ನವದೆಹಲಿ: ಇನ್ಮುಂದೆ ಲೋಕಸಭೆಯಲ್ಲಿ ಜುಮ್ಲಾಜೀವಿ, ಕೋವಿಡ್ ಸ್ಪ್ರೆಡ್ಡರ್ ಮತ್ತು ಸ್ನೂಪ್ ಗೇಟ್ ಸೇರಿದಂತೆ ಕೆಲವು ಪದ ಬಳಕೆಯನ್ನು ನಿಷೇಧಿಸಿ ಸುತ್ತೋಲೆ ಹೊರಡಿಸಿದೆ. ಆದರೆ ಈ ಪದ ಬಳಕೆಗೆ ನಿಷೇಧ ಹೇರಿರುವುದಕ್ಕೆ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.
ಇದನ್ನೂ ಓದಿ:ಚಾರ್ಮಾಡಿ ಘಾಟ್ ನಲ್ಲಿ ಲಘು ಭೂಕುಸಿತ; ಜೆಸಿಬಿಗಳ ನಿರಂತರ ಕಾರ್ಯ
ಮುಂಬರುವ ಲೋಕಸಭಾ ಅಧಿವೇಶನಕ್ಕೂ ಮುನ್ನ ಲೋಕಸಭಾ ಕಾರ್ಯಾಲಯ ಅಸಂಸದೀಯ ಪದ ಬಳಕೆಯ ನೂತನ ಕಿರು ಪುಸ್ತಕವನ್ನು ಬಿಡುಗಡೆಗೊಳಿಸಿದ ನಂತರ ವಿವಾದಕ್ಕೆ ಎಡೆಮಾಡಿಕೊಟ್ಟಿರುವುದಾಗಿ ವರದಿ ಹೇಳಿದೆ.
ಲೋಕಸಭೆಯಲ್ಲಿ ಜುಮ್ಲಾದೇವಿ, ಕೋವಿಡ್ ಸ್ಪ್ರೆಡ್ಡರ್, ಸ್ನೂಪ್ ಗೇಟ್, ದ್ರೋಹ, ಭ್ರಷ್ಟಾಚಾರ, ನಾಟಕ, ಬೂಟಾಟಿಕೆ, ಅಸಮರ್ಥ ಸೇರಿದಂತೆ ಕೆಲವು ಪದಗಳು ಅಸಂಸದೀಯ ಎಂದು ಉಲ್ಲೇಖಿಸಲಾಗಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಬುಕ್ ಲೆಟ್ ಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಇದೊಂದು ಆಧುನಿಕ ಭಾರತದ ಹೊಸ ಪದಕೋಶವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಟೀಕಿಸಬಾರದು ಎಂದು ಈ ರೀತಿ ಪದ ಬಳಕೆಗೆ ನಿರ್ಬಂಧ ವಿಧಿಸಿರುವುದು ನಿರಾಸೆ ತಂದಿದೆ ಎಂದು ಆಮ್ ಆದ್ಮಿ ಪಕ್ಷದ ರಾಘವ್ ಚಡ್ಡಾ ಅಸಮಧಾನವ್ಯಕ್ತಪಡಿಸಿದ್ದಾರೆ.