Advertisement
ಈ ರಸ್ತೆಯನ್ನೇ ಅವಲಂಬಿಸಿಕೊಂಡಿರುವ ಈ ಭಾಗದ ಜನ ಧೂಳಿನಿಂದಾಗಿ ನಿತ್ಯ ಹೈರಾಣಾಗಿದ್ದಾರೆ. ಈ ಬಾರಿಯಾದರೂ ಈ ರಸ್ತೆಯ ಅಭಿವೃದ್ಧಿಗೆ ಜನಪ್ರತಿನಿಧಿಗಳು ಮುಂದಾಗಲಿ ಎನ್ನುವುದು ಸಾರ್ವಜನಿಕರ ಬೇಡಿಕೆಯಾಗಿದೆ.
Related Articles
Advertisement
ಈ ಮಣ್ಣಿನ ರಸ್ತೆಗೆ ಡಾಮರು ಆಗಬೇಕು ಎನ್ನುವ ಬೇಡಿಕೆ ಇಂದು ನಿನ್ನೆಯದಲ್ಲ. ಬರೋಬ್ಬರಿ 20 ವರ್ಷಗಳಿಗೂ ಹಿಂದಿನಿಂದಲೂ ಈ ರಸ್ತೆಗೆ ಡಾಮರು ಕಾಮಗಾರಿ ಆಗಬೇಕು ಎನ್ನುವುದು ಇಲ್ಲಿನ ಜನರ ಬೇಡಿಕೆಯಾಗಿದೆ. ಈ ಮಾರ್ಗವಾಗಿ ಆಜ್ರಿಯಿಂದ ಬಡಬಾಳು ಮೂಲಕವಾಗಿ ಜನ್ಸಾಲೆ, ಅಂಪಾರು, ಕುಂದಾಪುರಕ್ಕೂ ಸಂಚರಿಸಲು ಹತ್ತಿರದ ಮಾರ್ಗವಾಗಿದೆ. ಡಾಮರು ಕಾಮಗಾರಿ ಯಾದರೆ ಸಾವಿರಾರು ಮಂದಿಗೆ ಪ್ರಯೋಜನವಾಗಲಿದೆ. ಈ ಮಾರ್ಗದಲ್ಲಿ 3-4 ಶಾಲಾ ಬಸ್‌ಗಳು, ನೂರಾರು ಬೇರೆ ಬೇರೆ ವಾಹನಗಳು ಸಂಚರಿಸುತ್ತವೆ. ಸಾವಿರಾರು ಮಂದಿ ಇದೇ ರಸ್ತೆಯನ್ನು ಆಶ್ರಯಿಸಿದ್ದಾರೆ.
ಕಾಮಗಾರಿ ಆರಂಭಕ್ಕೆ ತೊಡಕು :
ಈ ಆಜ್ರಿ- ಬಡಬಾಳು- ಜಡ್ಡಿಮೂಲೆವರೆಗಿನ 8 ಕಿ.ಮೀ. ರಸ್ತೆಯ ಪೈಕಿ 1.7 ಕಿ.ಮೀ.ವರೆಗಿನ ರಸ್ತೆಯ ಕಾಂಕ್ರೀಟ್ ಕಾಮಗಾರಿ ಗೆ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಮುತುವರ್ಜಿಯಲ್ಲಿ ವಾರಾಹಿ ಯೋಜನೆಯಡಿ ಅನುದಾನ ಮಂಜೂರಾಗಿದೆ. ಈ ರಸ್ತೆ ಜತೆಗೆ ಇನ್ನು 3 ಕಡೆಗಳ ರಸ್ತೆ ಅಭಿವದ್ಧಿಗೆ ಒಟ್ಟಾರೆ 4 ಕೋ.ರೂ. ಅನುದಾನ ಮಂಜೂರಾಗಿತ್ತು. ಆದರೆ ಈ 1.7 ಕಿ.ಮೀ. ಪ್ರದೇಶದಲ್ಲಿ ಕೆಲವೆಡೆ ಮೀಸಲು ಅರಣ್ಯ ಪ್ರದೇಶದಲ್ಲಿ ರಸ್ತೆ ಹಾದು ಹೋಗುವುದರಿಂದ ತೊಡಕಾಗಿದೆ.
1.7 ಕಿ.ಮೀ.ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶೀಘ್ರ ಆರಂಭಿಸಲಾಗುವುದು. ಮೀಸಲು ಅರಣ್ಯ ಪ್ರದೇಶದಲ್ಲಿ ಕಾಮಗಾರಿ ನಡೆಸಲು ಈಗಾಗಲೇ ಸಂಬಂಧಪಟ್ಟ ಇಲಾಖೆಗೆ ಪ್ರಸ್ತಾವ ಕಳುಹಿಸಲಾಗಿದೆ. ಅಲ್ಲಿಂದ ಇನ್ನೂ ಅನುಮೋದನೆ ಸಿಗಬೇಕಿದೆ. ಅದುಸಿಗದಿದ್ದರೂ, ಆ ಪ್ರದೇಶ ಹೊರತುಪಡಿಸಿ ಉಳಿದೆಡೆ ರಸ್ತೆಗೆ ಕಾಂಕ್ರೀಟ್ ಕಾಮಗಾರಿ ಮಾಡಲಾಗುವುದು. – ಕಿರಣ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ವಾರಾಹಿ ನೀರಾವರಿ ನಿಗಮ