Advertisement

Road Mishap ಸ್ಲೀಪರ್ ಕೋಚ್ ಬಸ್ ಪಲ್ಟಿ: ಓರ್ವ ಮೃತ್ಯು; 11 ಮಂದಿಗೆ ಗಾಯ

08:24 PM Sep 20, 2024 | Team Udayavani |

ಹುಣಸೂರು: ಬೆಂಗಳೂರಿನಿಂದ ಕೇರಳಕ್ಕೆ ತೆರಳುತ್ತಿದ್ದ ಖಾಸಗಿ ಸಂಸ್ಥೆ ಬಸ್ ಮೈಸೂರು-ಹುಣಸೂರು ಹೆದ್ದಾರಿಯ ಬನ್ನಿಕುಪ್ಪೆ ಬಳಿ ಪಲ್ಟಿಯಾಗಿ ಓರ್ವ ಮೃತಪಟ್ಟಿದ್ದು, 11 ಮಂದಿಗೆ ಗಾಯಗೊಂಡ ಘಟನೆ ಗುರುವಾರ ಮಧ್ಯರಾತ್ರಿ ನಡೆದಿದೆ.

Advertisement

ಕೇರಳದ ಕ್ಯಾಲಿಕಟ್ ಜಿಲ್ಲೆಯ ರಾಮನಟ್ಟುಕರ ಗ್ರಾಮದ ಅಮನ್ ಫ್ರಾನ್‌ಕ್ಲಿನ್(22) ಮೃತ ದುರ್ದೈವಿ.

ಮಲೇಷ್ಯಾದ ಪ್ರಜೆ ಸೇರಿದಂತೆ 11 ಮಂದಿ ಗಾಯಗೊಂಡಿದ್ದು, ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಾಲಕ ಪರಾರಿಯಾಗಿದ್ದಾನೆ.

ಘಟನೆ ವಿವರ:
ಬೆಂಗಳೂರಿನಿಂದ ಕ್ಯಾಲಿಕಾಟ್‌ಗೆ ತೆರಳುತ್ತಿದ್ದ ಖಾಸಗಿ ಸಂಸ್ಥೆ ಸ್ಲೀಪರ್‌ ಕೋಚ್ ಎ.ಸಿ. ಬಸ್ ಹುಣಸೂರು-ವಿರಾಜಪೇಟೆ, ಕೇರಳದ ಮಂಜೇರಿ ಮಾರ್ಗವಾಗಿ ಪೆರಿಂತಲ್ಮಣ್ಣಕ್ಕೆ ತೆರಳುತ್ತಿದ್ದ ಬಸ್‌ನಲ್ಲಿ 30 ಮಂದಿ ಪ್ರಯಾಣಿಸುತ್ತಿದ್ದರು. ಮಧ್ಯರಾತ್ರಿಯಾಗಿದ್ದರಿಂದ ಗಾಢ ನಿದ್ರೆಯಲ್ಲಿದ್ದರು. ಚಾಲಕನ ಅಜಾಗರೂಕತೆಯಿಂದ ಬನ್ನಿಕುಪ್ಪೆ ಗೇಟ್ ಬಳಿಯಲ್ಲಿ ಬಸ್ ಮೂರು ಪಲ್ಟಿ ಹೊಡೆದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬಿದ್ದಿದೆ.

ಪ್ರಯಾಣಿಕ ಅಮನ್ ಫ್ರಾನ್‌ಕ್ಲಿನ್ ಬಸ್‌ ನ ಕಿಟಕಿಯಿಂದ ಹೊರಬಿದ್ದು ಬಸ್ ಅಡಿಯಲ್ಲಿ ಸಿಲುಕಿ ತೀವ್ರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದರು.

Advertisement

ಗಾಯಾಳುಗಳನ್ನು ಬಿಳಿಕೆರೆ ಪೊಲೀಸರು ಹಾಗೂ ಅಲ್ಲಿನ ಗ್ರಾಮಸ್ಥರು ಬಸ್ ನಿಂದ ಪ್ರಯಾಣಿಕರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಜೊತೆಗಿದ್ದ ಮೃತ ಅಮನ್‌ ಫ್ರಾನ್‌ಕ್ಲಿನ್ ಸಹೋದರ ವಿನಯ್‌ ಫ್ರಾನ್‌ಕ್ಲಿನ್ ಪ್ರಾಣಾಪಾಯದಿಂದ ಪಾರಾಗಿದ್ದು, ಮರಣೋತ್ತರ ಪರೀಕ್ಷೆ ನಂತರ ಕೇರಳಕ್ಕೆ ಶವವನ್ನು ಕೊಂಡೊಯ್ದರು.

ಈ ಸಂಬಂಧ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next