Advertisement

ಮಾ. 19: ಎಸ್‌ಕೆಎಸ್‌ಎಸ್‌ಎಫ್ ಜಿಲ್ಲಾ ಸಮ್ಮೇಳನ 

02:42 PM Mar 14, 2017 | Harsha Rao |

ಮಡಿಕೇರಿ: ಸಮಸ್ತ ಕೇರಳ ಜಂಯಿಯ್ಯತುಲ್‌ ಉಲಮಾದ ಅಧೀನದ ಎಸ್‌ಕೆಎಸ್‌ಎಸ್‌ಎಫ್ನ ಕೊಡಗು ಜಿಲ್ಲಾ ಸಮ್ಮೇಳನ ಮಾ. 19ರಂದು ವಿರಾಜಪೇಟೆಯ ಹುದೈವಿಯ ನಗರದಲ್ಲಿ ನಡೆಯಲಿದೆ ಎಂದು ಸಂಘಟನೆಯ ಪ್ರಮುಖರು ತಿಳಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ತಮ್ಲಿàಖ್‌ ದಾರಿಮಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ದೇಶದ ರಕ್ಷಣೆಗಾಗಿ ಸಾಮರಸ್ಯದ ಭವ್ಯತೆಯೊಂದಿಗೆ 1989ಲ್ಲಿ ಸ್ಥಾಪಿಸಲ್ಪಟ್ಟ ಎಸ್‌ಕೆಎಸ್‌ಎಸ್‌ಎಫ್ ಸಂಘಟನೆ ದೇಶ ವಿದೇಶಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.  ಧರ್ಮದ ಏಳಿಗೆಗಾಗಿ ಸುನ್ನತ್‌ ಜಮಾಅತ್‌ನ ಆಶಯ ಆದರ್ಶಗಳಲ್ಲಿ ನೆಲೆ ನಿಂತು ಪರಂಪರಾಗತವಾಗಿ ಸಾಗಿ ಬಂದು ಇದೀಗ ಮದೀನಾ ಪಾಷನ್‌ ಎಂಬ ಧ್ಯೇಯ ವಾಕ್ಯದೊಂದಿಗೆ  ಜಿಲ್ಲಾ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ಮಾ.19ರಂದು ವೀರಾಜಪೇಟೆಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿಯ ಹುದೈವಿಯ ನಗರದಲ್ಲಿ ನಡೆಯಲಿರುವ ಸಮ್ಮೇಳನದ ಅಂಗವಾಗಿ ಜಿಲ್ಲೆಯ ವಿವಿಧ ಶಾಖೆಗಳಲ್ಲಿ ಅಧ್ಯಯನ ಶಿಬಿರಗಳು, ಚರ್ಚಾ ವೇದಿಕೆಗಳು, ಗೃಹ ಸಂದರ್ಶನ ಕಾರ್ಯಕ್ರಮಗಳು, ಆತ್ಮೀಯ ಸಭೆಗಳು ನಡೆಯಲಿವೆ. ಸಮ್ಮೇಳನದಂದು ನಡೆಯಲಿರುವ ಪ್ರತ್ಯೇಕ ಶಿಬಿರಗಳಲ್ಲಿ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಎಸ್‌ಕೆಎಸ್‌ಎಸ್‌ಎಫ್ ಕೇಂದ್ರ ಸಮಿತಿ ಅಧ್ಯಕ್ಷ ಪಾಣಕ್ಕಾಡ್‌ ಸಯ್ಯದ್‌ ಹಮೀದ್‌ ಆಲಿ ಶಿಹಾಬ್‌ ತಂಞಳ್‌, ಕಾರ್ಯದರ್ಶಿ ಸತ್ತಾರ್‌ ಪಂದಲ್ಲೂರ್‌, ಉತ್ತಮ ವಾಗ್ಮಿ ಅಬ್ದುಲ್‌ ಸಮದ್‌ ಪೋಕೊಟ್ಟೂರ್‌, ಸಮಸ್ತ ಕೇರಳ ಜಂಯಿಯ್ಯತುಲ್‌ ಉಲಮಾ ಉಪಾಧ್ಯಕ್ಷ ಅಬ್ದುಲ್‌ ಜಬ್ಟಾರ್‌ ಉಸ್ತಾದ್‌, ಕೇಂದ್ರ ಮುಷಾವರ ಸದಸ್ಯ ಎಂ.ಎ.ಖಾಸಿಂ ಮುಸ್ಲಿಯಾರ್‌, ಕೊಡಗಿನ ಖಾಝಿ ಪೂಕ್ಕಳಂ ಅಬ್ದುಲ್ಲಾ ಉಸ್ತಾದ್‌, ಉಪ ಖಾಝಿ ಎಂ.ಎ. ಅಬ್ದುಲ್ಲಾ ಫೈಝಿ, ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್‌, ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್‌. ಸೀತಾರಾಂ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌,  ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ ಸಂಘಟನೆಯ ರಾಜ್ಯ ಸಮಿತಿ ಅಧ್ಯಕ್ಷ ಅನೀಸ್‌ ಕೌಸರಿ, ಆಸಿಫ್ ದಾರಿಮಿ ಪುಲಿಕಲ್‌ ಮತ್ತಿತರರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

1921ರಲ್ಲಿ ನೂತನವಾದಿಗಳು ರಂಗ ಪ್ರವೇಶಿಸಿ ನೈಜತೆಯ ಹಾದಿಯಲ್ಲಿ ಕಳಂಕ ತರಲು ಮುಂದಾದಾಗ, ಆತ್ಮೀಯತೆಯ ಹಾಗೂ ನಿಸ್ವಾರ್ಥರಾದ ಉಲಮಾಗಳು ಸಮಸ್ತ ಕೇರಳ ಜಂಯಿಯ್ಯತುಲ್‌ ಉಲಮಾವನ್ನು ಸ್ಥಾಪಿಸಿದರು. ಅದರ ಅಧೀನದಲ್ಲಿ ಸ್ಥಾಪನೆಗೊಂಡ ಎಸ್‌ಕೆಎಸ್‌ಎಸ್‌ಎಫ್ ಸಂಘಟನೆ, ಇಸ್ಲಾಂನ ನೈಜ ಸುಂದರ ಆಶಯಗಳನ್ನು ಪ್ರಚುರಪಡಿಸುವುದರೊಂದಿಗೆ ಪರಿಶುದ್ಧ ಸಂದೇಶವನ್ನು ಮಾನವ ಕುಲಕ್ಕೆ ತಿಳಿಸುತ್ತಿದೆ. ಈ ಉದ್ದೇಶದಿಂದಲೇ ಮದೀನಾ ಪಾಷನ್‌ ಧ್ಯೇಯ ವಾಕ್ಯದಡಿ  ಜಿಲ್ಲಾ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಜಿಲ್ಲಾ ಸಂಚಾಲಕರಾದ ವೈ.ಎಂ.ಉಮ್ಮರ್‌ಫೈಝಿ, ಸಹ ಸಂಚಾಲಕರಾದ ಪಿ.ಎಂ.ಆರಿಫ್ಫೈಝಿ, ಎಸ್‌ಕೆಎಸ್‌ಎಸ್‌ಎಫ್ನ ಜಿಲ್ಲಾ ಸಮಿತಿ ಉಪಾಧ್ಯಕ್ಷರಾದ ರಶೀದ್‌ ದಾರಿಮಿ, ಹಾಗೂ ವಿಖಾಯ ಸಮಿತಿಯ ಸಂಚಾಲಕರಾದ ಅಬ್ದುಲ್‌ ಕರೀಮ್‌ ಮುಸ್ಲಿàಯಾರ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next