Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವುದು ಮಾಜಿ ಸಚಿವನಾದ ನನ್ನ ಆದ್ಯ ಕರ್ತವ್ಯ. ಇದಕ್ಕಾಗಿ ನಾನು ಸಿಎಂ, ಡಿಸಿಎಂ, ಕಂದಾಯ ಹಾಗೂ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆಯೇ ಹೊರತು ಎಂದಿಗೂ ನಾನು ಕಾಂಗ್ರೆಸ್ ಸೇರುತ್ತೇನೆಂದು ಹೇಳಿಲ್ಲ, ಆದರೆ ದುರುದ್ದೇಶದಿಂದ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಎಂದಿಗೂ ಕಾಂಗ್ರೆಸ್ ಸೇರುವುದಿಲ್ಲ ಎಂದರು.
Related Articles
ಬಿಜೆಪಿ ಅಧಿಕಾರಾವಧಿಯಲ್ಲಿ ದಾವಣಗೆರೆ ಜಿಲ್ಲೆಯವರೇ ಮಂತ್ರಿಗಳಾಗಬೇಕು. ನಮ್ಮ ಐದು ಜನರಲ್ಲಿ ಯಾರನ್ನಾದರೂ ಮಂತ್ರಿ ಮಾಡಲಿ ಎಂದಾಗ ನನಗೆ ಮಂತ್ರಿ ಸ್ಥಾನ ಕೊಡಲು ಸಿದ್ಧತೆ ನಡೆದಿತ್ತು. ಆದರೆ ದಾವಣಗೆರೆ ಜಿಲ್ಲೆಯ ಮಹಾನುಭಾವರೊಬ್ಬರು ನನ್ನ ಹೆಸರನ್ನು ಡಿಲೀಟ್ ಮಾಡಿಸಿದರು. ನಾನು ಬಕೆಟ್ ರಾಜಕೀಯ ಮಾಡುವುದಿಲ್ಲ, ಆ ಸಂಸ್ಕೃತಿ ನನಗೆ ಗೊತ್ತಿಲ್ಲ. ಇದ್ದಿದ್ದನ್ನು ನೇರವಾಗಿ ಹೇಳುತ್ತೇನೆ. ಹಾಗಾಗಿ ನನಗೆ ಹಲವಾರು ಅವಕಾಶಗಳು ತಪ್ಪಿದವು. ಮಾಜಿ ಪ್ರಧಾನಿ ವಾಜಪೇಯಿ ಸೋಲಿಗೆ ನಾವೇ ಹೊಣೆ ಹೊರಬೇಕಾಗುತ್ತದೆ. ಏಕೆಂದರೆ ಅವರು ಮಾಡಿದ ಅಭಿವೃದ್ಧಿ ಬಗ್ಗೆ ನಮ್ಮ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಕೇಂದ್ರ ಸರ್ಕಾರ ಸಾಧನೆಗಳ ಬಗ್ಗೆ ತಿಳಿಸಲಿಲ್ಲ. ಹೀಗಾಗಿ ಅಂದು ಕೇಂದ್ರದಲ್ಲಿ ವಾಜಪೇಯಿ ಸರ್ಕಾರ ಹಿನ್ನಡೆ ಅನುಭವಿಸಬೇಕಾಯಿತು.
Advertisement
ನಮ್ಮ ಕ್ಷೇತ್ರದಲ್ಲಿ ಐದಾರು ಗ್ರಾಮ ಬಿಟ್ಟರೆ ಉಳಿದ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿ ಕೇಂದ್ರ ಸರ್ಕಾರದ ಸಾಧನೆಯ ಕರಪತ್ರಗಳನ್ನು ವಿತರಿಸಿ ಕೇಂದ್ರದ ಸಾಧನೆಯನ್ನು ತಿಳಿಸಿದ್ದೇನೆ. ರಾಜ್ಯದಲ್ಲಿ ಇನ್ನೂ ಮನೆ ಮನೆ ಸಂಪರ್ಕ ಆಗಿಲ್ಲ, ನಮ್ಮ ಮುಖಂಡರು ಹಾಗೂ ಕಾರ್ಯಕರ್ತರು ಈಗಲಾದರೂ ಎಚ್ಚೆತ್ತುಕೊಂಡು ಮನೆ ಮನೆ ಸಂಪರ್ಕ ಮಾಡಿ ಕೇಂದ್ರದ ಸಾಧನೆಗಳ ಬಗ್ಗೆ ತಿಳಿಸಲಿ ಎಂದರು.