Advertisement
ಇಪ್ಪತ್ತನಾಲ್ಕು ಗುರುಗಳಲ್ಲಿ ಎರಡನೆಯ ಗುರುವೆಂದರೆ ವಾಯು. ನಮ್ಮ ಪರಿಸರದಲ್ಲಿ ಕಣ್ಣಿಗೆ ಕಾಣದ ವಿಶೇಷ ಶಕ್ತಿಯಾದ ಗಾಳಿಯಿಂದಲೂ ನಾವು, ಕಲಿಯಬೇಕಾದದ್ದಿದೆ. ಗಾಳಿಯಿಂದಾಗಿಯೇ ಉಸಿರಾಡುತ್ತಿರುವ ನಾವು, ವಾಯುದೇವ ಎಂದು ದೇವರ ರೂಪದಲ್ಲಿ ಗಾಳಿಯನ್ನು ಕಂಡಿದ್ದೇವೆ; ನಮಿಸುತ್ತೇವೆ. ನಮ್ಮೆಲ್ಲರ ಸುತ್ತ ಹರಡಿಕೊಂಡಿರುವ ಗಾಳಿಯಿಂದ ಯಾವ ಜ್ಞಾನವನ್ನು ಹೊಂದಬೇಕು? ಅದು ಏನನ್ನು ತಿಳಿಸಿಕೊಡುತ್ತದೆ ಎಂಬುದನ್ನು ಮದ್ಭಾಗವತದ ಏಕಾದಶ ಸ್ಕಂಧದ ಏಳನೆಯ ಅಧ್ಯಾಯದಲ್ಲಿ ಹೇಳಲಾಗಿದೆ.
Related Articles
Advertisement
..ಜ್ಞಾನ ಎಂಬುದು ಒಂದು ವಿಶೇಷವಾದ ಸಂಪತ್ತು. ಯಾರಿಂದಲೂ ಕದಿಯಲಾಗದ, ಆದರೆ ಹಂಚಿದಷ್ಟೂ ವಿಸ್ತಾರಗೊಳ್ಳುವ ಸಂಪತ್ತು. ಆದುದರಿಂದಲೇ ನಹೀ ಜ್ಞಾನೇನ ಸದೃಶಂ ಎಂಬ ಉಕ್ತಿ ಹುಟ್ಟಿಕೊಂಡಿದೆ. ಅಂದರೆ ಜ್ಞಾನಕ್ಕಿಂತಲೂ ಮಿಗಿಲಾದುದು ಯಾವುದೂ ಇಲ್ಲ ಎಂದರ್ಥ. ಜ್ಞಾನವನ್ನು ಎÇÉೆಲ್ಲಿ ಯಾವಯಾವ ಮೂಲಗಳಿಂದ ಪಡೆಯಲಾಗುತ್ತದೋ ಅವೆಲ್ಲವುಗಳಿಂದಲೂ ಪಡೆಯಬೇಕಂತೆ. ಒಂದಲ್ಲ ಒಂದು ದಿನ ಬದುಕಿನ ಪಯಣದಲ್ಲಿ ಅವು ಸಹಾಯಕ್ಕೊದಗಿ ಬರುವುದಂತೆ. ಹಾಗಾಗಿಯೇ, ಮದ್ಭಾಗವತದಲ್ಲಿ ಆಕಾಶದಿಂದಲೂ ನಾವು ಅರಿತುಕೊಳ್ಳಬೇಕಾದ ಸಂಗತಿಯಿದೆ ಎಂಬುದನ್ನು ಹೇಳಲಾಗಿದೆ.
ಮೂರನೆಯ ಗುರು: ಆಕಾಶಇದು ವೈಜ್ಞಾನಿಕವಾಗಿಯೂ ವಿಸ್ಮಯವಾದ ಪ್ರದೇಶವಾಗಿದೆ. ಭೂಮಿಯ ಮೇಲಿನ ಕಾರ್ಯಗಳನ್ನು ನಿಯಂತ್ರಿಸುವ ಸಾಧನಗಳನ್ನು ಆಕಾಶ ಹಿಡಿದಿಟ್ಟುಕೊಂಡಿದೆ. ಜ್ಞಾನ ವಿಜ್ಞಾನದ ಬೆಳವಣಿಗೆಗೆ, ಪ್ರಪಂಚದ ಅಭಿವೃದ್ಧಿಗೆ ಅನುಕೂಲಕರವಾಗಿರುವ ಆಕಾಶದಿಂದ ಕಲಿಯಬೇಕಾದ, ನಮ್ಮ ಜೀವನಕ್ಕೆ ಬೇಕಾದ ಜ್ಞಾನ ಇದರಲ್ಲಿದೆ. ಆಕಾಶ ಎಂದರೆ ಅವಕಾಶ ಎಂದರ್ಥ. ಮಾನವನ ಜೀವನವೂ ಒಂದು ಅವಕಾಶವೇ. ಹೇಗೆ ಆಕಾಶವು ಸರ್ವವ್ಯಾಪಿಯಾಗಿ ಸರ್ವರಿಗೆ ಉಪಕಾರಿಯಾಗಿ ಹರಡಿಕೊಂಡಿದೆಯೋ ಹಾಗೇ ನಮ್ಮ ಜೀವನವೂ ವಿಶಾಲವಾದ ಮನೋಭಾವದಿಂದ ಕೂಡಿರಬೇಕು. ನಾವು ಎಲ್ಲಿ ಹೋದರೂ ಅಲ್ಲಿ ಕಾಣುವ ಆಕಾಶ ಒಂದೇ ರೂಪವನ್ನು ಹೊಂದಿರುತ್ತದೆ. ಏಕರೂಪ ಎಂಬುದು ಒಂದು ಸತ್ಯದ ರೂಪವೇ ಆಗಿದೆ. ನಾವು ಕೂಡ ಎಲ್ಲಿದ್ದರೂ ಒಂದೇ ಭಾವದಿಂದ ಇರುವುದನ್ನು ಕಲಿಯಬೇಕು. ನಮ್ಮತನ ಎಂಬುದು ಸತ್ಯದ ಕಡೆಗೆ ಇರಬೇಕು. ಯಾಕೆಂದರೆ, ಸತ್ಯ ಎಂಬುದು ಆಕಾಶದಂತೆ ಎಲ್ಲಿದ್ದರೂ ಸತ್ಯವೇ. ಆಕಾಶವೂ ಪ್ರಪಂಚದ ಯಾವುದೇ ಮೂಲೆಗೆ ಹೋಗಿ ನೋಡಿದರೂ ಅದು ಆಕಾಶವೇ. ಆದರೆ ಸುಳ್ಳು ಕ್ಷಣದಿಂದ ಕ್ಷಣಕ್ಕೆ, ಊರಿಂದ ಊರಿಗೆ, ವ್ಯಕ್ತಿಯಿಂದ ವ್ಯಕ್ತಿಗೆ ಬೇರೆಬೇರೆ ರೂಪ ಹೊಂದುವಂತದ್ದು. ಹಾಗಾಗಿ, ಸುಳ್ಳನ್ನು ಸಂಭಾಳಿಸುವುದೇ ಜೀವನದ ಗುರಿಯಾಗಿಬಿಡುತ್ತದೆ. ಇನ್ನು, ಆಕಾಶದಷ್ಟು ಬೇಕು ಎಂದುಕೊಳ್ಳುವುದು ಮಹದಾಸೆ. ಅಂಥ ಆಸೆಯನ್ನು ಬಿಡುವುದಕ್ಕೂ ಆಕಾಶವೇ ನಿದರ್ಶನವಾಗಿದೆ. ಆಕಾಶದಲ್ಲಿ ಏನೇನಲ್ಲ ಇವೆ. ಮಳೆಗೆ ಕಾರಣವಾಗುವ ಮೋಡದಿಂದ ಹಿಡಿದು ಗ್ರಹಗಳು, ನಕ್ಷತ್ರಗಳು, ಸೂರ್ಯ, ಚಂದ್ರ ಮೊದಲಾದವುಗಳು ಆಕಾಶದ ಒಡಲಿನಲ್ಲಿಯೇ ಇದ್ದರೂ ಅವುಗಳಿಂದ ಆಕಾಶ ಹೊರತಾಗಿದೆ. ಎಲ್ಲವೂ ಇದ್ದು ಅವು ಯಾವುದೂ ತನ್ನದ್ದಲ್ಲ ಎಂಬ ಭಾವನೆಯು ಸುಖ-ದುಃಖದಿಂದ ನಮ್ಮ ಮನಸ್ಸು ದೂರ ಉಳಿಯುವಂತೆ ಮಾಡುತ್ತದೆ. ಗುಣಾತೀತನಾಗುವುದಕ್ಕೂ ಆಕಾಶವೇ ಉದಾಹರಣೆ. ..ಮುಂದುವರಿಯುವುದು. ವಿಷ್ಣು ಭಟ್ ಹೊಸ್ಮನೆ