Advertisement
ಅವೈಜ್ಞಾನಿಕ ಚಿಂತನೆಯಿಂದ ಸಮಸ್ಯೆ ಕಳೆದೆರಡು ವರ್ಷಗಳಿಂದ ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಆದರೆ ಭೌಗೋಳಿಕ ಸೂಕ್ಷ್ಮಗಳನ್ನು ಅರಿಯದ ಪರಿಣಾಮ, ಅವೈಜ್ಞಾನಿಕ ಕಾಮಗಾರಿಯಿಂದ ಗುಡ್ಡ ಕುಸಿತ ಉಂಟಾಗಿತ್ತು. ಇದು ಮಳೆಗಾಲದಲ್ಲಿ ವಾಹನ ಸವಾರರಿಗೆ ಸಮಸ್ಯೆಯಾಗಿ ಕಾಡಿತ್ತು. ನಾಲ್ಕೈದು ಬಾರಿ ಗುಡ್ಡ, ಬಂಡೆಗಳು ಕುಸಿದು ಮಂಗಳೂರು-ಗೋವಾ ಸಂಚಾರಕ್ಕೆ ತಡೆಯಾಗಿತ್ತು. ಇದರಿಂದ ಬೇರೆ ವ್ಯವಸ್ಥೆ ಕಲ್ಪಿಸಬೇಕಾಗಿತ್ತು.
ಗುಡ್ಡದಲ್ಲಿ ಜೇಡಿಮಣ್ಣು ಹಾಗೂ ನೀರಿನ ಒಳ ಹರಿವು ಅಧಿಕವಾಗಿರುವ ಕಾರಣ ಗುಡ್ಡ ಕುಸಿತವನ್ನು ನಿಯಂತ್ರಿಸುವುದೇ ಸವಾಲಾಗಿತ್ತು. ಜತೆಗೆ ಕಾಮಗಾರಿ ನಿರ್ಲಕ್ಷ್ಯದಿಂದ ಸಾರ್ವಜನಿಕರಿಗೆ ತೊಂದರೆಯಾದ ಪರಿಣಾಮ ಜಿಲ್ಲಾಡಳಿತ ಕಾಮಗಾರಿ ನಡೆಸುವ ಕಂಪೆನಿಯ ವಿರುದ್ಧ ಪ್ರಕರಣ ದಾಖಲಿಸಿತ್ತು. ಏನಿದು ಸ್ಲೋಪ್ ಪ್ರೊಟೆಕ್ಷನ್ ವಾಲ್?
ಕುಸಿಯುವ ಭಾಗದಲ್ಲಿ ಗುಡ್ಡವನ್ನು ಇಳಿಜಾರಾಗಿಸಿ ಕಬ್ಬಿಣದ ರಾಡ್ ಹಾಗೂ ಮೆಶ್ ಅಳವಡಿಸಲಾಗುತ್ತದೆ. ಇದಕ್ಕೆ 10 ಮಿ.ಮೀ. ಕಾಂಕ್ರೀಟ್ ಹಾಕ ಲಾಗುತ್ತದೆ. ಜತೆಗೆ ಗುಡ್ಡದ ಮೇಲೆ ಆಸ್ಟ್ರೇಲಿಯಾ ಮೂಲದ ಗಿಡಗಳನ್ನು (ಹುಲ್ಲು) ನೆಡಲಾಗುತ್ತದೆ. ಇದರ ಬೇರುಗಳು ಆಳಕ್ಕೆ ಹೋಗುವುದರಿಂದ ಮಣ್ಣಿನ ಸವಕಳಿ ಕಡಿಮೆಯಾಗುತ್ತದೆ. ನೀರು ಸರಾಗವಾಗಿ ಹರಿಯುತ್ತದೆ.
Related Articles
ಈ ಮಳೆಗಾಲಕ್ಕೆ ಮುನ್ನ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಚರಂಡಿ ಹಾಗೂ ನೀರಿನ ಸರಾಗ ಹರಿವಿಗೆ ಪೈಪ್ ಗಳನ್ನು ಅಳವಡಿಸಲಾಗುತ್ತಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳ್ಳಲಿದೆ.
– ಯೋಗೇಂದ್ರಪ್ಪ, ಐ.ಆರ್.ಬಿ. ಪ್ರೊಜೆಕ್ಟ್ ಮ್ಯಾನೇಜರ್
Advertisement
— ಅರುಣ ಕುಮಾರ್ ಶಿರೂರು