ಲಾಕ್‌ಡೌನ್ ಸಂದರ್ಭದಲ್ಲಿ ಇಡೀ ದೇಶವೇ ಕೋವಿಡ್ ಸಮಸ್ಯೆಯಲ್ಲಿಯೇ ಮುಳುಗೇಳುತ್ತಿರುವ ಹೊತ್ತಿನಲ್ಲಿ ಅತ್ತ ದೂರದ ನಿರ್ಜನ ಅರಣ್ಯ ಪ್ರದೇಶಗಳಲ್ಲಿ ವನ್ಯಜೀವಿಗಳ ಮಾರಣಹೋಮ ಎಗ್ಗಿಲ್ಲದಂತೆ ನಡೆದಿದೆ. ಎಲ್ಲಾ ರಾಜ್ಯಗಳಲ್ಲಿ, ಎಲ್ಲಾ ವನ್ಯಜೀವಿ ಸಂರಕ್ಷಣಾ ವಲಯಗಳಲ್ಲಿಯೂ ಈ ರೀತಿಯ ಬೇಟೆ ನಡೆದಿವೆ ಎಂದು ಡಬ್ಲ್ಯೂಡಬ್ಲ್ಯೂಎಫ್-ಇಂಡಿಯಾ ವರದಿ ಮಾಡಿದೆ. ದೇಶದಲ್ಲಿ ಲಾಕ್‌ಡೌನ್ ಆರಂಭವಾಗುವುದಕ್ಕೂ ಹಿಂದಿನ ಆರು ವಾರ (ಫೆ. 10ರಿಂದ ಮಾ. 22) ಹಾಗೂ ಲಾಕ್‌ಡೌನ್ ಶುರುವಾದ ನಂತರದ ಆರು ವಾರದ (ಮಾ. 23ರಿಂದ ಮೇ 3) ಅವಧಿಯಲ್ಲಿ ವನ್ಯಜೀವಿಗಳ ಬಗ್ಗೆ ಅಧ್ಯಯನ ನಡೆಸಲಾಗಿದೆ. ಆ ಅಧ್ಯಯನದಲ್ಲಿ ಕಂಡುಬಂದಿರುವ ಅಂಕಿ-ಅಂಶಗಳ ಪ್ರಕಾರ, ಲಾಕ್‌ಡೌನ್ ಅವಧಿಯಲ್ಲಿ ವನ್ಯಜೀವಿಗಳ ಬೇಟೆ ಪ್ರಕರಣಗಳು ಶೇ. 35ರಿಂದ 88ರವರೆಗೆ ಹೆಚ್ಚಾಗಿದೆ.
ಯಾವ ರಾಜ್ಯಗಳಲ್ಲಿ ವ್ಯಾಪಕ?
ಉತ್ತರಾಖಂಡ, ಕರ್ನಾಟಕ, ಒಡಿಶಾಗಳಲ್ಲಿ ಪೆಂಗೋಲಿನ್‌ಗಳ ಬೇಟೆ ಅತ್ಯಧಿಕವಾಗಿದೆ. ರಾಜಸ್ಥಾನದಲ್ಲಿ ಸಾರಂಗಗಳ ಬೇಟೆ ಅವ್ಯಾಹತವಾಗಿ ನಡೆದಿದೆ. ಇನ್ನುಳಿದ ರಾಜ್ಯಗಳಲ್ಲಿ ಕೋತಿಗಳು, ಪುನುಗು ಬೆಕ್ಕು ಇತ್ಯಾದಿ ಪ್ರಾಣಿಗಳನ್ನು ಬಲಿ ಹಾಕಲಾಗಿದೆ. ವನ್ಯಜೀವಿಗಳ ಬೇಟೆಗೆ ಸಂಬಂಧಿಸಿದಂತೆ ಹಲವಾರು ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 222 ಜನರನ್ನು ಬಂಧಿಸಲಾಗಿದೆ.
ಯಾವ ಪ್ರಾಣಿಗಳಿಗೆ ಹೆಚ್ಚು ಕುತ್ತು?
ಮೊಲ , ಮುಳ್ಳುಹಂದಿ , ಪೆಂಗೋಲಿನ್ , ಕಾಡು ಅಳಿಲು , ಪುನುಗು ಬೆಕ್ಕು , ಕೋತಿಗಳು