Advertisement

“ತುಳುಮಣ್ಣಿನ ನೈಜತೆಯ ನಾಟಕಗಳು ಪ್ರಸ್ತುತ’

10:27 PM Apr 29, 2019 | sudhir |

ಕಟಪಾಡಿ : ಬಹಳ ವರ್ಷಗಳ ಹಿಂದೆ ತುಳುನಾಡಿನ ಕೂಡು-ಕುಟುಂಬ, ಧನಿ-ಒಕ್ಕಲು, ಪರಿಸರ, ಜೀವನ ಪದ್ಧತಿ, ನಂಬಿಕೆ ನಡವಳಿಕೆಯ ಆಧಾರದಲ್ಲಿ ರಚಿಸಿ, ಪ್ರದರ್ಶಿತಗೊಂಡಿರುವ ಸಾಮಾಜಿಕ ತುಳುನಾಟಕಗಳು ಈಗಲೂ ಪ್ರಸ್ತುತ ಎಂದು ಪ್ರಶಸ್ತಿ ವಿಜೇತ ಹಿರಿಯ ರಂಗಕಲಾವಿದ, ನಾಟಕಕಾರ ಕಟಪಾಡಿ ಶಂಕರ ಪೂಜಾರಿ ಹೇಳಿದರು.

Advertisement

ಕರಾವಳಿ ಕಲಾವಿದರು ಮಲ್ಪೆ ಇವರು ಅಲೆವೂರು ಹಿರಿಯ ಪ್ರಾಥಮಿಕ ಶಾಲಾ ರಂಗಮಂಟಪದಲ್ಲಿ ಆಯೋಜಿಸಿದ ಮೂರು ದಿನಗಳ ನಾಟಕೋತ್ಸವ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಸಮಾರೋಪ ಭಾಷಣದಲ್ಲಿ ಅವರು ಉಲ್ಲೇಖೀಸಿದರು.

ತುಳು ನಾಟಕ ರಂಗ 80ರ ದಶಕದಲ್ಲಿದ್ದ ಸ್ಥಿತಿಗತಿ,ಅನಂತರ ಬದಲಾದ ಕಾಲಸ್ಥಿತಿಗೆ ಸರಿಯಾಗಿ ಆದಂತಹ ಅನೇಕ ಬದಲಾವಣೆಗಳು ಹಾಗೂ ಪ್ರಸಕ್ತದಲ್ಲಿ ತುಳುರಂಗಭೂಮಿಯ ಆಯಾಮಗಳನ್ನು ಎಳೆ ಎಳೆಯಾಗಿ ತಿಳಿಸಿ ಹೇಳಿದ ಅವರು ಏನಿದ್ದರೂ ತುಳು ರಂಗಭೂಮಿ ಎಂದಿಗೂ ನಶಿಸಲಾರದು ಎಂದರು.

ಶ್ರೀ ಕ್ಷೇತ್ರ ಮೂಡುಸಗ್ರಿಯ ಧರ್ಮದರ್ಶಿ ಭಾಸ್ಕರ ಗುಂಡಿಬೈಲು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಪ್ರಶಸ್ತಿ ವಿಜೇತ ನಾಟಕಕಾರ ಜಯರಾಮ ನೀಲಾವರ ಅವರನ್ನು ಸಮ್ಮಾನಿಸಲಾಯಿತು. ಕುಕ್ಕಿಕಟ್ಟೆ ಕ್ಲಿನಿಕಲ್‌ ಲ್ಯಾಬ್‌ನ ಅಶೋಕ್‌ ಕುಮಾರ್‌, ಪೈಂಟ್‌ ಡಿಸ್ಟ್ರಿಬ್ಯೂಟರ್‌ ಉಡುಪಿ ಮಾಲಕ ಸಂಜೀವ ನಾಯಕ್‌, ಉಡುಪಿ ಗೃಹನಿರ್ಮಾಣ ಸಹಕಾರಿ ಸಂಘದ ಕಾರ್ಯದರ್ಶಿ ಅಶೋಕ್‌ ಎಂ. ಭಟ್‌ ಮಾತನಾಡಿದರು.

Advertisement

ನಾಟಕ ಕತೃì, ನಿರ್ದೇಶಕ ನಂದಳಿಕೆ ನಾರಾಯಣ ಶೆಟ್ಟಿ, ಮಲ್ಪೆ ಕರಾವಳಿ ಕಲಾವಿದರು ಇದರ ಅಧ್ಯಕ್ಷ ಹರೀಶ್‌ ಬಿ. ಕರ್ಕೇರ, ಗೌರವಾಧ್ಯಕ್ಷ ಕರುಣಾಕರ ಕಾಂಚನ್‌, ಸ್ಥಾಪಕಾಧ್ಯಕ್ಷ ಎಂ.ಕೆ. ವಾಸುದೇವ ಉಪಸ್ಥಿತರಿದ್ದರು. ರಾಮಾಂಜಿ ನಮ್ಮ ಭೂಮಿ ನಿರೂಪಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next