Advertisement

ಜಮ್ಮು-ಕಾಶ್ಮೀರ : ಮಸೀದಿ ಸ್ಲಾಬ್ ಕುಸಿದು 14 ಮಂದಿಗೆ ಗಾಯ

07:13 PM Dec 07, 2017 | Team Udayavani |

ಬನಿಹಾಲ್‌/ಜಮ್ಮು : ಜಮ್ಮು ಕಾಶ್ಮೀರದ ರಂಬಾನ್‌ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಮಸೀದಿ ಕಟ್ಟಡದ ಕಾಂಕ್ರೀಟ್‌ ಸ್ಲಾಬ್‌ ಕುಸಿದು ಬಿದ್ದು ಹದಿನಾಲ್ಕು ಮಂದಿ (ಇವರಲ್ಲಿ ಹೆಚ್ಚಿನವರು ಕಾರ್ಮಿಕರು) ಗಾಯಗೊಂಡರೆಂದು ಪೊಲೀಸರು ತಿಳಿಸಿದ್ದಾರೆ.

Advertisement

ಖಾರಿ ಪಟ್ಟಿಯಲ್ಲಿನ ಅಹಮಾ ಗ್ರಾಮದಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದಂತೆಯೇ ಕಾಂಕ್ರೀಟ್‌ ಸ್ಲಾéಬ್‌ ಕುಸಿಯಿತೆಂದು ಪೊಲೀಸರು ಹೇಳಿದ್ದಾರೆ.

14 ಮಂದಿ ಗಾಯಾಳುಗಳ ಪೈಕಿ 11 ಮಂದಿಯನ್ನು ಬನಿಹಾಲ್‌ ಉಪ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರೆಲ್ಲ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ. 

Advertisement

Udayavani is now on Telegram. Click here to join our channel and stay updated with the latest news.

Next