Advertisement

ಕೆನೆಯಂಥ ಕೆನ್ನೆಗಾಗಿ…

06:00 AM Aug 24, 2018 | |

ಹೆಣ್ಣಿನ ವರ್ಣನೆಯ ವಿಷಯ ಬಂದಾಗಲೆಲ್ಲ ಆಕೆಯ ಕೆನ್ನೆಯನ್ನು ಹಾಲಿಗೆ ಹೋಲಿಸುವುದುಂಟು. ಹಾಲ್ಗೆನ್ನೆಯ ಹುಡುಗಿ ಅಂತ ಕೇಳುವುದಕ್ಕೇನೋ ಚೆನ್ನಾಗಿದೆ. ಆದರೆ, ಚರ್ಮವನ್ನು ನಿಜಕ್ಕೂ ಹಾಲಿನಷ್ಟು ಬಿಳಿಯಾಗಿ, ನುಣುಪಾಗಿ ಇಡಲು ಸಾಧ್ಯವಾ, ಒಣಚರ್ಮ, ಮೊಡವೆ ಕಲೆ ಇತ್ಯಾದಿ ಸಮಸ್ಯೆಗಳು ಚರ್ಮದ ಕಾಂತಿಯನ್ನು ಹಾಲು ಮಾಡೋದಿಲ್ಲವಾ ಅಂತ ನೀವು ಕೇಳಬಹುದು. ಆ ಸಮಸ್ಯೆಗಳಿಗೆ ಕೆಲವು ಸರಳ ಪರಿಹಾರಗಳು ಇಲ್ಲಿವೆ.

Advertisement

.ನೀವು ಏನು ತಿನ್ನುತ್ತೀರಿ ಮತ್ತು ಎಷ್ಟು ತಿನ್ನುತ್ತೀರಿ ಅನ್ನೋದು ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದಿನಕ್ಕೆ ನಾಲ್ಕು ಬಾರಿ ಹಿತಮಿತವಾಗಿ ಆರೋಗ್ಯಯುತ ಆಹಾರ ಸೇವಿಸಿ.  ಹಣ್ಣು-ತರಕಾರಿ ಹಾಗೂ ಪ್ರೊಟೀನ್‌ಯುಕ್ತ ಆಹಾರ ನಿಮ್ಮ ಡಯಟ್‌ನಲ್ಲಿರಲಿ.

.ಒಣ ಚರ್ಮ, ತುಟಿ ಒಡೆಯುವುದು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಂಡರೆ ದೇಹಕ್ಕೆ “ಸಿ’, “ಇ’ ವಿಟಮಿನ್‌ ಅಗತ್ಯವಿದೆ ಎಂದರ್ಥ. ಹಸಿರು ಸೊಪ್ಪು , ಹಸಿ ತರಕಾರಿ, ಕಿತ್ತಳೆ, ಮೂಸಂಬಿಯಂಥ ಸಿಟ್ರಿಕ್‌ ಅಂಶವಿರುವ ಹಣ್ಣು ಸೇವಿಸಿ.

.ಮುದ್ದು ಮುಖ, ನುಣುಪು ಕೆನ್ನೆ ನಿಮ್ಮದಾಗಬೇಕಾದರೆ ಕೋಪ ಮತ್ತು ಒತ್ತಡಕ್ಕೆ ಗುಡ್‌ಬೈ ಹೇಳಬೇಕು. ಯೋಗ, ಧ್ಯಾನ, ಪ್ರಾಣಾಯಾಮದ ಮೂಲಕ ಮಾನಸಿಕ ನೆಮ್ಮದಿ ಕಾಪಾಡಿಕೊಳ್ಳಿ. ಕನಿಷ್ಠ 7-8 ಗಂಟೆ ನಿದ್ದೆ ಮಾಡುವುದೂ ಕೂಡಾ ಅಷ್ಟೇ ಮುಖ್ಯ.

.ಸತ್ತ ಚರ್ಮವು ಕೆನ್ನೆಯ ಮೇಲಿನ ಸೂಕ್ಷ್ಮ ರಂಧ್ರಗಳನ್ನು ಮುಚ್ಚಿ ಮುಖ ಕಳಾಹೀನವಾಗಿ ಕಾಣುವಂತೆ ಮಾಡುತ್ತದೆ. ಅದನ್ನು ತಡೆಯಲು ಪ್ರತಿವಾರ ಅಥವಾ ಹದಿನೈದು ದಿನಕ್ಕೊಮ್ಮೆ ಮುಖವನ್ನು ಮೃದುವಾಗಿ ಸðಬ್‌ ಮಾಡಿ ತೊಳೆಯಿರಿ.

Advertisement

.ಬೆಳಿಗ್ಗೆ-ಸಂಜೆ ಮುಖ ತೊಳೆದ ನಂತರ ತಪ್ಪದೇ ಮಾಯಿಶ್ಚರೈಸರ್‌ ಹಚ್ಚಿ ಚರ್ಮದ ತೇವ ಕಾಪಾಡಿ. ಕೆನ್ನೆಯ ರಂಗು ಹೆಚ್ಚಲು ಅಲೋವೆರಾ, ಅವಕಾಡೊ ಮಾಯಿಶ್ಚರೈಸರ್‌ ಉತ್ತಮ.

.ನೀವು ಜಾಸ್ತಿ ನೀರು ಕುಡಿದಷ್ಟೂ ನಿಮ್ಮ ಚರ್ಮದ ಹೊಳಪು ಹೆಚ್ಚುತ್ತದೆ. ಮೊಡವೆಯಂಥ ಸಮಸ್ಯೆಗಳೂ ದೂರವಾಗುತ್ತವೆ.

.ಕೆನ್ನೆ ನುಣುಪಾಗಬೇಕಿದ್ದರೆ ನೈಸರ್ಗಿಕವಾಗಿ ಸಿಗುವ ಟೊಮೆಟೋ, ವಿನೆಗರ್‌ ಬಳಸಿ ಬ್ಲೀಚ್‌ ಮಾಡಿ. ಬ್ಲೀಚ್‌ನಿಂದ ಮೊಡವೆ ಕಲೆಯೂ ಮಾಯವಾಗುತ್ತದೆ.

.ಮುಖದ ಚರ್ಮಕ್ಕೆ ರಕ್ತ ಪೂರೈಕೆ ಚೆನ್ನಾಗಾದರೆ ಚರ್ಮ ಕಾಂತಿ  ಪಡೆದುಕೊಳ್ಳುತ್ತದೆ. ವಾರದಲ್ಲಿ 2-3 ಬಾರಿ ಮುಖಕ್ಕೆ ಬಾದಾಮಿ ಎಣ್ಣೆ , ಲೋಳೆಸರ (ಅಲೊವೆರಾ) ಅಥವಾ ಫೇಶಿಯಲ್‌ ಕ್ರೀಮ್‌ ಬಳಸಿ ಮಸಾಜ್‌ ಮಾಡಿ.

.ಜೇನು, ಮೊಸರು, ಬಾದಾಮಿ, ಹಣ್ಣಿನ ತಿರುಳು, ಸೌತೆಕಾಯಿ, ಲಿಂಬೆರಸ… ಇತ್ಯಾದಿ ಅಡುಗೆ ಮನೆಯಲ್ಲೇ ಸಿಗುವ ಪದಾರ್ಥಗಳನು ಬಳಸಿ ಫೇಸ್‌ಪ್ಯಾಕ್‌ ಮಾಡಿ ಹಚ್ಚಿಕೊಂಡರೆ ಚರ್ಮಕ್ಕೆ ಕಾಂತಿ ಸಿಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next