Advertisement

“ಪ್ಯಾಕೇಜ್‌ ಸ್ಟಾರ್‌ ಎಂದರೆ ಚಪ್ಪಲಿಯಲ್ಲಿ ಹೊಡೆಯುವೆ’

12:11 AM Oct 19, 2022 | Team Udayavani |

ಅಮರಾವತಿ: ತೆಲುಗು ಚಿತ್ರರಂಗದ ನಟ ಹಾಗೂ ಜನ ಸೇನಾ ಪಕ್ಷದ ಮುಖ್ಯಸ್ಥ ಪವನ್‌ ಕಲ್ಯಾಣ್‌, ಮಂಗಳವಾರ ಗುಂಟೂರಿನ ಕಾರ್ಯಕ್ರಮವೊಂದರ ವೇದಿಕೆಯ ಮೇಲೇ ನಿಂತು ಚಪ್ಪಲಿಯಲ್ಲಿ ಹೊಡೆಯುವ ಬೆದರಿಕೆ ಹಾಕಿದ್ದಾರೆ.

Advertisement

ಪವನ್‌ ಕಲ್ಯಾಣ್‌ ತೆಲುಗು ದೇಸಂ ಪಕ್ಷದೊಂದಿಗೆ ಕೈ ಜೋಡಿಸಿದ್ದಾರೆ ಎಂದು ಇತ್ತೀಚೆಗೆ ಜಗನ್‌ ಮೋಹನ್‌ ರೆಡ್ಡಿ ಅವರ ವೈಎಸ್‌ಆರ್‌ಸಿಪಿ ಪಕ್ಷ, ನಟನನ್ನು “ಪ್ಯಾಕೇಜ್‌ ಸ್ಟಾರ್‌’ ಎಂದು ಟ್ರೋಲ್‌ ಮಾಡಿತ್ತು. ಈ ವಿಚಾರವಾಗಿ ಸಿಟ್ಟಾಗಿರುವ ನಟ, ಟ್ರೋಲ್‌ ಮಾಡಿದವರಿಗೆ ಎಚ್ಚರಿಕೆ ನೀಡಿದ್ದಾರೆ.

“ಪ್ಯಾಕೇಜ್‌ ಸ್ಟಾರ್‌ ಎಂದು ಇನ್ನೊಮ್ಮೆ ಕರೆದರೆ ಚಪ್ಪಲಿಯಲ್ಲೇ ಹೊಡೆಯುತ್ತೇನೆ’ ಎಂದು ಹೇಳಿ ಕಾಲಿನಲ್ಲಿದ್ದ ಚಪ್ಪಲಿಯನ್ನು ಕೈನಲ್ಲಿ ಹಿಡಿದು ತೋರಿಸಿದ್ದಾರೆ. ಈ ವಿಡಿಯೋ ಎಲ್ಲೆಡೆ ಹರಿದಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next