Advertisement

ಇಲೆಕ್ಟ್ರಿಕ್ ಕಾರು v/s ಹೈಡ್ರೋಜನ್ ಪವರ್ ಕಾರು; ಮಾರುತಿ ಸುಜುಕಿ ಹೇಳೋದೇನು?

09:03 AM Apr 27, 2019 | Nagendra Trasi |

ನವದೆಹಲಿ:ದೇಶದ ಪ್ರಮುಖ ಕಾರು ಉತ್ಪಾದಕ ಕಂಪನಿ ಮಾರುತಿ ಸುಜುಕಿ 2020ರೊಳಗೆ  ಇಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡುವುದಾಗಿ ಹೇಳಿತ್ತು. ಆದರೆ ಇದೀಗ ಇಲೆಕ್ಟ್ರಿಕ್ ವೆಹಿಕಲ್ ನ ಬೆಲೆಯ ಬಗ್ಗೆ ಗಂಭೀರವಾದ ಪ್ರಶ್ನೆ ಎತ್ತಿದೆ. ಸಣ್ಣ ಪೆಟ್ರೋಲ್ ಕಾರಿನ ಬೆಲೆ ಪ್ರಸ್ತುತ 5 ಲಕ್ಷ. ಆದರೆ ಪೂರ್ಣ ಪ್ರಮಾಣದ ಸಂಚಾರ ಯೋಗ್ಯವಾದ ಇಲೆಕ್ಟ್ರಿಕ್ ಕಾರಿನ ಬೆಲೆ ಸುಮಾರು 12ಲಕ್ಷವಾಗಬಹುದು ಎಂದು ತಿಳಿಸಿದೆ. ಅಲ್ಲದೇ ಇಲೆಕ್ಟ್ರಿಕ್ ಕಾರಿನ ಚಾರ್ಚಿಂಗ್ ಇನ್ಫ್ರಾಸ್ಟ್ರಕ್ಚರ್ ಅಳವಡಿಕೆ ಕೂಡ ಕಷ್ಟ ಎಂದು ವಿವರಿಸಿದೆ.

Advertisement

ಅಗ್ಗದ ಇಲೆಕ್ಟ್ರಿಕ್ ಕಾರು ಉತ್ಪಾದನೆ ಅಸಾಧ್ಯ!

ಭಾರತ ಸರ್ಕಾರ ಆಟೋ ಇಂಡಸ್ಟ್ರಿಯನ್ನು ಬೆಳೆಸುವ ನಿಟ್ಟಿನಲ್ಲಿ ಇಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಹೆಚ್ಚು ಒತ್ತು ಕೊಡಲು ಮುಂದಾಗಿದೆ. ಆದರೆ ಇಲೆಕ್ಟ್ರಿಕ್ ಕಾರುಗಳ ಉತ್ಪಾದನೆಯಲ್ಲಿ ಗಂಭೀರವಾದ ಸವಾಲುಗಳು ಇವೆ. ಅದರಲ್ಲಿಯೂ ಮುಖ್ಯವಾದದ್ದು ಬೆಲೆಯದ್ದಾಗಿದೆ ಎಂದು ಮಾರುತಿ ಸುಜುಕಿ ಅಧ್ಯಕ್ಷ ಆರ್ ಸಿ ಭಾರ್ಗವ್ ತಿಳಿಸಿದ್ದಾರೆ.

ಕಳೆದ ವರ್ಷ ಭಾರ್ಗವ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, 2020ರೊಳಗೆ ಇಲೆಕ್ಟ್ರಿಕ್ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಯೋಚನೆ ಬಗ್ಗೆ ಹೇಳಿದ್ದರು. ಅಲ್ಲದೇ ಅದು ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದ್ದರು.

Advertisement

5ಲಕ್ಷ ರೂಪಾಯಿಯ ಪೆಟ್ರೋಲ್ ಕಾರು ಇಲೆಕ್ಟ್ರಿಕ್ ಮಾದರಿಯಲ್ಲಿ ಖರೀದಿಸುವುದಾದರೆ ಅದರ ಬೆಲೆ ಅಂದಾಜು 9 ಲಕ್ಷ ರೂಪಾಯಿಗಿಂತಲೂ ಹೆಚ್ಚಾಗಬಹುದು. ಇದನ್ನು ನೀವು ಖರೀದಿಸುತ್ತೀರಾ ಎಂಬುದು ಭಾರ್ಗವ್ ಪ್ರಶ್ನೆ. ಇಲೆಕ್ಟ್ರಿಕ್ ವಾಹನಗಳಿಗೆ ಗೂಡ್ಸ್ ಅಂಡ್ ಸರ್ವಿಸ್ ಟ್ಯಾಕ್ಸ್ ಶೇ.12ರಷ್ಟು ಇದೆ. ಪೆಟ್ರೋಲ್ ಕಾರುಗಳಿಗೆ ಜಿಎಸ್ ಟಿ ಶೇ.28ರಷ್ಟಿದೆ. ಆದರೆ ಇಲೆಕ್ಟ್ರಿಕ್ ಕಾರುಗಳಿಗೆ ಕೇಂದ್ರ ಸರ್ಕಾರದಿಂದ ಸಬ್ಬಿಡಿ ಸಿಗಲ್ಲ. ಕೇಂದ್ರ ಸರ್ಕಾರ ಜಾರಿಗೆ ತಂದ ಫೇಮ್ ವೆಹಿಕಲ್ ಸ್ಕೀಮ್ ಇದಕ್ಕೆ ಅನ್ವಹಿಸುವುದಿಲ್ಲ.

ಇಲೆಕ್ಟ್ರಿಕ್ ಕಾರುಗಳ ಚಾರ್ಜಿಂಗ್ ಮೂಲಭೂತ ಸೌಕರ್ಯ ಕಷ್ಟ!

ಇಲೆಕ್ಟ್ರಿಕ್ ಕಾರುಗಳ ಬೆಲೆ ಒಂದೆಡೆಯಾದರೆ, ಮತ್ತೊಂದೆಡೆ ದೇಶದಲ್ಲಿ ಅದಕ್ಕೆ ಬೇಕಾದ ಚಾರ್ಜಿಂಗ್ ಸೌಲಭ್ಯದ ಕೊರತೆ. ಇಲೆಕ್ಟ್ರಿಕ್ ವಾಹನಗಳು ಜನಪ್ರಿಯವಾಗಬೇಕಿದ್ದರೆ, ಮೊದಲು ಚಾರ್ಜಿಂಗ್ ಸೌಲಭ್ಯದತ್ತ ಗಮನಹರಿಸಬೇಕು. ಹಲವು ಜನರು ತಮ್ಮ ವಾಹನವನ್ನು ಮನೆಯಲ್ಲಿ ಪಾರ್ಕ್ ಮಾಡಲು ಸಾಧ್ಯವಿಲ್ಲ ಎಂಬಂತಾಗಿದ್ದರೆ ಅವರಿಗೆ ಇಲೆಕ್ಟ್ರಿಕ್ ವಾಹನವನ್ನು ನಿಗದಿತ ಸ್ಥಳದಲ್ಲಿ ಚಾರ್ಜ್ ಮಾಡಲು ಸಾಧ್ಯವಿಲ್ಲ ಎಂದು ಮಾರುತಿ ಸುಜುಕಿ ಹೇಳಿದೆ.

ಇಲೆಕ್ಟ್ರಿಕ್ ಕಾರು ಅಥವಾ ಹೈಡ್ರೋಜನ್ ಪವರ್ ವಾಹನಗಳು:

ಮಾರುತಿ ಸುಜುಕಿ ಹಾಗೂ ಟೋಯೋಟೊ ಈಗಾಗಲೇ ಗುಜರಾತ್ ನಲ್ಲಿ ಲಿಥಿಯಂ ಐಯೋನ್ ಬ್ಯಾಟರೀಸ್ ತಯಾರಿಕೆಗಾಗಿ ಕೈಜೋಡಿಸಿವೆ.

ಏತನ್ಮಧ್ಯೆ ಭವಿಷ್ಯದಲ್ಲಿ ಒಂದು ವೇಳೆ ಇಲೆಕ್ಟ್ರಿಕ್ ಕಾರುಗಳನ್ನು ಅಥವಾ ಜಲಜನಕ ಶಕ್ತಿಯ ವಾಹನ(ಹೈಡ್ರೋಜನ್ ಪವರ್)ಗಳನ್ನು ತಯಾರಿಸಬೇಕೇ ಎಂಬುದನ್ನು ಕಂಪನಿ ನಿರ್ಧಾರ ತೆಗೆದುಕೊಳ್ಳಲಿದೆ. ಈ ಬಗ್ಗೆ ಕಂಪನಿ ಅಧ್ಯಯನ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next