Advertisement

ಇಟಲಿಯಿಂದ ಮರಳಿದ ರಾಹುಲ್‌ ಇನ್ನೊಂದು ವಿದೇಶ ಪ್ರವಾಸ

12:13 PM Mar 06, 2018 | Team Udayavani |

ಹೊಸದಿಲ್ಲಿ : ಕಾಂಗ್ರೆಸ್‌ ಪಕ್ಷ ದಯನೀಯವಾಗಿ ಸೋಲುಂಡ ತ್ರಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್‌ ವಿಧಾನಸಭಾ ಚುನಾವಣೆಗಳ ಮತ ಎಣಿಕೆ ನಡೆಯುತ್ತಿದ್ದಾಗ ಸದ್ದಿಲ್ಲದೆ ಇಟಲಿಗೆ ಹಾರಿ ಹೋಗಿದ್ದಕ್ಕೆ ವಿರೋಧ ಪಕ್ಷಗಳಿಂದ ತೀವ್ರ ತರಾಟೆಗೆ ಗುರಿಯಾಗಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ತಮ್ಮ ಟೀಕಾಕಾರರ ಯಾವುದೇ ಮಾತುಗಳಿಗೆ ಬೆದರದೆ ಇದೀಗ ಪುನಃ ಇದೇ ಮಾರ್ಚ್‌ 8 ರಂದು ಮೂರು ದಿನಗಳ ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ.

Advertisement

ರಾಹುಲ್‌ ಗಾಂಧಿ ಮಾರ್ಚ್‌ 8-9ರಂದ ಸಿಂಗಾಪುರಕ್ಕೆ ಭೇಟಿ ನೀಡಲಿದ್ದಾರೆ ಬಳಿಕ ಮಾರ್ಚ್‌ 10ರಂದು ಮಲೇಶ್ಯಕ್ಕೆ ಹೋಗಲಿದ್ದಾರೆ. ಸಿಂಗಾಪುರದಲ್ಲಿ ಎರಡು ದಿನಗಳ ಕಾಲ ಇರುವಾಗ ರಾಹುಲ್‌ ಅಲ್ಲಿನ ಭಾರತೀಯ ಸಮೂಹವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜತಗೆ ಅಲ್ಲಿನ ಭಾರತೀಯ ವೃತ್ತಿಪರರು ಮತ್ತು ಕೈಗಾರಿಕೋದ್ಯಮಿಗಳೊಂದಿಗೆ ಮುಚ್ಚಿದ ಬಾಗಿಲ ಸಭೆ ನಡೆಸಲಿದ್ದಾರೆ. 

ಮಲೇಶ್ಯ ಭೇಟಿಯ ವೇಳೆ ರಾಹುಲ್‌ ಅಲ್ಲಿನ ಭಾರತೀಯ ಮೂಲದ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮಲೇಶ್ಯದಲ್ಲಿ ಭಾರೀ ದೊಡ್ಡ ಸಂಖ್ಯೆಯಲ್ಲಿ ಭಾರತೀಯರಿದ್ದಾರೆ. ರಾಹುಲ್‌ ಗಾಂಧಿ ಅವರು ಇದೇ ಸಂದರ್ಭದಲ್ಲಿ ಮಲೇಶ್ಯದಲ್ಲಿನ ಭಾರತೀಯ ಉದ್ಯಮಿಗಳನ್ನು ಮತ್ತು ಕೆಲಸಗಾರರನ್ನು ಭೇಟಿಯಾಗಲಿದ್ದಾರೆ. 

ರಾಹುಲ್‌ ಅವರ ಈ ವಿದೇಶ ಭೇಟಿಯ ವೇಳಾ ಪಟ್ಟಿ ಮತ್ತು ಕಾರ್ಯಕ್ರಮ ಸ್ವರೂಪ ಪ್ರಧಾನಿ ಮೋದಿ ಅವರ ಕಾರ್ಯಕ್ರಮ ನಮೂನೆಯನ್ನೇ ಬಹುವಾಗಿ ಹೋಲುತ್ತದೆ. ಎಂದರೆ ರಾಹುಲ್‌, ಪ್ರಧಾನಿ ಮೋದಿ ಅವರನ್ನು ಈ ವಿಷಯದಲ್ಲೂ ಅನುಸರಿಸುತ್ತಿರುವಂತಿದೆ ಎನ್ನಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next