದರು.

ವಾರ್ಡ್ ಸದಸ್ಯೆ ಶ್ರೀಮತಿ ಅನಿತಾ ಶುಭ ಹಾರೈಸಿದರು. ಪಿ.ಟಿ.ಎ ಸದಸ್ಯರಾದ ಹಮೀದ್ ಉಪಸ್ಥಿತರಿದ್ದರು. ಸಭೆಯಲ್ಲಿ ಮೊಬೈಲ್ ಫಲಾನುಭವಿಗಳು , ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು, ಊರವರು, ಶಾಲಾ ಅಧ್ಯಾಪಕರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಮಣಿ ಎಂ.ಎಂ ಸ್ವಾಗತಿಸಿ, ಮಲ್ಲಿಕಾ ಟೀಚರ್  ಧನ್ಯವಾದವಿತ್ತರು. ಶಾಲಾ ಅಧ್ಯಾಪಕರಾದ ಶ್ರೀ ಗುರುಪ್ರಸಾದ್ ರೈ ಕಾರ್ಯಕ್ರಮವನ್ನು ನಿರೂಪಿಸಿದರು. ಕೋವಿಡ್ ನಿಯಮವನ್ನು ಪಾಲಿಸಿಕೊಂಡು ವ್ಯವಸ್ಥಿತವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next