Advertisement

ಆಟೋ ಸಮಸ್ಯೆ ಬಗೆಹರಿಸಿ

08:26 AM Jul 05, 2019 | Team Udayavani |

ಬೆಳಗಾವಿ: ಶಾಲಾ ವಿದ್ಯಾರ್ಥಿಗಳ ಆಟೋ ರಿಕ್ಷಾ ಚಾಲಕರು ಹಾಗೂ ಮಾಲೀಕರು ನಡೆಸುತ್ತಿರುವ ಮುಷ್ಕರ ಒಂದು ವಾರ ಕಳೆದರೂ ಮುಗಿದಿಲ್ಲ. ಹೀಗಾಗಿ ಕೂಡಲೇ ಸಮಸ್ಯೆ ಬಗೆಹರಿಸಿ ಆಟೋ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳ ಪಾಲಕರು ಗುರುವಾರ ಪ್ರತಿಭಟನೆ ನಡೆಸಿದರು.

Advertisement

ಪ್ರತಿ ಆಟೋದಲ್ಲಿ 6 ಮಕ್ಕಳನ್ನು ಮಾತ್ರ ಕರೆದುಕೊಂಡು ಹೋಗಲು ಆಟೋ ಚಾಲಕರು ತಮ್ಮ ಬಾಡಿಗೆ ಪ್ರಮಾಣವನ್ನು ಶೇ. 3ರಷ್ಟು ಹೆಚ್ಚಿಗೆ ಮಾಡುತ್ತಿದ್ದಾರೆ. ಇದರಿಂದ ಪಾಲಕರಿಗೆ ತುಂಬಾ ತೊಂದರೆ ಆಗುತ್ತಿದೆ. ಆರ್ಥಿಕ ಹೊರೆ ಆಗದಂತೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕಳೆದ ಒಂದು ವಾರದಿಂದ ಆಟೋಗಳಿಲ್ಲದೇ ವಿದ್ಯಾರ್ಥಿಗಳು ಹಾಗೂ ಪಾಲಕರು ಸಮಸ್ಯೆ ಅನುಭವಿಸುತ್ತಿದ್ದಾರೆ.

ಆಟೋ ಚಾಲಕರು ಮುಷ್ಕರ ನಡೆಸುತ್ತಿರುವುದರಿಂದ ಮಕ್ಕಳು ಶಾಲೆಗೆ ಹೋಗುವುದೇ ಕಷ್ಟಕರವಾಗಿದೆ. ಈ ಸಮಸ್ಯೆ ಬಗೆಹರಿಸಿ ಆಟೋ ರಿಕ್ಷಾ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಪಾಲಕರಾದ ಸ್ನೇಹಾ ಸೂರ್ಯವಂಶಿ, ಯೋಜನಾ ಪತಗಾಂವಕರ, ಭಾರತಿ ಜರತಾರಕರ, ಗೀತಾ ರಾಮನಕೊಪ್ಪ, ಆರತಿ ಕುರಕುರೆ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next