ಲಕ್ನೋ: ಭಾರೀ ಪ್ರಮಾಣದ ಮಂಜು ಮುಸುಕಿದ ವಾತಾವರಣದ ಪರಿಣಾಮ ಸೋಮವಾರ (ಜನವರಿ 09) ಆಗ್ರಾ-ಲಕ್ನೋ ಎಕ್ಸ್ ಪ್ರೆಸ್ ವೇನಲ್ಲಿ ಅಪಘಾತ ಸಂಭವಿಸಿದ ಪರಿಣಾಮ ಮೂವರು ದುರಂತ ಅಂತ್ಯಕಂಡಿದ್ದಾರೆ.
ಇದನ್ನೂ ಓದಿ:ಸಾಲ ಮಂಜೂರಾತಿಯಲ್ಲಿ ಅಕ್ರಮ ಪ್ರಕರಣ: ಚಂದಾ ಕೊಚ್ಚರ್ ದಂಪತಿ ಬಿಡುಗಡೆಗೆ ಬಾಂಬೆ ಹೈಕೋರ್ಟ್ ಆದೇಶ
ಈ ಘಟನೆ ಕನೌಜ್ ಪ್ರದೇಶದಲ್ಲಿ ಮಧ್ಯರಾತ್ರಿ 12ಗಂಟೆಗೆ ಸಂಭವಿಸಿದೆ. ಎಕ್ಸ್ ಪ್ರೆಸ್ ವೇನಲ್ಲಿ ಸ್ಲೀಪರ್ ಬಸ್ ನಿಂತಿದ್ದ ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಅಸು ನೀಗಿದ್ದರು. ಸುಮಾರು 18 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅತೀ ವೇಗವಾಗಿ ಬಂದಿದ್ದ ಬಸ್ ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಎಕ್ಸ್ ಪ್ರೆಸ್ ವೇನಿಂದ ಕೆಳಕ್ಕೆ ಬಿದ್ದಿತ್ತು. ಇದರ ಪರಿಣಾಮ ಇಬ್ಬರು ಮಹಿಳೆಯರು ಹಾಗೂ ಮಗು ಸೇರಿ ಮೂವರು ವಿಧಿವಶರಾಗಿದ್ದಾರೆ ಎಂದು ವರದಿ ತಿಳಿಸಿದೆ.
ದಟ್ಟ ಮಂಜು ಮತ್ತು ಅತೀಯಾದ ವೇಗದ ಪರಿಣಾಮವೇ ಅಪಘಾತ ಸಂಭವಿಸಲು ಕಾರಣವಾಗಿದೆ. ಈ ಸ್ಲೀಪರ್ ಬಸ್ ದೆಹಲಿಯ ಆನಂದ್ ವಿಹಾರ್ ನಿಂದ ಸುಲ್ತಾನ್ ಪುರ್ ಗೆ ತೆಳುತ್ತಿತ್ತು. ಭಾನುವಾರ 30ಜನ ಪ್ರಯಾಣಿಕರೊಂದಿಗೆ ಬಸ್ ಹೊರಟಿತ್ತು,