Advertisement

ಸಿದ್ದಿಕಿ ಸೇರಿ ನಾಲ್ವರು ಭಾರತೀಯರಿಗೆ ಪುಲಿಟ್ಜರ್‌ ಪ್ರಶಸ್ತಿ

12:58 AM May 11, 2022 | Team Udayavani |

ಹೊಸದಿಲ್ಲಿ: ಕಳೆದ ವರ್ಷ ಅಫ್ಘಾನಿಸ್ಥಾನದಲ್ಲಿ ನಡೆದಿದ್ದ ತಾಲಿಬಾನಿಗಳು ಹಾಗೂ ಆಫ್ಘನ್‌ ಸೈನಿಕರ ನಡುವಿನ ಸಂಘರ್ಷವನ್ನು ವರದಿ ಮಾಡಲು ಹೋಗಿ ತಾಲಿಬಾನಿಗಳಿಂದ ಹತ್ಯೆ ಯಾಗಿದ್ದ ಭಾರತದ ಪತ್ರಿಕಾ ಛಾಯಾಗ್ರಾಹಕ ದಾನಿಶ್‌ ಸಿದ್ದಿಕಿ ಅವರಿಗೆ ಜಾಗತಿಕ ಮಾಧ್ಯಮ ರಂಗದ ಅತ್ಯುನ್ನತ ಗೌರವವಾದ ಪ್ರತಿಷ್ಠಿತ ಪುಲಿಟ್ಜರ್‌ ಪ್ರಶಸ್ತಿ ಸಿಕ್ಕಿದೆ.

Advertisement

ಅವರೊಂದಿಗೆ, ದಾನಿಶ್‌ ಸೇವೆ ಸಲ್ಲಿಸುತ್ತಿದ್ದ ರಾಯರ್‌ ಸುದ್ದಿಸಂಸ್ಥೆಯಲ್ಲಿ ಪತ್ರಿಕಾ ಛಾಯಗ್ರಾಹಕರಾಗಿ ಸೇವೆ ಸಲ್ಲಿಸುತ್ತಿರುವ ಇನ್ನೂ ಮೂವರು ಭಾರತೀಯರಾದ ಅದ್ನಾನ್‌ ಅಬಿದಿ, ಸನ್ನಾ ಇರ್ಷಾದ್‌ ಮತ್ತು ಅಮಿತ್‌ ದವೆ ಅವರಿಗೂ ಈ ಪ್ರತಿಷ್ಠಿತ ಗೌರವ ದಕ್ಕಿದೆ. ನಾಲ್ಕು ಭಾರತೀಯರಿಗೆ ಏಕಕಾಲದಲ್ಲಿ ಪುಲಿಟ್ಜರ್‌ ಗೌರವ ಸಂದಿರುವುದು ಇದೇ ಮೊದಲು.

ಅಂದಹಾಗೆ, ಸಿದ್ದಿಕಿ ಅವರಿಗೆ 2018ರಲ್ಲೂ ಪುಲಿಟ್ಜರ್‌ ಪ್ರಶಸ್ತಿ ಸಿಕ್ಕಿತ್ತು. ಆ ವೇಳೆ ಅವರು ರೋಹಿಂಗ್ಯ ಬಿಕ್ಕಟ್ಟನ್ನು ಅದ್ಭುತವಾಗಿ ಚಿತ್ರಗಳಲ್ಲಿ ಸೆರೆ ಹಿಡಿದಿದ್ದರು.



ಜೋಶುವ ಕೊಹೆನ್‌, ವಾಷಿಂಗ್ಟನ್‌ ಪೋಸ್ಟ್‌ಗೂ ಪ್ರಶಸ್ತಿ:
ಇಸ್ರೇಲ್‌ನ ಮಾಜಿ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರ ತಂದೆಯ ನೆತನ್ಯಾಹು ಕುರಿತು ಜೋಶುವ ಕೊಹೆನ್‌ ಬರೆದ ಕಾದಂಬರಿಗೂ ಪುಲಿಟ್ಜರ್‌ ಸಿಕ್ಕಿದೆ. ಹಾಗೆಯೇ ಸಾರ್ವಜನಿಕ ಸೇವೆ ವಿಭಾಗದಲ್ಲಿ ವಾಷಿಂಗ್ಟನ್‌ ಪೋಸ್ಟ್‌ಗೂ ಪ್ರಶಸ್ತಿ ಸಿಕ್ಕಿದೆ. ಈ ಪತ್ರಿಕೆಯಲ್ಲಿ ಜ.6ರಂದು ಅಮೆರಿಕದ ರಾಜಧಾನಿ ವಾಷಿಂಗ್ಟನ್‌ನ ಕ್ಯಾಪಿಟಲ್‌ ಕಟ್ಟಡದ ಮೇಲಾದ ದಾಳಿಯ ಕುರಿತು ಮಹತ್ವದ ವರದಿ ಪ್ರಕಟವಾಗಿತ್ತು.

ಈವರೆಗೆ ಪುಲಿಟ್ಜರ್‌ ಪಡೆದ ಭಾರತೀಯರು
ಗೋಬಿಂದ್‌ ಬೆಹಾರಿ ಲಾಲ್‌ (1937)
ಝುಂಪಾ ಲಾಹಿರಿ (2000)
ಗೀತಾ ಆನಂದ್‌ (2003)
ಸಿದ್ದಾರ್ಥ ಮುಖರ್ಜಿ (2011)
ವಿಜಯ್‌ ಶೇಷಾದ್ರಿ (2014)

 

Advertisement
Advertisement

Udayavani is now on Telegram. Click here to join our channel and stay updated with the latest news.

Next