Advertisement
ಕಿನ್ನಿಗೋಳಿ ಮೂರು ಕಾವೇರಿಯ ಮಾರಿ ಗುಡಿಯಿಂದ ಕಾರ್ನಾಡ್ ಜಂಕ್ಷನ್ ತನಕ ಹೆದ್ದಾರಿಯ ಎರಡೂ ಬದಿಗಳಲ್ಲಿ ಅಂದರೆ ಈಗ ಇದ್ದ 5. 5 ಡಾಮರು ರಸ್ತೆಯನ್ನು ಏಳು ಮೀಟರ್ ಅಗಲಗೊಳಿಸಲಾಗುವುದು. ಆದರೆ ಕಾಮಗಾರಿ ಆರಂಭವಾಗಿ ಎಂಟು ತಿಂಗಳು ಕಳೆದರೂ ಇನ್ನು ಆಮೆನಡಿಗೆಯಲ್ಲಿ ನಡೆಯುತ್ತಿದೆ.
ಕಿನ್ನಿಗೋಳಿ ಭಾಗದಲ್ಲಿ ರಸ್ತೆಯ ಕೆಲವು ಅಂಚಿನಲ್ಲಿ ಮೆಸ್ಕಾಂ ಇಲಾಖೆಯ ವಿದ್ಯುತ್ ಕಂಬಗಳು ತೆರವುಗೊಂಡಿವೆ. ರಸ್ತೆಯ ಅಂಚಿನಲ್ಲಿ ಇದ್ದ ಮರಗಳ ತೆರವು ಮಾಡದಿರುವುದು ಕಾಮಗಾರಿ ವಿಳಂಬವಾಗಲು ಕಾರಣ ಎನ್ನಲಾಗಿದೆ. 60 ಮರಗಳ ತೆರವು ಅಗತ್ಯ
100 ಕ್ಕೂ ಹೆಚ್ಚು ಮರಗಳನ್ನು ತೆರವುಗೊಳಿಸಲು ಸರ್ವೆ ನಡೆದಿದೆ. ಅದರಲ್ಲಿ ಕೆಲವು ಮರಗಳು ರಸ್ತೆಯ ಅಂಚಿನಲ್ಲಿ ಇದ್ದು, ಅಂತಹ 60 ಮರಗಳನ್ನು ಕಡಿಯಬೇಕಾಗಿದೆ. ಹೀಗಾಗಿ ಕಾಮಗಾರಿಗೆ ಹಿನ್ನಡೆಯಾಗಿದೆ. ನೀರಿನ ಪೈಪ್ ಹಾಗೂ ದೂರವಾಣಿ ಕೇಬಲ್‌ಗಳಿಂದ ಕಾಮಗಾರಿಗೆ ಹೆಚ್ಚಿನ ತೊಡಕು ಉಂಟಾಗಿದೆ. ಅದರಲ್ಲೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪ್‌ಗಳು ಕೆಲವು ಕಡೆಗಳಲ್ಲಿ ಒಂದು ಅಡಿ ಆಳದಲ್ಲಿ ಹಾಕಿರುವುದರಿಂದ ಸಮಸ್ಯೆ ಆಗಿದೆ ಎನ್ನುತ್ತಾರೆ ಗುತ್ತಿಗೆದಾರರು.
Related Articles
ಕಿನ್ನಿಗೋಳಿ- ಮೂಲ್ಕಿ ರಾಜ್ಯ ಹೆದ್ದಾರಿ ಅಗಲಗೊಳಿಸುವ ಕಾಮಗಾರಿ ನಡೆಸಿದ ಸಂದರ್ಭ ರಸ್ತೆಯ ಬದಿಯಲ್ಲಿ ಈ ಹಿಂದೆ ಇದ್ದ ಚರಂಡಿಯನ್ನು ಮುಚ್ಚಲಾಗಿದೆ. ಆದರೆ ಹೊಸ ಚರಂಡಿ ಮಾಡದೇ ಇರುವುದರಿಂದ ಕಿನ್ನಿಗೋಳಿ ಬಟ್ಟಕೋಡಿ, ರಾಜಾಂಗಣ ಹತ್ತಿರ ಮೂರು ಕಾವೇರಿಯಲ್ಲಿ , ಎಸ್.ಕೋಡಿ ಪ್ರದೇಶದಲ್ಲಿ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ.
Advertisement
ಮರ, ವಿದ್ಯುತ್ ಕಂಬ ತೆರವಾಗದೆ ಕಾಮಗಾರಿಗೆ ತೊಡಕು :ರಸ್ತೆಯ ಅಂಚಿನಲ್ಲಿರುವ ವಿದ್ಯುತ್ ಕಂಬ ಹಾಗೂ ಮರಗಳ ತೆರವು ಆಗಿಲ್ಲ. ಇದರಿಂದ ಕಾಮಗಾರಿಗೆ ತೊಡಕು ಉಂಟಾಗಿದೆ. ಕಿನ್ನಿಗೋಳಿ ಪೇಟೆಯಲ್ಲಿ ಇಕ್ಕಲೆಯಲ್ಲಿ ಒಂದು ಕಿ.ಮೀ. ನಷ್ಟು ಕಾಂಕ್ರೀಟ್ ಚರಂಡಿ ಕಾಮಗಾರಿ ನಡೆಯಬೇಕಾಗಿದೆ. ಆದರೆ ವಿದ್ಯುತ್ ಕಂಬಗಳು, ದೂರವಾಣಿ ಕೇಬಲ್, ಕುಡಿಯುವ ನೀರಿನ ಪೈಪ್‌ಲೈನ್ ಹಾಗೂ ಕೆಲವು
ಕಟ್ಟಡಗಳು ರಸ್ತೆ ಅಂಚಿನಲ್ಲಿ ಇರುವುದರಿಂದ ಸಮಸ್ಯೆ ಆಗಿದೆ.
– ಗೋಪಾಲ್
ಸಹಾಯಕ ಎಂಜಿನಿಯರ್, ರಾಜ್ಯ ಹೆದ್ದಾರಿ ಇಲಾಖೆ ರಘುನಾಥ ಕಾಮತ್ ಕೆಂಚನಕೆರೆ