Advertisement
ಅಂದಹಾಗೆ ಈ ಘಟನೆ ನಡೆದಿದ್ದು, ಇಟಾಲಿಯನ್ ಆಲ್ಫ್ಸ್ ಪರ್ವತ ಶ್ರೇಣಿಯಲ್ಲಿ. ಪರ್ವತದಲ್ಲಿ ಕೇಬಲ್ ಕಾರು ಸಂಪರ್ಕ ವ್ಯವಸ್ಥೆಯಿದ್ದು, ಇದಕ್ಕೆ ಪುಟಾಣಿ ಪ್ರಯಾಣಿಕ ವಿಮಾನ ಬಂದು ತಾಗಿದೆ. ಅದು ಕೇಬಲ್‌ಗಳ ಮಧ್ಯೆ ತಲೆಕೆಳಗಾಗಿ ಲುಕಿಕೊಂಡಿದ್ದು ಅದೃಷ್ಟವಶಾತ್ ಕೆಳಗೆ ಬಿದ್ದಿಲ್ಲ.ಕೇಬಲ್‌ಗೆ ಸಿಲುಕುತ್ತಲೇ ಅದರೊಳಗಿದ್ದ 62 ವರ್ಷದ ಪೈಲೆಟ್ ಹೊರಗೆಸೆಯಲ್ಪಟ್ಟಿದ್ದಾರೆ. ಅವರು ನೆಲಕ್ಕೆ ಬೀಳದೆ ವಿಮಾನದ ರೆಕ್ಕೆಯಲ್ಲೇ ಕೂತಿದ್ದರಂತೆ. ಇದರಲ್ಲಿ ಒಬ್ಬರೇ ಪ್ರಯಾಣಿಕರಿದ್ದು ಕೊನೆಗೆ ಹೆಲಿಕಾಪ್ಟರ್‌ಗಳು ಬಂದು ಅವರನ್ನು ರಕ್ಷಿಸಿವೆ.