Advertisement

ಹತ್ಯೆಗೀಡಾದ ಉಗ್ರನ ಮೇಲೆ ಐಸಿಸ್‌ ಧ್ವಜ,ದೇಶದ್ರೋಹಿ ಘೋಷಣೆ

11:38 AM Nov 19, 2017 | Team Udayavani |

ಶ್ರೀನಗರ : ಕಾಶ್ಮೀರದಲ್ಲಿ ಹತ್ಯೆಗೀಡಾದ ಉಗ್ರನ ಶವದ ಮೇಲೆ ಐಸಿಸ್‌ ಉಗ್ರಸಂಘಟನೆಯ ಧ್ವಜವಿಟ್ಟು , ದೇಶದ್ರೋಹಿ  ಘೋಷಣೆಗಳನ್ನು ಕೂಗುತ್ತಾಸಾವಿರಾರು ಜನರು ಮೆರವಣಿಗೆ ನಡೆಸಿದ್ದಾರೆ. 

Advertisement

ಶುಕ್ರವಾರ ಹತ್ಯೆಗೀಡಾದ ಮುಗೀಸ್‌ ಅಹಮದ್‌ ಮಿರ್‌ನ ಶವಯಾತ್ರೆಯ ವೇಳೆ ಸಾವಿರಾರು ಜನರು ಮೆರವಣಿಗೆ ನಡೆಸಿದ್ದಾರೆ. ಪಾಕ್‌ ಪರ, ಐಸಿಸ್‌ ಪರ ಜೈಕಾರ ಹಾಕಿದ್ದಾರೆ.

ಲಷ್ಕರ್‌  ಇ ತೋಯ್‌ಬಾ ಉಗ್ರ ಸಂಘಟನೆಯಲ್ಲಿ ಸಕ್ರಿಯವಾಗಿದ್ದ ಉಗ್ರ  ಮುಗೀಸ್‌ ಇತ್ತೀಚೆಗೆ ಅಲ್‌ಖೈದಾ ಘಟಕವಾದ ಘಾಜ್‌ವತ್‌  ಉಲ್‌ ಹಿಂದ್‌ ಸೇರ್ಪಡೆಯಾಗಿದ್ದ. 

ಶುಕ್ರವಾರ ನಡೆದ ಗುಂಡಿನ ಚಕಮಕಿಯನ್ನುಮುಗೀಸ್‌ನನ್ನು ಹತ್ಯೆಗೈಯಲಾಗಿತ್ತು, ಕಾಳಗದಲ್ಲಿ ಸಬ್‌ ಇನ್ಸ್‌ಪೆಕ್ಟರ್‌ವೊàರ್ವರು ಹುತಾತ್ಮರಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next