Advertisement
ಕೊರೊನಾ ಹಿನ್ನೆಲೆ ಬಹುತೇಕ ಐಟಿ ಕಂಪನಿಗಳು ಸೇರಿದಂತೆ ಅರ್ಧಕ್ಕರ್ಧ ಖಾಸಗಿ ವಲಯ ವರ್ಕ್ ಫ್ರಂ ಹೋಂ ಮೊರೆ ಹೋಗಿದೆ. ಮತ್ತೂಂದೆಡೆ ಆನ್‌ಲೈನ್ ತರಗತಿಗಳು ನಡೆಯುತ್ತಿವೆ. ಇದರಿಂದ ನಗರದ ವಸತಿ ಪ್ರದೇಶಗಳಲ್ಲಿ ಇಂಟರ್‌ನೆಟ್ ಬಳಕೆದಾರರ ಪ್ರಮಾಣ ಗಣನೀಯ ಏರಿಕೆಯಾಗಿದೆ.
Related Articles
Advertisement
ಕೇಬಲ್ ಅಳವಡಿಕೆಗೆ ಅನುಮತಿ ಯಾಕೆ ಲಭ್ಯವಿಲ್ಲ?
ರಸ್ತೆಯನ್ನು ನಿರ್ದಿಷ್ಟ ಆಳದಲ್ಲಿ ಅಗೆದು ಇಂಟರ್‌ನೆಟ್ ಕೇಬಲ್‌ಗಳನ್ನು ಅಳವಡಿಸಲಾಗುತ್ತದೆ. ಕಾಮಗಾರಿ ನಂತರ ರಸ್ತೆ ಗುಂಡಿಗಳು ಹಾಗೆ ಉಳಿಯುತ್ತವೆ. ನಗರದಲ್ಲಿ ರಸ್ತೆ ಗುಂಡಿ ಹೆಚ್ಚಳಕ್ಕೆ ಟೆಲಿಕಾಂ ಕಂಪನಿ ಕಾಮಗಾರಿಯೂ ಕಾರಣ ಎಂದು ಹೇಳಲಾಗುತ್ತಿದೆ. ಇದೇಕಾರಣಕ್ಕೆ ಕೇಬಲ್ ಅಳಡಿಸುವ ಟೆಲಿಕಾಂ ಕಂಪನಿಗಳಿಗೆ ಬಿಬಿಎಂಪಿ ಅನುಮತಿ ನೀಡುತ್ತಿಲ್ಲ.
ಇಸ್‌ಆಪ್ ಡುಯಿಂಗ್ ಬಿಸಿನೆಸ್ ಮಾದರಿ ಅಳವಡಿಸಿ
ಸದ್ಯ ಇಂಟರ್‌ನೆಟ್ ಮೂಲಸೌಕರ್ಯವಾಗಿ ಬದಲಾಗುತ್ತಿದೆ. ದೇಶದಲ್ಲಿಯೇ ಮುಂಬೈ ಹೊರತು ಪಡಿಸಿದರೆ ಬೆಂಗಳೂರಿನಲ್ಲಿ ಟೆಲಿಕಾಂ ಮಾರುಕಟ್ಟೆ ಹೆಚ್ಚಿದೆ. ಟೆಲಿಕಾಂ ಕಂಪನಿಯೊಂದು ಪ್ರತಿ ತಿಂಗಳು 200 ಕಿ.ಮೀ. ನಷ್ಟು ಕೇಬಲ್‌ಗಳನ್ನು ವಿಸ್ತರಿಸುವ ಅಗತ್ಯವಿದೆ. ಆದರೆ, ನಗರದಲ್ಲಿ ಒಂದು ವರ್ಷಕ್ಕೆ ಗರಿಷ್ಠ 150 ಕಿ.ಮೀ.ಕೇಬಲ್ ವಿಸ್ತರಿಸಲು ಅನುಮತಿ ಲಭ್ಯವಾಗುತ್ತಿಲ್ಲ. ಕಾನೂನಿನ ಪ್ರಕಾರ ಟೆಲಿಕಾಂ ಮೂಲಸೌಕರ್ಯ ಅಳವಡಿಕೆಗೆ ಅನುಮತಿ ನೀಡಬೇಕು. ಇತರೆ ರಾಜ್ಯಗಳಂತೆ ರಾಜ್ಯದಲ್ಲಿ ಟೆಲಿಕಾಂ ಪಾಲಿಸಿ ಜಾರಿಗೆ ತರಬೇಕು. ಉದ್ಯಮದಲ್ಲಿ ತಂತ್ರಜ್ಞಾನ ಹೆಚ್ಚಿಸಿ, ಸೇವೆ ಬಲಪಡಿಸಲು ಇಸ್ ಆಫ್ ಡುಯಿಂಗ್ ಬಿಸಿನೆಸ್ ಮಾದರಿಯನ್ನು ಅಳವಡಿಸಬೇಕು ಎಂದು ಟೆಲಿಕಾಂ ಪ್ರಾಧಿಕಾರ ಸಿಬ್ಬಂದಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಟೆಲಿಕಾಂ ಕಂಪನಿಗಳು ಹೇಳ್ಳೋದೇನು?
ಸಾಮಾನ್ಯ ದಿನಗಳಲ್ಲಿ 7,000 ಟೆರಾಬೈಟ್ (ಟಿಬಿ) ಇದ್ದ ಇಂಟರ್‌ನೆಟ್ ಬಳಿಕೆ ಕೊರೊನಾ ನಂತರ ನಿತ್ಯ 10,000 ಟಿಬಿಗೆ ಹೆಚ್ಚಳವಾಗಿದೆ. ಬಳಕೆ ದಾರರು ಹೆಚ್ಚಳವಾದಂತೆ ವೇಗಕಡಿಮೆಯಾಗುತ್ತದೆ. ವೇಗ ಹೆಚ್ಚಳಕ್ಕೆ ಆ ಪ್ರದೇಶದಲ್ಲಿ ಹೆಚ್ಚುವರಿ ಟವರ್ ಮತ್ತುಕೇಬರ್, ಬಲಿಷ್ಠ ಕೇಬಲ್‌ಗಳನ್ನು ಅಳವಡಿಸ ಬೇಕಿರುತ್ತದೆ. ಆದರೆ, ನಗರದಲ್ಲಿ ಬರೋಬ್ಬರಿ ಒಂದು ವರ್ಷದಿಂದ ಇಂಟರ್‌ನೆಟ್ ಕೇಬಲ್ ಅಳವಡಿಸಲು ಪೂರ್ಣ ಪ್ರಮಾಣದಲ್ಲಿ ಬಿಬಿಎಂಪಿ ಅನುಮತಿ ನೀಡಿಲ್ಲ. ಹೀಗಾಗಿ, ಇಂಟರ್‌ನೆಟ್ ವೇಗದಲ್ಲಿ ಸಮಸ್ಯೆಯಾಗುತ್ತಿದೆ. ಅನುಮತಿ ದೊರೆತ ಕೂಡಲೇ ಕಾಮಗಾರಿ ನಡೆಸಿ ನೆಟ್‌ವರ್ಕ್ ಬಲಪಡಿಸಲಾಗುತ್ತದೆ ಎಂದು ಪ್ರತಿಷ್ಠಿತ ಟೆಲಿಕಾಂ ಕಂಪನಿ ಅಧಿಕಾರಿಗಳು ಹೇಳುತ್ತಾರೆ.
ಗ್ರಾಹಕರಿಗೆ ಪರಿಸ್ಥಿತಿ ವಿವರಣೆ
ಗ್ರಾಹಕರು ಇಂಟರ್‌ನೆಟ್ ವೇಗದ ಕುರಿತು ಕಂಪನಿಗಳಿಗೆ ಕರೆ ಮಾಡಿ ದೂರು ನೀಡುತ್ತಿದ್ದಾರೆ. ಆ ವೇಳೆ ಗ್ರಾಹಕ ಪ್ರತಿನಿಧಿಗಳು ಅಥವಾ ಮೇಲಧಿಕಾರಿಗಳು “ಸದ್ಯ ನೀವಿರುವ ಪ್ರದೇಶದಲ್ಲಿ ಹಳೇ ಅಥವಾ ಕಡಿಮೆ ಸಾಮರ್ಥಯದ ಕೇಬಲ್‌ಗಳಿವೆ. ಹೊಸ ಕೇಬಲ್ ಅಳವಡಿಸಲು ಬಿಬಿಎಂಪಿ ಅಥವಾ ಸರ್ಕಾರ ಅನುಮತಿ ನೀಡುತ್ತಿಲ್ಲ. ಅನುಮತಿ ನೀಡಿದ ಕೂಡಲೇ ಕಾಮಗಾರಿ ನಡೆಸಿ ವೇಗ ಹೆಚ್ಚಿಸುವ ಪ್ರಯತ್ನ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ.
ಇದನ್ನೂ ಓದಿ:“ಎಲ್ಲಿದ್ದರು ಇವರೆಲ್ಲಾ”? ರೈತ ನಾಯಕರ ಮುಂದೆ ಸಾಲು ಸಾಲು ಪ್ರಶ್ನೆಯಿಟ್ಟ ಕುಮಾರಸ್ವಾಮಿ
ಕಳೆದ ಆರು ತಿಂಗಳಿಂದ ಮೊಬೈಲ್ ಇಂಟರ್‌ನೆಟ್ ವೇಗವು ಕೆಬಿಪಿಎಸ್‌ಗೆ ಇಳಿಕೆಯಾಗಿದೆ. ಇದರಿಂದ ಕಚೇರಿ ವಿಡಿಯೋ ಸಭೆಗಳಲ್ಲಿ ಭಾಗವಹಿಸಲು, ತ್ವರಿತ ಡೌನ್ ಲೋಡ್‌ಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಟೆಲಿಕಾಂ ಕಂಪನಿಗಳನ್ನು ಬದಲಿಸಿದರು ಸಮಸ್ಯೆ ಪರಿಹಾರವಾಗಿಲ್ಲ.
ಹರೀಶ್, ಐ.ಟಿ.ಉದ್ಯೋಗಿ, ಮೂಡಲಪಾಳ್ಯ ನಿವಾಸಿ
ಸಮಸ್ಯೆಕುರಿತು ಟೆಲಿಕಾಂ ಕಂಪನಿಗೆ ಕರೆ ಮಾಡಿದರೆ ನಾವು ವಾಸವಿರುವ ಪ್ರದೇಶದಲ್ಲಿ 2002ರಲ್ಲಿ ಅಳವಡಿಸಿದ ಕೇಬಲ್‌ಗಳೇ ಇಂದಿಗೂ ಇದ್ದು, ಗರಿಷ್ಠ ಎರಡು ಎಂಬಿಪಿಎಸ್ ಮಾತ್ರ ಲಭ್ಯವಿದೆ. ಸದ್ಯ ಬಳಕೆದಾರರು ಹೆಚ್ಚಿದ್ದು, ಸಾಮರ್ಥ್ಯ ಹೆಚ್ಚಿಸಬೇಕು. ಆದರೆ, ಕೇಬಲ್ ಅಳವಡಿಸಲು ಸರ್ಕಾರ ಅನುಮತಿ ನೀಡಿಲ್ಲ ಎಂದು ಕಾರಣ ಹೇಳುತ್ತಾರೆ.
ಸಂಜೀವ್, ಜೆ.ಪಿ.ನಗರದ ನಿವಾಸಿ
ಜಯಪ್ರಕಾಶ್ ಬಿರಾದಾರ್