ವಾಡಿ: ಪಟ್ಟಣದ ಇಂದಿರಾ ಕಾಲೋನಿ ಬಡಾವಣೆ ವೃತ್ತದಲ್ಲಿ ನಿರ್ಮಿಸಲಾಗುತ್ತಿರುವ ಕೋಟಿ ರೂ. ವೆಚ್ಚದ ಅಂಬೇಡ್ಕರ್ ಭವನ ಕಟ್ಟಡ ಕಾಮಗಾರಿ ಕಳೆದ ಐದು ವರ್ಷಗಳಿಂದ ಕುಂಟುತ್ತಾ ಸಾಗಿದೆ.
ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಸಮಾಜ ಕಲ್ಯಾಣ ಸಚಿವರಾಗಿದ್ದ ವೇಳೆ ಬೌದ್ಧ ಸಮಾಜದ ನಾಯಕರು ಸಲ್ಲಿಸಿದ ಕಲ್ಯಾಣ ಮಂಟಪದ ಬೇಡಿಕೆಗೆ ಸ್ಪಂದಿಸಿ, ಅಂಬೇಡ್ಕರ್ ಭವನ ನಿರ್ಮಿಸಲು ಮುಂದಾಗಲಾಗಿತ್ತು.ಅದಕ್ಕಾಗಿ ಇಲಾಖೆಯಿಂದ 1.5 ಕೋಟಿ ರೂ. ವೆಚ್ಚದ ಅನುದಾನ ಮೀಸಲಿಟ್ಟು ಅಡಿಗಲ್ಲುನೆರವೇರಿಸಲಾಗಿತ್ತು. 2016-17ರಲ್ಲಿ ಕಾಮಗಾರಿ ಕೈಗೆತ್ತಿಕೊಂಡ ಭೂಸೇನಾ ನಿಗಮ (ಲ್ಯಾಂಡ್ ಆರ್ಮಿ) ಐದು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳಿಸಿಲ್ಲ.
ಅಂಬೇಡ್ಕರ್ ಭವನ ಕಟ್ಟಡ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದರಿಂದ ಭವನದವಿಶಾಲವಾದ ನೆಲಮಾಳಿಗೆ ಆವರಣದಲ್ಲಿ ಚರಂಡಿನೀರು ಸಂಗ್ರಹವಾಗಿ, ಸಾರ್ವಜನಿಕರ ಮಲ ಮೂತ್ರವಿಸರ್ಜನೆಗೆ ಬಳಕೆಯಾಗುತ್ತಿದೆ. ದೀರ್ಘ ಕಾಲಕಟ್ಟಡ ಕಾಮಗಾರಿ ಸ್ಥಗಿತವಾಗಿದ್ದರಿಂದ ನಾಯಿ,ಹಂದಿಗಳ ವಾಸಸ್ಥಾನವಾಗಿ ಪರಿವರ್ತನೆಯಾಗಿದೆ.ಸ್ಲಂ ಬಡಾವಣೆ ಮಹಿಳೆಯರು ಬಹಿರ್ದೆಸೆಗೆ ಬಳಕೆ ಮಾಡಿಕೊಳ್ಳುತ್ತಿದ್ದರೂ ಹೇಳುವವರು, ಕೇಳುವವರು ಇಲ್ಲದಂತಾಗಿದೆ.
ಭವನ ನಿರ್ಮಾಣದ ಜವಾಬ್ದಾರಿ ಹೊತ್ತ ಭೂಸೇನಾ ನಿಗಮದ ಅಧಿಕಾರಿಗಳು ಅಂಬೇಡ್ಕರ್ ಹೆಸರಿನ ಕಟ್ಟಡದ ಪಾವಿತ್ರ್ಯತೆ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಅಲ್ಲದೇ ಬಿಜೆಪಿ ಸರಕಾರದಿಂದಅನುದಾನ ಬಿಡುಗಡೆಯಾಗುವಲ್ಲಿಯೂವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ.
ಶಾಸಕ ಪ್ರಿಯಾಂಕ್ ಖರ್ಗೆ ಸಮಾಜ ಕಲ್ಯಾಣ ಸಚಿವರಾಗಿದ್ದಾಗ ವಾಡಿ ನಗರದ ಅಂಬೇಡ್ಕರ್ ಭವನ ಕಾಮಗಾರಿಗೆ ಕೋಟಿ ರೂ.ಅನುದಾನ ಮೀಸಲಿಡಲಾಗಿತ್ತು. ಆದರೆ ಈಗ ಅಧಿಕಾರದಲ್ಲಿರುವ ಬಿಜೆಪಿ ಸರಕಾರ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಅಲ್ಲದೆ ಅಧಿಕಾರಿಗಳೂ ನಿರ್ಲಕ್ಷé ತೋರುತ್ತಿದ್ದಾರೆ. ಬೇಜವಾಬ್ದಾರಿಮುಂದುವರಿದರೆ ಹೋರಾಟ ಮಾಡಲಾಗುವುದು.
-ಶ್ರವಣಕುಮಾರ ಮೊಸಲಗಿ, ತಾಲೂಕು ಅಧ್ಯಕ್ಷ, ಮಾನವ ಬಂಧುತ್ವ ವೇದಿಕೆ
ಅಂಬೇಡ್ಕರ್ ಭವನ ಕಾಮಗಾರಿ ನಿರ್ಮಾಣಕ್ಕೆ ಲಾಕ್ ಡೌನ್, ಚುನಾವಣಾ ನೀತಿಸಂಹಿತೆ ಅಡ್ಡಿಯಾಗಿತ್ತು. ಅಲ್ಲದೇ ಹಂತಹಂತವಾಗಿ ಕಟ್ಟಡದ ನೀಲನಕ್ಷೆ ಬದಲಾಗುತ್ತಿದೆ. ಇನ್ನೂ 70 ಲಕ್ಷ ರೂ. ಅನುದಾನ ಬಿಡುಗಡೆಯಾಗಬೇಕಿದೆ. ಹಣ ಕಡಿಮೆ ಬಿದ್ದರೆ ಶಾಸಕರು ಇನ್ನಷ್ಟು ಅನುದಾನ ಹೆಚ್ಚಿಸುವ ಇಚ್ಚೆ ವ್ಯಕ್ತಪಡಿಸಿದ್ದಾರೆ. ಈಗಮತ್ತೆ ಕೆಲಸ ಆರಂಭಿಸಿದ್ದೇವೆ. ಕಟ್ಟಡ ಪೂರ್ಣಗೊಳ್ಳಲು ಇನ್ನೂ ಒಂದು ವರ್ಷ ಬೇಕಾಗುತ್ತದೆ. ಬಹುದೊಡ್ಡ ಭವನವಾಗಿ ನಿರ್ಮಾಣಗೊಳ್ಳಲಿದೆ.
-ಮಹ್ಮದ್ ಮಹೆಬೂಬ್, ಕಿರಿಯ ಅಭಿಯಂತರ, ಭೂಸೇನಾ ನಿಗಮ
-ಮಡಿವಾಳಪ್ಪ ಹೇರೂರ