ರಾಮನಗರ: ಜಿಲ್ಲೆಯಲ್ಲೀಗ ಸ್ಕ್ರಾಚ್ ಕಾರ್ಡ್ ಸದ್ದು ಮಾಡುತ್ತಿದೆ. ರಾಮನಗರ ಮತ್ತು ಮಾಗಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿನ ಹಿಂದೆ ಸ್ಮಾರ್ಟ್‌ಕಾರ್ಡ್ ಕೆಲಸ ಮಾಡಿದೆ ಎಂಬ ಕೂಗು ಎದ್ದಿದ್ದು, ಸ್ವತಃ ಮಾಗಡಿ ಕ್ಷೇತ್ರದ ಪರಾಜಿತ ಅಭ್ಯರ್ಥಿ ಎ.ಮಂಜುನಾಥ್ ಸುದ್ದಿಗೋಷ್ಟಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸ್ಕ್ರಾಚ್ ಕಾರ್ಡ್ ಸಾಕಷ್ಟು ಸದ್ದು ಮಾಡುತ್ತಿದೆ.
ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸ್ಕ್ರಾಚ್ ಕಾರ್ಡ್ ನೀಡಿದ್ದರು ಎಂದು ಕೆಲ ಮತಗಟ್ಟೆಗಳ ಬಳಿ ಜೆಡಿಎಸ್ ಕಾರ್ಯಕರ್ತರು ಆರೋಪಿಸಿ ದ್ದರು. ಇನ್ನು ಬಿಡದಿಯಲ್ಲಿ ಈ ಬಗ್ಗೆ ದೂರು ಬಂದ ಹಿನ್ನೆಲೆ ಎಫ್‌ಎಸ್‌ಟಿ ಅಧಿಕಾರಿಗಳು ಚರಂಡಿಯನ್ನೆಲ್ಲಾ ಜಾಲಾಡಿ ಎರಡು ಕಾರ್ಡ್‌ಗಳನ್ನು ವಶಪಡಿ ಸಿಕೊಂಡಿದ್ದರು. ಚುನಾವಣೆ ಮುಗಿದ ಬಳಿಕ ಸೋಲು -ಗೆಲುವಿನ ಪರಾಮರ್ಶೆಗೆ ಇಳಿದಿರುವ ಪರಾಜಿತ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಇದೀಗ ಈ ಸ್ಕ್ರಾಚ್ ಕಾರ್ಡ್‌ನತ್ತ ಬೊಟ್ಟು ಮಾಡುತ್ತಿದ್ದಾರೆ.
ಗೆದ್ದರೆ ಮಾತ್ರೆ ಉಡುಗೊರೆ: ಪ್ರತಿ ಮನೆಗೆ ಹಂಚಿಕೆ ಮಾಡಿರುವ ಬಾರ್ ಕೋಡ್ ಹೊಂದಿರುವ ಸ್ಕ್ರಾಚ್ ಕಾರ್ಡ್ ಗಳು ಪೂರ್ವ ಷರತ್ತುಗಳಿಗೆ ಒಳಪಟ್ಟಿದ್ದು, ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ ಮಾತ್ರ ಕಾರ್ಡ್ ಚಾಲ್ತಿಗೆ ಬರುತ್ತವೆ. ಇಲ್ಲವಾದಲ್ಲಿ ಬಾರ್ ಕೋಡ್ ಹಾಗೇ ರದ್ದಾಗುತ್ತದೆ ಎಂಬ ಷರತ್ತು ಇದ್ದು, ಮುಖಂಡರು ಮತದಾರರಿಗೆ ನೀಡುವಾಗ ಈ ಮಾಹಿತಿ ತಿಳಿಸಿ ನೀವು ಮತನೀಡಿ ಗೆಲ್ಲಿಸಿದರೆ ಮಾತ್ರ ಉಡುಗೊರೆ ಎಂಬ ಸಂದೇಶ ನೀಡಿದ್ದಾರೆ. ಇದರಿಂದಾಗಿ ಮತದಾರರು ಗಿಫ್ಟ್ ಹಾಳಾಗುತ್ತದೆ ಎಂಬ ಕಾರಣಕ್ಕೆ ಮತ ನೀಡಿದ್ದಾರೆ ಎನ್ನಲಾಗುತ್ತಿದೆ.
ಮತ ಟರ್ನ್ ಮಾಡಿದ ಕಾರ್ಡ್?: ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ನೀಡಿದ ಗ್ಯಾರಂಟಿಗಳು ಮತದಾರರನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರವಹಿಸಿವೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಪಕ್ಷ ನೀಡಿದ ಗ್ಯಾರಂಟಿ ಜತೆಗೆ ಅಭ್ಯರ್ಥಿಗಳು ನೀಡಿದ ಈ ಹೆಚ್ಚುವರಿಗೆ ಗ್ಯಾರಂಟಿ ಮತ ದಾರರನ್ನು ಸೆಳೆದಿದೆ ಎಂಬುದು ವಿಪಕ್ಷ ಗಳ ಮಾತಾಗಿದೆ. ಈ ಕಾರ್ಡ್‌ನಿಂದಾಗಿ ಕೆಲ ಮತದಾರರು ಮರಳಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ಗೆದ್ದ ಅಭ್ಯರ್ಥಿಗಳು ಸಂಭ್ರಮಾಚರ ಣೆಯಲ್ಲಿ ತೊಡಗಿದ್ದರೆ, ಪರಾಜಿತ ಅಭ್ಯ ರ್ಥಿಗಳು ಸೋಲಿನ ಕಾರಣ ಹುಡುಕು ತ್ತಿದ್ದು, ಹೀಗೆ ಹುಡುಕಲು ಹೊರಟ ಮತದಾರರಿಗೆ ಬಗೆಬಗೆಯ ಕಾರಣ ದೊರೆಯುತ್ತಿವೆ. ಇದೀಗ ಜಿಲ್ಲೆಯಲ್ಲಿ ಈ ಸ್ಕ್ರಾಚ್ ಕಾರ್ಡ್ ಸಾಕಷ್ಟು ಸದ್ದು ಮಾಡು ತ್ತಿದ್ದು, ಮುಂದೆ ಇನ್ಯಾವ ಆಮಿಷ ಹರಿದಾಡಿರುವ ಬಗ್ಗೆ ಮಾಹಿತಿ ಬರುವುದೋ ಕಾದು ನೋಡಬೇಕಿದೆ.
ಏನಿದು ಸ್ಕ್ರಾಚ್ ಕಾರ್ಡ್?: ರಾಮನಗರ ಜಿಲ್ಲೆಯ ಮಾಗಡಿ, ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಆ ಕ್ಷೇತ್ರದ ಅಭ್ಯರ್ಥಿಯ ಭಾವಚಿತ್ರ ಕ್ರಮಸಂಖ್ಯೆ ಹಾಗೂ ಪಕ್ಷದ ಚಿಹ್ನೆ ಒಳಗೊಂಡು ಮತ ಕೇಳುವ ಕರಪತ್ರದ ರೀತಿಯಲ್ಲಿ ಸ್ಮಾರ್ಟ್ ಕಾರ್ಡ್‌ವೊಂದನ್ನು ಮತದಾರರಿಗೆ ಹಂಚಿಕೆ ಮಾಡಲಾಗಿದೆ. ಈ ಕಾರ್ಡ್‌ನಲ್ಲಿ ಬಾರ್‌ಕೋಡ್ ಇದ್ದು, ಇದನ್ನು ಅಭ್ಯರ್ಥಿ ಸೂಚಿಸಿದ ಅಂಗಡಿಯಲ್ಲಿ ಸ್ಕ್ರಾಚ್ ಮಾಡಿಸಿದರೆ 5 ಸಾವಿರ ರೂ. ಮೌಲ್ಯದ ಗೃಹಪಯೋಗಿ ವಸ್ತುಗಳು ನೀಡಲಾಗುವುದು ಎಂದು ಹೇಳಲಾಗಿದೆ. ಪ್ರತಿ ಕ್ಷೇತ್ರದಲ್ಲಿ ಸುಮಾರು 60 ಸಾವಿರ ಕಾರ್ಡ್ ಹಂಚಿಕೆ ಮಾಡಲಾಗಿದೆ ಎಂಬ ಮಾಹಿತಿ ಇದೆ.
ಬಾಲಕೃಷ್ಣ ಚುನಾವಣೆ ಹಿಂದಿನ ರಾತ್ರಿ ಕ್ಷೇತ್ರದಲ್ಲಿ 60 ಸಾವಿರ ಕೂಪನ್ ಹಂಚಿ, ಮಾಲ್‌ಗಳಲ್ಲಿ ಇದನ್ನು ಸ್ಕ್ರಾಚ್ ಮಾಡಿ 5 ಸಾವಿರ ರೂ. ವರೆಗೆ ಖರೀದಿ ಮಾಡಬಹುದೆಂದು ಹೇಳಿದ್ದಾರೆ. ಈ ಆಶ್ವಾಸನೆ ನಂಬಿ ಮತದಾರರು ಮತ ಹಾಕಿದ್ದಾರೆ. ಈ ಮೂಲಕ ಜನರನ್ನು ಮರಳು ಮಾಡಿ ಆಮಿಷದಿಂದ ಗೆಲುವು ಸಾಧಿಸಿದ್ದಾರೆ.
-ಎ.ಮಂಜುನಾಥ್, ಮಾಜಿ ಶಾಸಕರು ಮಾಗಡಿ