Advertisement

ಸಣ್ಣ ಉಳಿತಾಯ ಯೋಜನೆ ಗರಿಷ್ಠ ರಿಟರ್ನ್ಸ್

11:05 PM Dec 12, 2020 | mahesh |

ದೇಶದಲ್ಲಿನ ಸಣ್ಣ ಉಳಿತಾಯ ಯೋಜನೆಗಳು ದೀರ್ಘಾವಧಿಗೆ ಸುರಕ್ಷಿತವಾದವು. ಅಂಚೆ ಕಚೇರಿ ಅಥವಾ ಬ್ಯಾಂಕ್‌ಗಳಲ್ಲಿ ಈ ಉಳಿತಾಯ ಯೋಜನೆಯನ್ನು ಶುರು ಮಾಡಬಹುದು. ಇವುಗಳಿಗೆ ಸರಕಾರದಿಂದಲೇ ಖಾತರಿ ಇದೆ. ಜತೆಗೆ ವರ್ಷಕ್ಕೆ ಕನಿಷ್ಠ 500 ರೂ.ಹೂಡಿಕೆ ಮಾಡಬಹುದು ಮತ್ತು ಇದಕ್ಕೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್‌ 80ಇ ಅಡಿಯಲ್ಲಿ ವಿನಾಯಿತಿ ಕೂಡ ದೊರೆಯುತ್ತದೆ.

Advertisement

ಬ್ಯಾಂಕ್‌ ಠೇವಣಿಗೆ ಹೋಲಿಸಿದಲ್ಲಿ ಈ ಉಳಿತಾಯ ಯೋಜನೆಗಳಿಗೆ ಬಡ್ಡಿ ದರ ಉತ್ತಮವಾಗಿಯೇ ಇದೆ. ಆದರೆ ದೀರ್ಘ‌ಕಾಲಕ್ಕೆ ಹೂಡಿಕೆ ಮಾಡಿದಲ್ಲಿ ಒಳ್ಳೆ ರಿಟನ್ಸ್ ನಿರೀಕ್ಷೆ ಮಾಡಬಹುದು. 15 ವರ್ಷಗಳ ಅವಧಿಯೊಳಗೆ ಹೂಡಿಕೆ ಮೊತ್ತ ದುಪ್ಪಟ್ಟು ಆಗುವಂಥ 2 ಸಣ್ಣ ಉಳಿತಾಯ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲಿದೆ.

ಸುಕನ್ಯಾ ಸಮೃದ್ಧಿ ಯೋಜನೆ
ಈ ಯೋಜನೆ ಅಡಿಯಲ್ಲಿ ನೀಡುವ ಬಡ್ಡಿ ದರ ಶೇ.7.6. ಪ್ರತೀ ವರ್ಷ ಬಡ್ಡಿ ದರ ಸೇರಿಕೊಳ್ಳುತ್ತಾ ಹೋಗುತ್ತದೆ. ಈ ಯೋಜನೆಯಡಿ ಹತ್ತು ವರ್ಷದೊಳಗಿನ ಹೆಣ್ಣುಮಕ್ಕಳ ಹೆಸರಿನಲ್ಲಿ ಮಾತ್ರ ಹಣ ಹೂಡಿಕೆಗೆ ಅವಕಾಶವಿದೆ. ಈ ಯೋಜನೆಯ ಮೆಚೂÂರಿಟಿ ಅವಧಿ ಹದಿನೈದು ವರ್ಷಗಳಾಗಿವೆ. ಒಂದು ವರ್ಷದಲ್ಲಿ ಕನಿಷ್ಠ 250 ರೂ. ಹಾಗೂ ಗರಿಷ್ಠ 1.5 ಲಕ್ಷ ರೂ. ಠೇವಣಿ ಇಡಬಹುದು. ಹೆಣ್ಣು ಮಕ್ಕಳಿಗೆ 18 ವರ್ಷ ತುಂಬಿದ ಮೇಲೆ (ಮದುವೆಗೆ ಒಂದು ತಿಂಗಳು ಅಥವಾ ಮದುವೆಯ ಮೂರು ತಿಂಗಳ ಅನಂತರ) ಅಥವಾ ಖಾತೆ ತೆರೆದ 21 ವರ್ಷಗಳ ಅನಂತರ ಸ್ಥಗಿತ ಮಾಡಬಹುದಾಗಿದ್ದು, ಆಕೆಗೆ 18 ವರ್ಷಗಳಾದಾಗ ಅಥವಾ ಹತ್ತನೇ ತರಗತಿ ಉತ್ತೀರ್ಣ ಆದ ಮೇಲೆ ಹಣ ವಿಥ್‌ ಡ್ರಾ ಮಾಡಬಹುದು.

ಪಬ್ಲಿಕ್‌ ಪ್ರಾವಿಡೆಂಟ್‌ ಫ‌ಂಡ್‌
ಪಬ್ಲಿಕ್‌ ಪ್ರಾವಿಡೆಂಟ್‌ ಫ‌ಂಡ್‌ ಅಥವಾ ಪಿಪಿಎಫ್ ಮೇಲೆ ಸದ್ಯ ಶೇ.7.10ರಷ್ಟು ಬಡ್ಡಿ ನೀಡಲಾಗುತ್ತಿದೆ. ಅಲ್ಲದೇ ಈ ಯೋಜನೆಯ ಮೆಚ್ಯೂರಿಟಿ ಅವಧಿ 15 ವರ್ಷಗಳಾಗಿದ್ದು, ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ 500 ರೂ. ಹಾಗೂ ಗರಿಷ್ಠ 1.5 ಲಕ್ಷ ರೂ. ಹೂಡಿಕೆ ಮಾಡಬಹುದು. 15 ವರ್ಷಗಳ ಅವಧಿ ಪೂರ್ಣಗೊಂಡ ಅನಂತರ ಅದರ ಆಚೆಗೆ ಐದು ವರ್ಷಗಳಿಗೆ ಅವಧಿ ವಿಸ್ತರಣೆ ಮಾಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next