ಹೊಸದಿಲ್ಲಿ : ಭಾರತದಲ್ಲಿ ಧಾರ್ಮಿಕ ಸೇವಾ ಕಾರ್ಯಗಳ ನೆಪದಲ್ಲಿ ಭೂಗತ ಉಗ್ರ ಚಟುವಟಿಕೆಗಳಲ್ಲಿ ತೊಡಗಿರುವ, ಮುಂಬಯಿ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಹಾಫೀಜ್ ಸಯೀದ ನ ಫಲಾಹ್ ಇ ಇನ್‌ಸಾನಿಯತ್ ಫೌಂಡೇಶನ್ (ಎಫ್ಐಎಫ್) ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಚಾರ್ಜ್ ಶೀಟ್ ದಾಖಲಿಸಿದೆ.
ಎಫ್ಐಎಫ್ ಭಾರತದಲ್ಲಿ ಧಾರ್ಮಿಕ ಸೇವಾ ಕಾರ್ಯಗಳ ನೆಪದಲ್ಲಿ ಉಗ್ರರ ಸ್ಲಿಪರ್ ಸೆಲ್‌ಗಳನ್ನು ಸ್ಥಾಪಿಸುವ ಮತ್ತು ಉಗ್ರರಿಗೆ ಸಾರಿಗೆ ಸೌಕರ್ಯವನ್ನು ಕಲ್ಪಿಸುವಲ್ಲಿ ಪಿತೂರಿ ನಡೆಸಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಎನ್‌ಐಎ ಆರೋಪಿಸಿದೆ.
ಎಫ್ಐಎಫ್ ನ ಈ ಉಗ್ರ-ಪಿತೂರಿಯಲ್ಲಿ ಮೊಹಮ್ಮದ್ ಸಲ್ಮಾನ್, ಮೊಹಮ್ಮದ್ ಸಲೀಮ್ ಅಲಿಯಾಸ್ ಮಾಮಾ ಮತ್ತು ಮೊಹಮ್ಮದ್ ಕಮ್ರಾನ್ ಶಾಮೀಲಾಗಿದ್ದಾರೆ ಎಂದು ಎನ್‌ಐಎ ತನ್ನ ಚಾರ್ಜ್‌ಶೀಟ್‌ನಲ್ಲಿ ಹೆಸರಿಸಿದೆ.
ಎಫ್ಐಎಫ್ ನ ಮುಖ್ಯಸ್ಥನಾಗಿರುವ ಹಾಫೀಜ್ ಸಯೀದ್ ತನ್ನ ಸಹಾಯಕ ಶಾಹಿದ್ ಮಹಮೂದ್ ಜತೆಗೂಡಿ 2012ರಿಂದಲೇ ಭಾರತದಲ್ಲಿ ಉಗ್ರ sleeper cell ಗಳನ್ನು ಸ್ಥಾಪಿಸುವ ಮತ್ತು ಉಗ್ರ ಸಾರಿಗೆ ಸೌಕರ್ಯಗಳನ್ನು ಕಲ್ಪಿಸುವ ಕೆಲಸವನ್ನು ಧಾರ್ಮಿಕ ಸೇವಾ ಕಾರ್ಯಗಳ ನೆಪದಲ್ಲಿ ನಡೆಸುತ್ತಿರುವುದಾಗಿ ಎನ್‌ಐಎ ಚಾರ್ಜ್‌ಶೀಟ್ ನಲ್ಲಿ ಹೇಳಿದೆ.
Related Articles
ಎಫ್ಐಎಫ್ ಧಾರ್ಮಿಕ ಸೇವಾ ಕಾರ್ಯಗಳ ನೆಪದಲ್ಲಿ ದಿಲ್ಲಿ ಮತ್ತು ಹರಿಯಾಣದಲ್ಲಿ ಸ್ಲಿಪರ್ ಸೆಲ್‌ಗಳನ್ನು ಸ್ಥಾಪಿಸಿದ್ದು ಈ ನಿಟ್ಟಿನಲ್ಲಿ ಅದು ಮಸೀದಿ ನಿರ್ಮಾಣ, ಮದ್ರಸ ನಿರ್ಮಾಣ, ಬಡ ಮುಸ್ಲಿಮ್ ಹುಡುಗಿಯರ ಮದುವೆಗೆ ಆರ್ಥಿಕ ನೆರವು ಇತ್ಯಾದಿ ಬಗೆಯ ಕೆಲಸಗಳನ್ನು ನಡೆಸುತ್ತಿದೆ ಎಂದು ಎನ್‌ಐಎ ಹೇಳಿದೆ.
ಈ ಪಿತೂರಿಯ ಭಾಗವಾಗಿ ಶಾಹಿದ್ ಮಹಮೂದ್ ತನ್ನ ಸಹವರ್ತಿಯಾಗಿರುವ ಮೊಹಮ್ಮದ್ ಕಮ್ರಾನ್‌ಗೆ (ಈತನು ದುಬೈಯಲ್ಲಿ ನೆಲೆಸಿರುವ ಪಾಕ್ ರಾಷ್ಟ್ರೀಯ) ಪಾಕಿಸ್ಥಾನದಿಂದ ದುಬೈಗೆ ಮತ್ತು ಅಲ್ಲಿಂದ ಭಾರತಕ್ಕೆ ಹವಾಲಾ ಮಾರ್ಗಗಳ ಮೂಲಕ ಭೂಗತ ಉಗ್ರ ಚಟುವಟಿಕೆಗಳಿಗೆ ಹಣ ಪೂರೈಸುವ ಜವಾಬ್ದಾರಿಯನ್ನು ಒಪ್ಪಿಸಿದ್ದಾನೆ ಎಂದು ಎನ್‌ಐಎ ಹೇಳಿದೆ.