Advertisement

150 ವರ್ಷಗಳಿಗೊಮ್ಮೆ ನಡೆಯುವ ನಭ ವಿಸ್ಮಯ

10:45 AM Jan 28, 2018 | Team Udayavani |

ಕಲಬುರಗಿ: ಈ ಶತಮಾನದ ಸುಂದರ ಚಂದ್ರಗ್ರಹಣ ಅಥವಾ ಆಕಾಶ ಕೌತುಕ ಮತ್ತು ನೀಲಿ ಚಂದ್ರ ಆಕಾಶದಲ್ಲಿ ಗೋಚರಿಸಲಿದ್ದು, ಅದು ವಿಶಿಷ್ಟ ಚಂದ್ರಗ್ರಹಣವಾಗಿ ಏರ್ಪಡಲಿದೆ. ಇದನ್ನು ನೋಡಲು ನಗರದ ಶರಣಬಸವೇಶ್ವರ ಶಾಲೆ ಮೈದಾನದಲ್ಲಿ ಬ್ರೆಕ್‌ ಥ್ರೂ ಸೈನ್ಸ್‌ ಸೊಸೈಟಿ ವ್ಯವಸ್ಥೆ
ಮಾಡಿದೆ ಎಂದು ಗುವಿವಿ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ| ರಮೇಶ ಲಂಡನಕರ್‌ ಹಾಗೂ ಸೊಸೈಟಿ ಜಿಲ್ಲಾಧ್ಯಕ್ಷ  ಅಭಯಾ ದಿವಾಕರ್‌ ತಿಳಿಸಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಪ್ರತಿ 150 ವರ್ಷಗಳಿಗೊಮ್ಮೆ ನಡೆಯುವ ನಭ ವಿಸ್ಮಯವಾಗಿದೆ. ಈ ಹಿಂದೆ 1866ರ ಮಾರ್ಚ್‌ 31ರಂದು ನಡೆದಿತ್ತು. ಈ ವೇಳೆ ನೀಲಿ ಚಂದ್ರ, ದೈತ್ಯ ಚಂದ್ರ ಮತ್ತು ತಾಮ್ರ ಚಂದ್ರ ಏಕಕಾಲಕ್ಕೆ ನೋಡಬಹುದಾದಂತಹ ವಿಶಿಷ್ಟ ಗ್ರಹಣವಿದು. ಇದನ್ನು ನೋಡುವುದು ತುಂಬಾ ಖುಷಿ ಕೊಡುತ್ತದೆ ಎಂದು ಹೇಳಿದರು.

ಗ್ರಹಣ ಒಂದು ಸಾಮನ್ಯ ಕ್ರಿಯೆಯಾಗಿದೆ. ಇದರಿಂದ ಯಾವುದೇ ಅಶುಭ ಮತ್ತು ಶುಭ ಫಲಗಳು ಇರುವುದಿಲ್ಲ. ಗ್ರಹಣದ ವೇಳೆ ನೀರು ಕುಡಿಯಬಾರದು, ಊಟ ಮಾಡಬಾರದು, ಗ್ರಹಣದ ಬಳಿಕ ಸ್ನಾನ ಸೇರಿದಂತೆ ಇತರೆ ಚಟುವಟಿಕೆಗಳನ್ನು ಮಾಡಬೇಕು. ರಾತ್ರಿಯಾದರೂ ಸರಿ ಪೂಜೆ ಮಾಡಿ ಊಟ ಮಾಡಬೇಕು. ಗರ್ಭಿಣಿಯರು ಹೊರ ಬರಬಾರದು, ಕೆಲಸ ಮಾಡಬಾರದು ಎನ್ನುವುದನ್ನು ನಾವೇ ಸೃಷ್ಟಿ ಮಾಡಿಕೊಂಡ ಭಯಾನಕ ಮೌಡ್ಯಗಳು ಎಂದರು.

ಎಲ್ಲಾ ಮೌಡ್ಯ ಮತ್ತು ಮೂಢನಂಬಿಕೆಯಿಂದ ಜನರು ಹೊರಬಂದು ನಗರದ ಶರಣಬಸವೇಶ್ವರ ಶಾಲೆ  ದಾನದಲ್ಲಿ ಸೊಸೈಟಿ ಅಳವಡಿಸುವ ಟೆಲಿಸ್ಕೋಪ್‌ ಮುಖಾಂತರ ಗ್ರಹಣ ವೀಕ್ಷಿಸಿ ಎಂದು ಮನವಿ ಮಾಡಿದರು.

ಈ ಚಂದ್ರಗ್ರಹಣವು ನೀಲಿ ಚಂದ್ರ (ಒಂದೇ ತಿಂಗಳಲ್ಲಿ ಬರುವ ಎರಡು ಹುಣ್ಣಿಮೆ) ಎಂದು ಕರೆಸಿಕೊಂಡಿದ್ದು, ದೈತ್ಯ ಚಂದ್ರ ಮತ್ತು ತಾಮ್ರ ಚಂದ್ರನಂತೆ ಅಂದು ಚಂದ್ರನ ನಿಸರ್ಗ ವಿಸ್ಮಯ ದೃಶ್ಯಾವಳಿ ಗೋಚರಿಸಲಿದೆ. ಅಂದು ವೀಕ್ಷಣೆಗೆ ಒಂದು ಟೆಲಿಸ್ಕೋಪ್‌ ವ್ಯವಸ್ಥೆ  ಮಾಡಲಾಗುವುದು. ಅಂದು ಸಂಜೆ 6:10 ರಿಂದ 9:38ರ ವರೆಗೆ ಗ್ರಹಣವಿರುತ್ತದೆ.

Advertisement

ಎರಡು ದಿನಗಳ ಮಂಚೆ ಮುಕ್ತವಾಗಿ ನೋಡಲು ಸ್ಥಳ ಗುರುತಿಸಿಕೊಂಡು ಕುಟುಂಬ ಸಮೇತ ಎಲ್ಲರೂ ಚಂದ್ರಗ್ರಹಣ ವೀಕ್ಷಿಸಬಹುದು. ನಗರದ ಶಾಲೆ ಕಾಲೇಜುಗಳ ಮೈದಾನದಲ್ಲಿಯೂ ವಿದ್ಯಾರ್ಥಿಗಳಿಗೆ ಚಂದ್ರಗ್ರಹಣ ನೋಡಲು ಅವಕಾಶ ಮಾಡಬೇಕೆಂದು ಕೋರಿದರು.
ಹೆಚ್ಚಿನ ಮಾಹಿತಿಗೆ ಮೊ.ಸಂಖ್ಯೆ 8951824630ಕ್ಕೆ ಸಂಪರ್ಕಿಸಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next