Advertisement

ಜೆಪ್ಪು:ಸ್ಲ್ಯಾಬ್ ಎದ್ದು ಹೋಗಿ ಅಪಾಯ ಆಹ್ವಾನ

10:33 AM Jul 26, 2018 | Team Udayavani |

ಜೆಪ್ಪು : ಇದು ಶಾಲಾ ವಿದ್ಯಾರ್ಥಿಗಳು ನಡೆದಾಡುವ ಫುಟ್‌ ಪಾತ್‌. ಮಕ್ಕಳಾಟ ಮಾಡುತ್ತಾ ಸ್ವಲ್ಪ ಎಚ್ಚರ ತಪ್ಪಿದರೂ ಬೀಳುವುದು ಗುಂಡಿಗೆ. ಏಕೆಂದರೆ ಫುಟ್‌ಪಾತ್‌ನ ಸ್ಲ್ಯಾಬ್ ಎದ್ದು ಹೋಗಿದ್ದು, ಮಳೆಗಾಲದಲ್ಲಿ ಸಂಪೂರ್ಣ ನೀರು ತುಂಬಿ ಫುಟ್‌ಪಾತ್‌ನಷ್ಟೇ ಎತ್ತರಕ್ಕೆ ಬರುತ್ತದೆ. ಬೇಸಗೆಯಲ್ಲಿಯೂ ಅಪಾಯ ತಪ್ಪಿದ್ದಲ್ಲ.

Advertisement

ಸೈಂಟ್‌ ರೀಟಾ ಶಾಲೆಯ ಮುಂಭಾಗದಲ್ಲಿರುವ ಫುಟ್‌ಪಾತ್‌ನ ಸ್ಲ್ಯಾಬ್ ಎದ್ದು ಹೋಗಿದ್ದು, ಅಪಾಯವನ್ನು ಆಹ್ವಾನಿಸುವಂತಿದೆ. ಸನಿಹದಲ್ಲೇ ಸುಮಾರು ಮೂರು ಶಾಲೆಗಳಿದ್ದು, ದಿನನಿತ್ಯ ವಿದ್ಯಾರ್ಥಿಗಳು ಈ ಫುಟ್‌ಪಾತ್‌ನಲ್ಲಿ ಸಂಚರಿಸುತ್ತಲೇ ಇರುತ್ತಾರೆ. ಮಳೆಗಾಲದಲ್ಲಿ ನೀರು ತುಂಬಿ ಸ್ಲ್ಯಾಬ್ ಗುಂಡಿ ಕಾಣಿಸುವುದಿಲ್ಲ. ಅಲ್ಲದೆ ಮಳೆ ಇಲ್ಲದಿದ್ದರೂ ಕೆಲವೊಮ್ಮೆ ಮಕ್ಕಳು ಇಲ್ಲಿ ನಡೆದಾಡುವುದು ಭಯ ಹುಟ್ಟಿಸುತ್ತದೆ. ಸುಮಾರು ಒಂದು ವರ್ಷದಿಂದ ಈ ಸಮಸ್ಯೆ ಇದ್ದರೂ ಸಂಬಂಧಪಟ್ಟ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿಲ್ಲ. ಹಲವು ಬಾರಿ ಸ್ಥಳೀಯ ಕಾರ್ಪೊರೇಟರ್‌ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸರಿ ಮಾಡಲಾಗುವುದು ಎಂದಷ್ಟೇ ಹೇಳಿ ಸುಮ್ಮನಾಗುತ್ತಾರೆ ಎಂದು ಇಲ್ಲಿನ ನಿವಾಸಿಗಳು ಆರೋಪಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next