Advertisement

ವಾಷಿಂಗ್ಟನ್‌: ಸ್ಪೇಸ್‌ ಲಾಂಚ್‌ ಸಿಸ್ಟಂ ಯಶಸ್ವಿ ಪರೀಕ್ಷೆ

06:47 PM Jun 24, 2022 | Team Udayavani |

ವಾಷಿಂಗ್ಟನ್‌: ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ), ಸ್ಪೇಸ್‌ ಲಾಂಚ್‌ ಸಿಸ್ಟಂ (ಎಸ್‌ಎಲ್‌ಎಸ್‌) ಎಂಬ ರಾಕೆಟ್‌ನಲ್ಲಿ ಹಲವಾರು ಪ್ರಯೋಗಗಳನ್ನು ನಡೆಸಿದೆ.

Advertisement

2024ರಲ್ಲಿ ಚಂದ್ರನಲ್ಲಿಗೆ “ಓರಿಯನ್‌ ಕ್ಯಾಪ್ಸೂಲ್‌’ ಎಂಬ ಗಗನನೌಕೆ ಪ್ರಯಾಣಿಸಲಿದೆ. ಅದನ್ನು ಭೂಮಿಯ ಗುರುತ್ವಾಕರ್ಷಣೆ ವ್ಯಾಪ್ತಿಯಿಂದ ಆಚೆಗೆ ಕೊಂಡೊಯ್ಯಲಿರುವುದು ಇದೇ ಎಸ್‌ಎಲ್‌ಎಸ್‌. ಹಾಗಾಗಿ, ಬಾಹ್ಯಾಕಾಶ ಪ್ರಯಾಣಕ್ಕೆ ಅನುಗುಣವಾಗಿ ರಾಕೆಟ್‌ನಲ್ಲಿ “ವೆಟ್‌ ಡ್ರೆಸ್‌ ರಿಹರ್ಸಲ್‌’ ಇತ್ಯಾದಿ ಪ್ರಯೋಗ ಕೈಗೊಳ್ಳಲಾಗಿದೆ.

“30 ಅಂತಸ್ತುಗಳುಳ್ಳ ರಾಕೆಟ್‌ ಇಂಧನ ಟ್ಯಾಂಕ್‌ಗಳಿಂದ ಸೋರಿಕೆಯನ್ನು ಪರೀಕ್ಷಿಸಲು ಹಾಗೂ ಕೌಂಟ್‌ಡೌನ್‌ ಅವಧಿಯಲ್ಲಿ ರಾಕೆಟ್‌ ತೋರಬಹುದಾದ ಸಾಮರ್ಥ್ಯವನ್ನು ಪರಿಗಣಿಸಲಾಯಿತು ಎಂದು ನಾಸಾ ಹೇಳಿದೆ. ಸದ್ಯದಲ್ಲೇ, ಕೆನಡಿ ಉಡಾವಣಾ ಕೇಂದ್ರದಿಂದ ಓರಿಯನ್‌ ಕ್ಯಾಪ್ಸೂಲ್‌ ಹೊತ್ತು ಎಸ್‌ಎಲ್‌ಎಸ್‌ ರಾಕೆಟ್‌ ಉಡಾವಣೆಯಾಗಲಿದೆ.

ಅಂದಹಾಗೆ, ಓರಿಯನ್‌ ಕ್ಯಾಪ್ಸೂಲ್‌ ಮೊದಲ ಪಯಣದಲ್ಲಿ ಮನುಷ್ಯರು ಭಾಗಿಯಾಗುತ್ತಿಲ್ಲ. ಅಲ್ಲದೆ, ಓರಿಯನ್‌ ಗಗನನೌಕೆಯನ್ನು ಹೊತ್ತೂಯ್ಯಲಿರುವ ಎಸ್‌ಎಲ್‌ಎಸ್‌ ರಾಕೆಟ್‌, ಚಂದ್ರನಿಂದ ಕ್ಯಾಪ್ಸೂಲ್‌ ಅನ್ನು ಪುನಃ ಭೂಮಿಗೆ ಕರೆತರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next