Advertisement

ವಸತಿ ನಿಗಮದಲ್ಲಿ ಸ್ಲಂ ಬೋರ್ಡ್‌ ವಿಲೀನ

11:51 PM Feb 26, 2020 | Lakshmi GovindaRaj |

ಕೊಪ್ಪಳ: ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ಲಂ ಬೋರ್ಡ್‌ನ್ನು ರಾಜೀವ್‌ ಗಾಂಧಿ  ವಸತಿ ನಿಗಮದಲ್ಲಿ ವಿಲೀನ ಮಾಡುವ ಚಿಂತನೆ ನಡೆದಿದೆ. ಅದಕ್ಕೆ 2 ವರ್ಷ ಬೇಕಾಗುತ್ತದೆ. ಕೆಲವೊಂದು ಪ್ರಕ್ರಿಯೆಗಳು ನಡೆಯಬೇಕಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ಲಂ ಬೋರ್ಡ್‌ನಿಂದ ಸಾವಿರಾರು ಮನೆಗಳು ಮಂಜೂರಾಗಿವೆ. ಬಡವರಿಗೆ ಮನೆಗಳನ್ನು ಕಟ್ಟಿಸಿಕೊಡುವುದು ನಮ್ಮ ಕರ್ತವ್ಯವಾಗಬೇಕು. ಆದರೆ, ಐದು ವರ್ಷಗಳಲ್ಲಿ ಇಲ್ಲಿನ ವ್ಯವಸ್ಥೆ ನೋಡಿದರೆ ನನಗೆ ಬೇಸರ ತಂದಿದೆ. ಬೋರ್ಡ್‌ ಯಾರ ಮಾತಿಗೂ ಬಗ್ಗುತ್ತಿಲ್ಲ. ಅದನ್ನೊಂದು ಹಿಡಿತಕ್ಕೆ ತರಬೇಕು. ಹಾಗಾಗಿ, ರಾಜೀವ್‌ ಗಾಂಧಿ ನಿಗಮದೊಳಗೆ ಅದನ್ನು ವಿಲೀನ ಮಾಡುವ ಚಿಂತನೆಯಿದೆ. ಅದು ದಿಢೀರ್‌ ಮಾಡುವ ಪ್ರಕ್ರಿಯೆಯಲ್ಲ. ಎರಡು ವರ್ಷ ಕಾಲ ಸಮಯ ಬೇಕಾಗುತ್ತದೆ ಎಂದರು.

ಐದು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಹಳ್ಳಿ ಜನರಿಗೆ ಮನೆ ಕೊಡುವ ಕೆಲಸವನ್ನು ಜೂನ್‌ ವೇಳೆಗೆ ಪೂರ್ಣಗೊಳಿಸಲಿದ್ದೇವೆ. 2019-20ರ ಜೂನ್‌ ಒಳಗಡೆ ವಸತಿ ಇಲಾಖೆಯ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಒಂದೇ ತಾಲೂಕಿನಲ್ಲಿ ವಸತಿ ಯೋಜನೆಯಡಿ 450 ದೂರನ್ನು ಪತ್ರಕರ್ತರೊಬ್ಬರು ಕೊಟ್ಟಿದ್ದರು. ಎಲ್ಲವನ್ನೂ ಪರಿಶೀಲಿಸಿದಾಗ ಎಲ್ಲವೂ ಬೋಗಸ್‌ ಎಂಬುದು ದೃಢಪಟ್ಟಿದೆ. ಈ ಬಗ್ಗೆ ಅ ಧಿವೇಶನದಲ್ಲಿ ಸವಿಸ್ತಾರವಾಗಿ ಮಾತನಾಡುತ್ತೇನೆ ಎಂದರು.

ಈ ಬಾರಿ ಬಜೆಟ್‌ನಲ್ಲಿ ವಸತಿ ಇಲಾಖೆಗೆ ಅನುದಾನ ಕೇಳಿದ್ದೇನೆ. ಕಾರ್ಯ ನಿರ್ವಹಿಸುವ ಕುರಿತು ಸಿಎಂ ಅವರಿಗೆ ಎಲ್ಲವನ್ನು ವಿವರಿಸಿದ್ದೇನೆ. ಸಿಎಂ ಸ್ಪಂದಿಸಿದ್ದಾರೆ. ವಸತಿಯ ಅಕ್ರಮ ತಡೆಗೆ ಹೊಸ ವ್ಯವಸ್ಥೆ ಜಾರಿ ಮಾಡಲಾಗಿದೆ. ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌, ಜಿಪಿಎಸ್‌ ಅಳವಡಿಕೆ ನಡೆಯಲಿದೆ. ಎಲ್ಲವನ್ನು ಒಂದು ಹಂತಕ್ಕೆ ತರುವುದು ಅಸಾಧ್ಯ. ಹಂತ, ಹಂತವಾಗಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next