Advertisement

ಕೋವಿಡ್ ಕವನ: ತಪ್ಪು ಒಪ್ಪುಗಳ ಅರಿತು ಇನ್ನಾದರೂ ಹಿಡಿದೀತೇ ಮನುಕುಲ ಸರಿದಾರಿ?

09:30 AM Apr 02, 2020 | Hari Prasad |

ಬರ ಸಿಡಿಲಿನಂತೆ ಧರೆಗೆರಗಿ ಬಂದಿಹುದು ಕೋವಿಡ್

Advertisement

ತಳೆದಿಹುದು ಚೀನಾದಲಿ ಅದರ ಜನುಮ

ಜಾತಿ ನೀತಿಗಳ ಬೇಧವಿಲ್ಲದೆ ಬೇಧಿಸಿದ ಸೈತಾನ

ಆಗದಿರಲಿ ಕೋವಿಡ್ ನ ಕಬಂದ ಬಾಹುವಿಗೆ ಜಗವೆ ಹೈರಾಣ

***************

Advertisement

ಬಂದಿಹುದು ಚೀನದಾ ಮಹಾಗೋಡೆಯ ಪುಟಿದೆದ್ದು ದಾಟಿ

ಜಗದ ಮೂಲೆಯಲ್ಲೂ ಆಗುತ್ತಿದೆ ಪ್ರತಿಯೊಬ್ಬರ ಭೇಟಿ

ಸಾವು ಕುಣಿಯುತ್ತಿದೆ ಸೋಂಕಿದ ಹೃದಯಗಳ ಮೀಟಿ

ಬೀಗುತಿದೆ ಕೋವಿಡ್ ನನಗಿಲ್ಲ ಇನ್ನೂ ಯಾರೂ ಸರಿಸಾಠಿ

***************

ಚುಂಬಿಸಲು ಹೊರಟಿಹುದು ಹತ್ತೊಂಬತ್ತರ ಹರೆಯದ ಈ ವೈರಾಣು

ಯಮಕಿಂಕರನಂತ ಕೋವಿಡ್ -19 ಎಂಬೀ ಸೂಕ್ಶ್ಮಾಣು

ಕೆಮ್ಮಿದರೆ ದಹಿಸುವುದು ಶರೀರದ ಅಣು ಅಣುವಿನ ಜೀವಕಣ

ಸ್ಪಂದಿಸದೇ ಚಿಕಿತ್ಸೆಗೆ ಸೇರಬಲ್ಲುದು ಜೀವ ಈ ಮಣ್ಣ

                                    ***************

ಇದ್ದುದೆಲ್ಲವ ಕಳೆದು ಅನುಭವಿಸಲಾಗದೆ ಒದ್ದಾಡುತ್ತಿದೆ ಜನ ಜೀವನ

ಹೊರಬಂದು ಬೆರೆಯಲು ಅಂಜುತ್ತಿದೆ ಈ ಮನಃ

ಕೋಟೆಗಳ ಬೇಧಿಸಿ ಭೂಮಂಡಲವ ಮಾಡುತಿದೆ ಬರೀ ಮೌನ

ಅದಾಗಲೇ ಸೇರಿಹರು ಹಲವಾರು ಜನ ಸ್ಮಶಾನ

                                      ***************

ಬಡವ, ಶ್ರೀಮಂತ, ಬಲ್ಲಿದ ಎಂಬೀ ಬೇಲಿಗಳ ಮೀರಿ

ಕಂಡಿಹೆವು ಹೊಸ ಬದುಕ ಸಾಗರದಾಚೆಗೆ ವಿಮಾನವೇರಿ

ಅದಾಗಲೇ ಬಂದಿಹುದು ಕೋವಿಡ್ ಎಂಬೀ ಮಾರಿ

ಅಸಾಧ್ಯವಾಗಿಹುದು ಆತಂಕವ ಕಳೆಯಲು ಬಂದುಗಳ ಸೇರಿ

                                       ***************

ಅಂದು ಹಸ್ತಲಾಘವ ಆಗಿತ್ತು ಅಭಿನಂದನೆಯ ಸಂಕೇತ

ಈಗ ಕಿರುನಗೆ, ಕೈ ಜೋಡಣೆಯೇ ಸಾಕೆಂಬ ಇಂಗಿತ

ಆರಡಿ ಅಂತರದಲಿ ನಡೆಯಲಿ ದಿನನಿತ್ಯದ ಮಾತು

ಮುಖ ತುಂಬ ಆವರಿಸಿರಲಿ ಎನ್- 95 ಮಾಸ್ಕು

                                     ***************

ಭರದಿಂದ ಸಾಗುತಿದೆ ವಿಜ್ಞಾನಿಗಳ, ವೈದ್ಯರ ಸಂಶೋಧನೆಯ ದಾರಿ

ಹಾರೈಸೋಣ ಆ ಶ್ರಮಕ್ಕೆ ಕೈಜೋಡಿಸಿ ನಾವೆಲ್ಲರೂ ಸೇರಿ

ಬಗ್ಗುಬಡಿಯಲೇ ಬೇಕು ಭಾರಿಸಲು ಜಯಭೇರಿ

ತಪ್ಪು ಒಪ್ಪುಗಳ ಅರಿತು ಇನ್ನಾದರೂ ಹಿಡಿದೀತೇ ಮನುಕುಲ ಸರಿದಾರಿ?


. ರಾ. ಪರ್ಕಳ

Advertisement

Udayavani is now on Telegram. Click here to join our channel and stay updated with the latest news.

Next