Advertisement

ಫಿಟ್ನೆಸ್‌ಗೊಂದು ಸ್ಕಿಪ್ಪಿಂಗ್‌ ಸೂತ್ರ

01:28 PM May 31, 2020 | Hari Prasad |

ಸ್ಕಿಪ್ಪಿಂಗ್‌ ಮಾಡುತ್ತಾ ಫಿಟ್ನೆಸ್‌ ಕಾಪಾಡಿಕೊಳ್ಳುವ ಟ್ರೆಂಡ್‌ ಇದೀಗ ಸಾಮಾನ್ಯವಾಗಿದ್ದು, ದೇಹದ ಭಂಗಿ ಉತ್ತಮಗೊಳ್ಳಲು ಸಹಾಯಕವಾಗಿದೆ.

Advertisement

ಸ್ಕಿಪ್ಪಿಂಗ್‌ ಅನ್ನು ವಯಯಸ್ಸಿನ ಭೇಧಲ್ಲದೆ ಎಲ್ಲರೂ ಮಾಡಬಹುದಾಗಿದೆ. ಹಳ್ಳಿಯಿಂದದ ದಿಲ್ಲಿಯವೆರೆಗೂ ಈ ವ್ಯಾಯಮ ಜನಪ್ರಿಯಗೊಂಡಿದ್ದು ಪ್ರತಿಯೊಬ್ಬರೂ ಕೂಡ ಇದರ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.

ಸ್ಕಿಪ್ಪಿಂಗ್‌ ಮಾಡುವುದರಿಂದ ದೇಹದಲ್ಲಿರುವ ಕ್ಯಾಲೋರಿ ಕರಗುವುದರ ಜತೆಗೆ ಮೂಳೆ ಮತ್ತು ಸ್ನಾಯುಗಳು ಬಲವಾಗುತ್ತದೆ.

ಉಪಯೋಗ
ಹೃದಯ ರೋಗಗಳ ನಿಯಂತ್ರಣ:
ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್‌ ಮತ್ತು ಅಧಿಕ ತೂಕ ಇಂತಹ ಹಲವಾರು ಹೃದಯ ಕಾಯಿಲೆಗಳನ್ನು ನಿಯಂತ್ರಿಸಲು ಸ್ಕಿಪ್ಪಿಂಗ್‌ ಸಹಾಯ ಮಾಡುತ್ತದೆ. ಹೃದಯಕ್ಕೆ ಸಂಬಂಧಿಸಿದ ಯಾವುದೇ ಕಾಯಿಲೆಯ ಬೆಳವಣಿಗೆಯನ್ನು ತಡೆಯುತ್ತದೆ.

ಕೊಬ್ಬನ್ನು ಹೊರತೆಗೆಯುತ್ತದೆ: ರೋಪ್‌ ಜಂಪಿಂಗ್‌ ಇಡೀ ದೇಹಕ್ಕೆ ವ್ಯಾಯಾಮ ಕೊಡುತ್ತದೆ. ದೇಹದ ಎಲ್ಲ ಭಾಗಗಳಿಂದ ಕೊಬ್ಬನ್ನು ಹೊರತೆಗೆಯಲು ಸಹಾಯ ಮಾಡುತ್ತದೆ.

Advertisement

ಶಕ್ತಿಯನ್ನು ಹೆಚ್ಚಿಸುತ್ತದೆ: ಪ್ರತಿನಿತ್ಯ ಸ್ಕಿಪ್ಪಿಂಗ್‌ ಮಾಡುವ ಅಬ್ಯಾಸದ್ದಲ್ಲಿ, ಯುವ ಕ್ರೀಡಾಪಟುಗಳಲ್ಲಿ ಮಾತ್ರವಲ್ಲದೆ ಎಲ್ಲರಲ್ಲಿಯೂ ಸಮನ್ವಯ ಶಕ್ತಿ, ದೇಹದ ಸಮತೋಲನ ಸುಧಾರಿಸಲು ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ರೋಗ ನಿರೋಧಕ ಶಕ್ತಿ ‘ಟಿ’ ಕೋಶಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ ಮತ್ತು ನ್ಯಾಚುರಲ್‌ ಕಿಲ್ಲರ್‌ ಕೋಶಗಳ ಕಾರ್ಯವನ್ನು ಸುಧಾರಿಸುತ್ತದೆ.

ಮೂಳೆಗಳು ಆರೋಗ್ಯವಾಗಿರಲು ಸಹಕರಿಸುತ್ತದೆ: ಜಂಪಿಂಗ್‌ ವ್ಯಾಯಾಮ ಮೂಳೆಗಳು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಜತೆಗೆ ಮಾನಸಿಕ ಕಾಯಿಲೆಯನ್ನು ಹೋಗಲಾಡಿಸಲು ಸಹಕರಿಸುತ್ತದೆ.

ಸ್ಕಿಪ್ಪಿಂಗ್‌ ಸಿರೊಟೊನಿಸ್‌ ಸ್ರವಿಸುಕೆಯನ್ನು ಉತ್ತೇಜಿಸುತ್ತದೆ. ಇದರಿಂದ ನಿಮ್ಮಲ್ಲಿ ಉತ್ತಮ ಮನೋಭಾವ ಮೂಡುವುದರ ಜತೆಗೆ ಖನ್ನತೆ ಮತ್ತು ಆತಂಕದಂತಹ ಮಾನಸಿಕ ಅಸ್ವಸ್ಥತೆಯನ್ನು ಸುಧಾರಿಸುತ್ತದೆ.

ಚರ್ಮದ ಆರೋಗ್ಯಕ್ಕೂ ಉತ್ತಮ: ಚರ್ಮದ ಮೇಲಿನ ಧೂಳು, ಮಾಲಿನ್ಯ, ಮತ್ತು ಸೂಕ್ಷ್ಮಜೀವಿಯ ಬೆಳವಣಿಗೆಯನ್ನು ತಡೆಯಲು ಸ್ಕಿಪ್ಪಿಂಗ್‌ ಉತ್ತಮ ವ್ಯಾಯಾಮವಾಗಿದೆ. ಈ ವ್ಯಾಯಾಮವನ್ನು ಮಾಡುವವರು ಆರೋಗ್ಯಕರ ಆಹಾರ ಪದಾರ್ಥಗಳನ್ನು ಸೇಸಬೇಕು.

ಎಡಿಎಚ್‌ಡಿ ಮಕ್ಕಳಿಗೆ ಅನುಕೂಲ: ಅಟೆನ್ಷನ್‌ ಡೆಫಿಸಿಟ್‌ ಹೈಪರ್‌ ಆಕ್ಟಿವಿಟಿ ಡಿಸಾರ್ಡರ್‌ ಸಮಸ್ಯೆಯಿಂದದ ಬಳಲುತ್ತಿರುವ ಮಕ್ಕಳಿಗೆ ಸ್ಕಿಪ್ಪಿಂಗ್‌ ಸಹಕಾರಿ  ಎಂದು ಅಧ್ಯಯನಗಳು ತಿಳಿಸಿವೆ.

ಕ್ರಮಗಳು:

– ಸ್ಕಿಪ್ಪಿಂಗ್‌ ಮಾಡುವ ಮೊದಲು ಮತ್ತು ನಂತರ ನೀರನ್ನು ಕುಡಿಯಿರಿ

– ಉತ್ತಮ ಬೂಟುಗಳನ್ನು ಧರಿಸುವುದು ಉತ್ತಮ.

– ತೂಕ ನಷ್ಟಕ್ಕೆ ದಿನಕ್ಕೆ ಎರಡು ಬಾರಿ 10 ನಿಮಿಷದವರೆಗೆ ಸ್ಕಿಪ್ಪಿಂಗ್‌ ಮಾಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next