Advertisement
ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದ ಆಲೂಗಡ್ಡೆಗೆ ರೋಗ ಬಾಧೆ, ಇಳುವರಿ ಕುಂಠಿತ ಹಾಗೂ ಮಾರುಕಟ್ಟೆ ಸಿಗದೆ ನಷ್ಟ ಅನುಭವಿಸುತ್ತಲೇ ಬಂದ ರೈತರು, ಕಳೆದೆರೆಡು ವರ್ಷಗಳಿಂದ ಆಲೂಗಡ್ಡೆ ಬಿತ್ತನೆಗೆ ಹಿಂದೇಟು ಹಾಕುತ್ತಿದ್ದಾರೆ. ಕಳೆದ ವರ್ಷ ಸುಮಾರು 10 ಸಾವಿರ ಹೆಕ್ಟೇರ್‌ನಲ್ಲಿ ಆಲೂಗಡ್ಡೆ ಬಿತ್ತನೆ ಆಗಿತ್ತು ಎಂಬುದು ತೋಟಗಾರಿಕೆ ಇಲಾಖೆ ಅಂದಾಜು. ಈ ವರ್ಷ ಬಿತ್ತನೆ ವೇಗ ಗಮನಿಸಿದರೆ 5 ರಿಂದ 6 ಸಾವಿರ ಹೆಕ್ಟೇರ್‌ನಷ್ಟು ಬಿತ್ತನೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ.
Related Articles
Advertisement
ಜೊತೆಗೆ ಅಂಗಮಾರಿ ರೋಗ ಸೇರಿದಂತೆ ರೋಗಬಾಧೆ ಹೆಚ್ಚುತ್ತಾ ಬಂದಿದ್ದರಿಂ ದ ಆಲೂಗಡ್ಡೆ ಬೆಳೆಗಾರರು ನಷ್ಟ ಅನುಭವಿಸುತ್ತಲೇ ಬರತೊಡಗಿದರು. ಬಿತ್ತನೆ ಬೀಜದ ದರ ಏರಿಕೆ ಹಾಗೂ ಕೃಷಿ ವೆಚ್ಚ ಏರುತ್ತಾ ಬಂದಿತು. ಈ ಎಲ್ಲ ಕಾರಣ ಗಳಿಂದಾಗಿ ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಆಲೂಗಡ್ಡೆ ಕೃಷಿ ಪ್ರಮಾಣ ಇಳಿಯುತ್ತಾ ಬಂದಿತು. ಕಡಿಮೆ ಖರ್ಚಿನ ಮೆಕ್ಕೆಜೋಳವನ್ನು ಪರ್ಯಾಯ ಬೆಳೆಯಾಗಿ ಜಿಲ್ಲೆಯ ರೈತರು ಆಶ್ರಯಿಸುತ್ತಾ ಬಂದರು. ಈಗ ಜಿಲ್ಲೆಯ ಒಟ್ಟು ಬಿತ್ತನೆ ಪ್ರದೇಶದಲ್ಲಿ ಶೇ.70ರಷ್ಟನ್ನು ಮೆಕ್ಕೆ ಜೋಳ ಆವರಿಸತೊಡಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಇನ್ನೊಂದು ದಶಕದಲ್ಲಿ ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆ ಕಣ್ಮರೆಯಾಗಬಹುದು.
ಇನ್ನೂ 2 ವಾರ ಬಿತ್ತನೆಯ ಅವಕಾಶ: ಸಹಜವಾಗಿ ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಆಲೂಗಡ್ಡೆ ಬಿತ್ತನೆ ಪ್ರಮಾಣ ಕಡಿಮೆ ಆಗುತ್ತಾ ಬರುತ್ತಿದೆ. ಈ ವರ್ಷ ಮಾರ್ಚ್-ಏಪ್ರಿಲ್‌ನಿಂದಲೂ ಮಳೆ ಸುರಿಯುತ್ತಲೇ ಬಂದಿದೆ. ಮೇ ಮಾಸದಲ್ಲಿ ಆಲೂಗಡ್ಡೆ ಬಿತ್ತನೆಗೆ ಸಕಾಲ. ಆದರೆ, ಮೇ 2ನೇ ವಾರದಿಂದ ಈವರೆಗೂ ಮಳೆ ಬರುತ್ತಲೇ ಇದೆ. ಹಾಗಾಗಿ ರೈತರಿಗೆ ಆಲೂಗಡ್ಡೆ ಬಿತ್ತನೆಗೆ ಅವಕಾಶ ಸಿಗಲಿಲ್ಲ. ಇನ್ನೂ ಎರಡ್ಮೂರು ವಾರ ಆಲೂಗಡ್ಡೆ ಬಿತ್ತನೆಗೆ ಅವಕಾಶವಿದೆ. ಆದರೆ, ಈ ವರ್ಷ ಬಿತ್ತನೆ ವೇಗ ಗಮ ನಿಸಿದರೆ ಕಳೆದ ವರ್ಷದಷ್ಟು ಬಿತ್ತನೆ ಈ ವರ್ಷ ಆಗಲಾರದು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಯೋಗೀಶ್ ಅವರು ಅಭಿಪ್ರಾಯಪಡುತ್ತಾರೆ.
ಮೆಕ್ಕೆ ಜೋಳದತ್ತ ರೈತರ ಒಲವು: ಕೃಷಿ ಖರ್ಚು ಕಡಿಮೆ ಹಾಗೂ ಉತ್ತಮ ಬೆಲೆ ಸಿಗುವುದೆಂಬ ಉದ್ದೇಶದಿಂದ ರೈತರು ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯ ರೈತರು ಆಲೂಗಡ್ಡೆಗೆ ಪರ್ಯಾಯ ಬೆಳೆಯಾಗಿ ಮೆಕ್ಕೆಜೋಳವನ್ನು ಅಶ್ರಯಿಸುತ್ತಿದ್ದಾರೆ. ಈ ವರ್ಷ ಮೆಕ್ಕೆಜೋಳಕ್ಕೆ ಉತ್ತಮ ಬೆಲೆ ಇರುವುದರಿಂದ ರೈತರು ಮೆಕ್ಕೆಜೋಳವನ್ನು ಬಿತ್ತನೆ ಮಾಡುತ್ತಿರುವುದರಿಂದ ಈ ವರ್ಷ ಆಲೂಗಡ್ಡೆಗೆ ಬೇಡಿಕೆ ಕಡಿಮೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.50ರಷ್ಟು ಆಲೂಗಡ್ಡೆ ವ್ಯಾಪಾರ ವೂ ಆಗಿಲ್ಲ. ಹಾಗಾಗಿ ಹಾಸನ ಜಿಲ್ಲೆಯಲ್ಲಿ ಆಲೂಗಡ್ಡೆ ಬಿತ್ತನೆ ಪ್ರಮಾಣ ಕಡಿಮೆಯಾಗುತ್ತಿದೆ.
ಚಿಕ್ಕಮಗಳೂರು ಜಿಲ್ಲೆ ಕಡೂರು, ಬೀರೂರು ಭಾಗದ ರೈತರು ಹಾಗೂ ಚಾಮರಾಜನಗರ ಜಿಲ್ಲೆಯ ರೈತರು ಬಿತ್ತನೆ ಆಲೂಗಡ್ಡೆ ಖರೀದಿಗೆ ಬರಬಹುದೆಂಬ ನಿರೀಕ್ಷೆಯಲ್ಲಿದ್ದೇವೆ ಎಂದು ಆಲೂಗಡ್ಡೆ ವರ್ತಕ ನಂಜರಾಜಯ್ಯ ಅವರು ಪ್ರತಿಕ್ರಿಯಿಸಿದ್ದಾರೆ.
ಆಲೂಗಡ್ಡೆ ಮಾರಾಟ ಕುಸಿತಮುಂಗಾರು ಹಂಗಾಮಿನಲ್ಲಿ ಹಾಸನದ ಎಪಿಎಂಸಿ ಪ್ರಾಂಗಣದಲ್ಲಿ ದಿನಕ್ಕೆ 100 ರಿಂದ 150 ಲಾರಿ ಲೋಡ್ ಬಿತ್ತನೆ ಆಲೂಗಡ್ಡೆ ಮಾರಾಟವಾಗುತ್ತಿದ್ದು ದೂ ಉಂಟು. ಅಂದರೆ ರೈತರು ಆಲೂಗಡ್ಡೆಯನ್ನು ಮುಗಿಬಿದ್ದು ಖರೀದಿಸಿ ಬಿತ್ತನೆ ಮಾಡುತ್ತಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ದಿನಕ್ಕೆ 25ಲಾರಿ ಲೋಡ್ ಆಲೂಗಡ್ಡೆ ಮಾರಾಟವಾದರೆ ಅದೇ ಬಂಪರ್ ಬಿಸಿನೆಸ್. ಆದರೆ ಈಗ ಬಿತ್ತನೆ ಹಂಗಾಮು ಆಗಿದ್ದರೂ ದಿನಕ್ಕೆ ಸರಾಸರಿ 8 ರಿಂದ 10 ಲಾರಿ ಲೋಡ್ ಮಾರಾಟ ವಾಗುತ್ತಿದೆ. ಇದುವರೆಗೂ 120 ಲಾರಿ ಲೋಡ್ ಮಾರಾಟ ವಾಗಿದೆ ಎಂದು ತೋಟಗಾರಿಕೆ ಇಲಾಖೆ ಅಂದಾಜು. ಈಗ ಮಾರುಕಟ್ಟೆಯಲ್ಲಿ ಬಿತ್ತನೆ ಆಲೂಗಡ್ಡೆ ಕ್ವಿಂಟಲ್‌ಗೆ 2200 ರಿಂದ 2500 ರೂ. ದರದಲ್ಲಿ ಮಾರಾಟವಾಗುತ್ತಿದೆ. ಮೆಕ್ಕೆಜೋಳ ಬೆಳೆಗೆ ರೈತರ ಒಲವು
ಒಂದು ಎಕರೆಯಲ್ಲಿ ಆಲೂಗಡ್ಡೆ ಬೆಳೆಯಲು ಬಿತ್ತನೆ ಬೀಜ, ರಸಗೊಬ್ಬರ, ಕೀಟ ನಾಶಕ ಸೇರಿದಂತೆ ರೈತರಿಗೆ ಕನಿಷ್ಠ 20 ರಿಂದ 25 ಸಾವಿರ ರೂ. ವೆಚ್ಚವಾಗುವುದು. ಆದರೆ, ಒಂದು ಎಕರೆಯಲ್ಲಿ ಮೆಕ್ಕೆ ಜೋಳದ ಬೆಳೆಗೆ 10 ರಿಂದ 12 ಸಾವಿರ ರೂ. ಖರ್ಚು ಬರುತ್ತದೆ. ನಿರ್ವಹಣೆ ವೆಚ್ಚವೂ ಕಡಿಮೆ. ಹಾಗಾಗಿ ರೈತರು ಮೆಕ್ಕೆ ಜೋಳದ ಬೆಳೆಗೆ ಆಸಕ್ತಿ ತೋರುತ್ತಿದ್ದಾರೆ. ● ಎನ್. ನಂಜುಂಡೇಗೌಡ