Advertisement

ಸ್ಲಂ ಪ್ರದೇಶ ಗುಡಿಸಲು ಮುಕ್ತಗೊಳಿಸಿ

04:17 PM Mar 23, 2022 | Team Udayavani |

ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಈಗಾಗಲೇ ಘೋಷಿತ ಸ್ಲಂ ಪ್ರದೇಶಗಳನ್ನು ಗುಡಿಸಲು ಮುಕ್ತಗೊಳಿಸಿ, ಅಗತ್ಯ ಮೂಲ ಸೌಕರ್ಯ ಒದಗಿಸಬೇಕು ಎಂದು ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣ ಸಮಿತಿ ಒತ್ತಾಯಿಸಿದೆ.

Advertisement

ಈ ಕುರಿತು ಸಮಿತಿ ಪ್ರಮುಖರು ಪೌರಾಯುಕ್ತರಿಗೆ ಮನವಿ ಸಲ್ಲಿಸಿ, ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ 48ಕ್ಕೂ ಹೆಚ್ಚು ಗುಡಿಸಲು ಪ್ರದೇಶಗಳನ್ನು ಸ್ಲಂ ಕಾಯ್ದೆ 1973 ಪ್ರಕಾರ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಸ್ಲಂಗಳು ಘೋಷಣೆಯಾಗಿ 30- 40 ವರ್ಷಗಳು ಕಳೆದರೂ ವಸತಿ, ಮೂಲ ಸೌಕರ್ಯಗಳನ್ನು ಕಲ್ಪಿಸಬೇಕಾದ ಅಧಿಕಾರಿಗಳು ಕೊಳಚೆ ಪ್ರದೇಶಗಳನ್ನು ಎತ್ತಂಗಡಿಗೆ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.

ನಗರಸಭೆ ಪೌರಾಯುಕ್ತರು ಹಾಗೂ ಅಧಿಕಾರಿಗಳು ಅತಿಕ್ರಮಣ ನೆಪದಲ್ಲಿ ಗುಡಿಸಲುಗಳನ್ನು ತೆರುವುಗೊಳಿಸಲು ಮುಂದಾಗಿರುವುದನ್ನು ಕೊಡಲೇ ಕೈಬಿಡಬೇಕು. ಘೋಷಿತ ಕೋಳಗೇರಿ ಪ್ರದೇಶಗಳ ಜನರಿಗೆ ಪುನರ್‌ ವಸತಿ ಕಲ್ಪಿಸದೇ, ಯಾವುದೆ ಕಾರಣಕ್ಕೂ ತೆರುವುಗೊಳಿಸಬಾರದು ಎಂದು ಒತ್ತಾಯಿಸಿದರು.

ಜಿಲ್ಲಾ ಸ್ಲಂ ಸಮಿತಿ ಜಿಲ್ಲಾ ಅಧ್ಯಕ್ಷ ಇಮಿ¤ಯಾಜ್‌ ಆರ್‌. ಮಾನ್ವಿ, ಉಪಾಧ್ಯಕ್ಷ ರವಿಕುಮಾರ ಬೆಳಮಕರ, ರಾಚೋಟೇಶ್ವರ ನಗರದ ಸ್ಲಂ ಪ್ರದೇಶದ ಶಾಖೆ ಘಟಕದ ಅಧ್ಯಕ್ಷ ಇಬ್ರಾಹಿಂ ಮುಲ್ಲಾ, ಮಲೇಶಪ್ಪ ಕಲಾಲ, ಮುನ್ನಾ ಅಗಡಿ, ದಾವಲಸಾಬ ಈಟಿ, ಕಾಸೀಮ ಕವಲೂರ, ಶಂಕರಪ್ಪ ಹದ್ಲಿ, ಬಾಬುಸಾಬ ಗಡಾದ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next