Advertisement

ನಿದ್ದೆ ನೀ ಎಲ್ಲಿದ್ದೆ?

06:33 PM Jun 18, 2019 | mahesh |

ರಾತ್ರಿ ಬೇಗ ನಿದ್ರೆ ಬರೋದಿಲ್ಲ, ಬೆಳಗ್ಗೆ ಬೇಗ ಏಳ್ಳೋಕೆ ಆಗೋದಿಲ್ಲ… ಇದು ಅನೇಕರ ಸಮಸ್ಯೆ. ಮಹಿಳೆಯರ ಪಾಲಿಗಂತೂ ಇದು ತುಂಬಾ ಕಷ್ಟದ ವಿಷಯ. ಇನ್ನೊಂದರ್ಧ ಗಂಟೆ ಮಲಗುತ್ತೇನೆ ಅಂತ ಅಲರಾಂನ ತಲೆ ಮೊಟಕುವಂತಿಲ್ಲ. ಯಾಕಂದ್ರೆ, ಏಳುವುದು ಚೂರು ಲೇಟಾದರೂ ಅಂದಿನ ಕೆಲಸಗಳು ಹಳಿ ತಪ್ಪುತ್ತವೆ. ಮಕ್ಕಳಿಗೆ ಸ್ಕೂಲ್‌ ಬಸ್‌ ತಪ್ಪುತ್ತದೆ, ಗಂಡನಿಗೂ ಆಫೀಸ್‌ಗೆ ಲೇಟಾಗುತ್ತದೆ. ಇನ್ನು ಉದ್ಯೋಗಸ್ಥ ಮಹಿಳೆಯರ ಪಾಡನ್ನು ಕೇಳುವುದೇ ಬೇಡ. ಹಾಗಾದ್ರೆ, ಈ ಸಮಸ್ಯೆಗೆ ಪರಿಹಾರವೇನು? ನಿದ್ರಾಹೀನತೆಯಿಂದ ಪಾರಾಗಿ, ಬೆಳಗ್ಗೆ ಉಲ್ಲಾಸದಿಂದ ಏಳಬೇಕು ಅಂತಿದ್ರೆ ಏನು ಮಾಡಬೇಕು ಅಂದಿರಾ? ಇಲ್ಲಿದೆ ನೋಡಿ ಟಿಪ್ಸ್‌…

Advertisement

– ರಾತ್ರಿ ತಡವಾಗಿ ಮಲಗುವ ಅಭ್ಯಾಸವಿದ್ದವರಿಗೆ ಬೆಳಗ್ಗೆ ಬೇಗ ಎಚ್ಚರವಾಗುವುದಿಲ್ಲ. ಹಾಗಾಗಿ, ಬೇಗ ಮಲಗುವುದನ್ನು ರೂಢಿಸಿಕೊಳ್ಳಿ.

– ಸಂಜೆ ವೇಳೆ ವ್ಯಾಯಾಮ ಅಥವಾ ಜಿಮ್‌ನಲ್ಲಿ ವಕೌìಟ್‌ ಮಾಡಿದರೆ ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ. ಹತ್ತು ನಿಮಿಷ ವಾಕಿಂಗ್‌ ಮಾಡಿದರೂ ಆದೀತು.

-ಆಹಾರ ಸೇವಿಸಿದ ತಕ್ಷಣ ಮಲಗುವುದು ಸರಿಯಲ್ಲ. ಇದು ಅಜೀರ್ಣ ಸಮಸ್ಯೆಯನ್ನುಂಟು ಮಾಡುವುದಲ್ಲದೆ, ನಿದ್ರಾಹೀನತೆಗೂ ಕಾರಣವಾಗುತ್ತದೆ. ಮಲಗುವ ಕನಿಷ್ಠ 3 ಗಂಟೆ ಮುಂಚೆ ಊಟ ಮಾಡಬೇಕು. ಮಾಂಸಾಹಾರವಾದರೆ 4-5 ಗಂಟೆಗಳ ಮುಂಚೆ ಸೇವಿಸಬೇಕು.

– ಮಗುವಿನಂತೆ ಮಲಗುವುದು ಅಂತಾರೆ. ಅಂದರೆ, ಮಕ್ಕಳಿಗೆ ಯಾವ ಚಿಂತೆಯೂ ಇರುವುದಿಲ್ಲ. ಈ ಕಾರಣದಿಂದಲೇ ಮಕ್ಕಳು ಹಾಸಿಗೆಗೆ ಜಾರಿದೊಡನೆ ನಿದ್ದೆ ಹೋಗುತ್ತಾರೆ. ಹಾಗೆಯೇ, ಮಲಗುವಾಗ ಎಲ್ಲ ಚಿಂತೆಗಳನ್ನು ದೂರ ಮಾಡಿದರೆ ಬೇಗ ನಿದ್ದೆ ಬರುತ್ತದೆ.

Advertisement

-ಮಲಗುವ ಮುನ್ನ ಹತ್ತು ನಿಮಿಷ ಕಣ್ಣು ಮುಚ್ಚಿ ಕುಳಿತು, ನಾಳೆ ಮಾಡಬೇಕಾದ ಕೆಲಸಗಳ ಕುರಿತು ಮನದಲ್ಲೇ ಲೆಕ್ಕಾಚಾರ ಹಾಕಿ. ನಂತರ ಐದು ನಿಮಿಷ ದೀರ್ಘ‌ವಾಗಿ ಉಸಿರಾಡಿ, ಎಲ್ಲ ವಿಚಾರಗಳನ್ನೂ ಮರೆತು ದಿಂಬಿಗೆ ತಲೆ ಕೊಡಿ.

– ಮಲಗುವ ಒಂದು ಗಂಟೆಗೂ ಮುನ್ನ ಟಿ.ವಿ. ಆಫ್ ಮಾಡಿ, ಮೊಬೈಲ್‌ ತೆಗೆದು ಪಕ್ಕಕ್ಕೆ ಇಡಿ.

-ಪುಷ್ಪಲತಾ

Advertisement

Udayavani is now on Telegram. Click here to join our channel and stay updated with the latest news.

Next