ವಿದ್ಯಾರ್ಥಿಗಳ ಇನ್ನೊಂದು ಸಮಸ್ಯೆ ಅಂದರೆ, ಬೆಳಗ್ಗೆ ಓದಬೇಕೋ, ರಾತ್ರಿ ಓದಬೇಕೋ ಅನ್ನೋದು. ಇದನ್ನು ಗೆಳೆಯರಾಗಲಿ, ಹೆತ್ತವರಾಗಲಿ ತೀರ್ಮಾನ ಮಾಡೋಕೆ ಆಗೋಲ್ಲ. ಏಕೆಂದರೆ, ನಿದೆ ಎಷ್ಟು ಬೇಕು, ಎಷ್ಟು ಮಾಡಬೇಕು ಅಂತ ತೀರ್ಮಾನ ಮಾಡುವುದು ನೀವೇ. ಇಲ್ಲಿ ತಿಳಿಯಬೇಕಾದ ಒಂದು ವಿಚಾರ ಇದೆ. ಲಾಂಗ್ ಸ್ಲೀಪ್, ಶಾರ್ಟ್ ಸ್ಲೀಪ್ ಅಂತ ಎರಡು ವಿಧವಿದೆ. ಈ ಜಗತ್ತಿನ ಎಲ್ಲರೂ, ಈ ಎರಡರಲ್ಲಿ ಯಾವುದಾದರೂ ಒಂದಕ್ಕೆ ಸೇರಿರುತ್ತಾರೆ. ಲಾಂಗ್ ಸ್ಲೀಪ್ ಕೆಟಗರಿಗೆ ಸೇರಿದವರಿಗೆ ಕನಿಷ್ಠ 8 ಗಂಟೆ ನಿದೆಯ ಅಗತ್ಯ ಇದೆ.
* ಇದಕ್ಕಿಂತ ಕಡಿಮೆ ಆದರೆ, ಅವರು ಎಲ್ಲೆಂದರಲ್ಲಿ ತೂಕಡಿಸುತ್ತಾರೆ. ಇಂಥವರೇ ನಾದರೂ ಬೆಳಗಿನ ಜಾವ ಎದ್ದು ಓದಲು ಶುರುಮಾಡಿದರೆ, ಮೆದುಳಿನ ಮೇಲೆ ಒತ್ತಡ ಜಾಸ್ತಿಯಾಗುತ್ತದೆ.
* ಆಮೇಲೆ, ಇಡೀ ದಿನ ನಿದೆ ಮಾಡಬೇಕಾಗುತ್ತದೆ. ಆದರೆ ಶಾರ್ಟ್ ಸ್ಲೀಪ್ ಕೆಟಗರಿಯ ವಿದ್ಯಾರ್ಥಿಗಳಿಗೆ ಇಂಥ ಸಮಸ್ಯೆ ಇಲ್ಲ. ಅವರಿಗೆ ಮೂರು ನಾಲ್ಕು ಗಂಟೆ ನಿದೆಯಾದರೆ ಸಾಕು. ಹೀಗಾಗಿ, ಇದರಲ್ಲಿ ನೀವು ಯಾವ ಕ್ಯಾಟಗರಿಗೆ ಬರುತ್ತೀರಿ ಅನ್ನೋದರ ಮೇಲೆ, ಓದಲು ಶುರುಮಾಡಬೇಕು.
* ಓದುವ ವಿಚಾರದಲ್ಲಿ ಬೇರೆಯವರನ್ನು ಅನುಕರಣೆ ಮಾಡುವುದು ಬೇಡವೇ ಬೇಡ. ಪಕ್ಕದ ಮನೆ ಗೆಳೆಯ ಬೆಳಗ್ಗೆ ಎದ್ದು ಓದುತ್ತಾನೆ ಅಂತ ನೀವು ಎದ್ದು ಓದುವುದು, ಇಲ್ಲವೇ ಮಧ್ಯೆ ರಾತ್ರಿ ತನಕ ನಿದೆಗೆಟ್ಟು ಓದುವುದನ್ನೆಲ್ಲಾ ಮಾಡಬೇಡಿ.