ತುಮಕೂರು: ದೇಶದಲ್ಲಿ ದಿನೇ ದಿನೆ ಏರುತ್ತಿರುವ ಬೆಲೆ ಏರಿಕೆ ಯಿಂದ ಸ್ಲಂ ಜನರು, ಬಡವರು ಬದುಕುವುದು ಕಷ್ಟವಾಗುತ್ತಿದೆ. ರಾಜ್ಯ ಸರ್ಕಾ ರದ ಬಜೆಟ್‌ನಲ್ಲಿಯೂ ಸ್ಲಂ ಜನರನ್ನು ಸರ್ಕಾರ ನಿರ್ಲ ಕ್ಷ್ಯಿಸಿದೆ ಎಂದು ಸ್ಲಂ ಜನಾಂದೋಲನ ಕರ್ನಾಟಕ ಸಂಚಾಲಕ ಎ. ನರಸಿಂಹಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.
ನಗರ ವಂಚಿತ ಯುವಜನ ಸಂಪನ್ಮೂಲ ಕೇಂದ್ರದಲ್ಲಿ ಭಾನುವಾರ ನಡೆದ ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಕಾರ್ಯಕಾರಿ ಸಮಿತಿ ಮತ್ತು ನಿವೇಶನರಹಿತ ಹೋರಾಟ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಡವರ ಬದುಕು ದಿನೇ ದಿನೆ ಕಷ್ಟವಾಗುತ್ತಿರುವ ಸಂದರ್ಭದಲ್ಲಿ ಕೇಂದ್ರ, ರಾಜ್ಯಸರ್ಕಾರ ದಿನನಿತ್ಯ ಬಳಸುವ ವಸ್ತುಗಳ ಮೇಲೆ ಏಕಾಏಕಿತೆರಿಗೆ ಹೆಚ್ಚಿಸುವ ಮೂಲಕ ದೇಶದ ಜನರ ಬದುಕನ್ನು ಅತಂತ್ರಗೊಳಿಸಲಾಗುತ್ತಿದೆ ಎಂದರು.
ವಲಯವಾರು ಅನುದಾನ ಹಂಚಿಕೆ: ಬಜೆಟ್ ಪೂರ್ವಸಭೆಯಲ್ಲಿ ಸ್ಲಂ ನಿವಾಸಿಗಳ ಜನಸಂಖ್ಯೆಗನುಗುಣವಾಗಿ 1 ಸಾವಿರ ಕೋಟಿ ರೂ. ಮೀಸಲಿಡಲು ಮತ್ತು ನಗರಪ್ರದೇಶಗಳಲ್ಲಿರುವ ನಿವೇಶನ ರಹಿತರಿಗೆ ವಸತಿ ಕಲ್ಪಿಸಲು ಲ್ಯಾಂಡ್ ಬ್ಯಾಂಕ್ ಯೋಜನೆ ಜಾರಿ ಹಾಗೂ ಸ್ಲಂನಿವಾಸಿಗಳಿಗೆ ನಿರ್ಮಿಸುವ ವಸತಿ ಯೋಜನೆಗಳಲ್ಲಿ 5ಲಕ್ಷ ಸಬ್ಸಿಡಿ ನೀಡಲು ಒಪ್ಪಿಗೆ ನೀಡಲಾಗಿತ್ತು. ಆದರೆ, ಈಎಲ್ಲಾ ಅಂಶಗಳನ್ನು ಕಡೆಗಣಿಸಿ ವಲಯವಾರು ಅನುದಾನ ಹಂಚಿಕೆ ಮಾಡಲಾಗಿದೆ. ಬಜೆಟ್‌ನಲ್ಲಿ ಸ್ಲಂ ಜನರಿಗೆ ಯಾವುದೇ ಹಣ ಮೀಸಲಿರಿಸದೇ ನಿರ್ಲಕ್ಷ್ಯ ತೋರಿರುವುದು ಖಂಡನೀಯ ಎಂದರು. ಹೋರಾಟದ ಸ್ವರೂಪ ಮತ್ತಷ್ಟು ಗಟ್ಟಿಗೊಳಿಸಲು ಏ.20ರಂದು ನಿವೇಶನ ರಹಿತರ ಸಮಾವೇಶ ಆಯೋಜಿಸಲು ಸಿದ್ಧತೆಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಂಘಟಿತ ಹೋರಾಟ ಅಗತ್ಯ: ಸಮಿತಿ ಗೌರವಾಧ್ಯಕ್ಷೆ ದೀಪಿಕಾ ಮಾತನಾಡಿ, ದೇಶದ ಬಹುಪಾಲುಮಹಿಳೆಯರು ಕುಟುಂಬದ ನಿರ್ವಹಣೆ ಜವಾಬ್ದಾರಿ ಒತ್ತು ಸಮಸ್ಯೆಗಳ ಮೇಲೆ ಸಮಸ್ಯೆ ಅನುಭವಿಸುತ್ತಿದ್ದಾರೆ.ಲೈಂಗಿಕ ಅಲ್ಪಸಂಖ್ಯಾತರು ಸಮಾಜ ಮತ್ತು ಕುಟುಂಬದಿಂದ ಬೇರ್ಪಟ್ಟು ನಿರ್ಲಕ್ಷ್ಯಕ್ಕೊಳಗಾಗಿದ್ದು, ನಾವು ಸಂಘಟಿತವಾಗಿ ಹೋರಾಟವನ್ನು ಮತ್ತಷ್ಟುಬಲಗೊಳಿಸಬೇಕಾಗಿದೆ ಎಂದರು.
ಸಭೆಯಲ್ಲಿ ಸ್ಲಂ ಸಮಿತಿಪದಾಧಿಕಾರಿ ಶಂಕರಯ್ಯ, ಮೋಹನ್, ಅರುಣ್, ಮಂಗಳಮ್ಮ, ತಿರುಮಲಯ್ಯ, ಹಯತ್‌ಸಾಬ್, ರಂಗನಾಥ್, ಪುಟ್ಟರಾಜು, ಧನಂಜಯ್, ಸೀಮಾ,ಅಂಜಿನಮ್ಮ, ಹನುಮಕ್ಕ, ತಿಮ್ಮಕ್ಕ, ಸುಧಾ, ಡಿ.ಎಂ ಗೌಡದೇವರಾಜು, ಬಾಬು, ಟಿ.ಆರ್ ಮೋಹನ್, ಭದ್ರಿ, ಶಾಂತಕುಮಾರ್ ಇದ್ದರು.
ನಿವೇಶನಕ್ಕೆ ಅರ್ಹ ಫಲಾನುಭವಿ ಗುರುತಿಸಿ :
ಜಿಲ್ಲಾಡಳಿತದಿಂದ ಮಾ.3ರಂದು ಅಪರ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ನಡೆದ ಸ್ಲಂ ಜನರ ಕುಂದುಕೊರತೆ ಸಭೆಯ ತೀರ್ಮಾನದಂತೆ 389 ವಿವಿಧ ಸ್ಲಂಗಳ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ಒದಗಿಸಿಲು ನಿಯಮಾನುಸಾರ ಪ್ರಸ್ತಾವನೆ ಸಲ್ಲಿಸಲು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಿದ್ದು, ವಿಶೇಷವಾಗಿ ಜಿಲ್ಲಾಡಳಿತ ನಿವೇಶನ ರಹಿತರಿಗೆ ಸರ್ಕಾರಿ ಭೂಮಿ ಗುರುತಿಸಿ 389 ಕುಟುಂಬಗಳಿಗೆ ನಿವೇಶನ ನೀಡಲು ಅಗತ್ಯ ಪ್ರಸ್ತಾವನೆ ಸಲ್ಲಿಸಲು 15 ದಿನ ಕಾಲಾವಕಾಶ ನೀಡಿದೆ. ನೈಜ ಫಲಾನುಭವಿಗಳನ್ನು ಸಮಿತಿ ಪದಾಧಿಕಾರಿಗಳು ಗುರುತಿಸಿ ನೀಡಬೇಕು ಎಂದು ನರಸಿಂಹಮೂರ್ತಿ ಹೇಳಿದರು.