Advertisement
ಸುಟ್ಟ ಗಾಯಗಳಿಂದ ವಿರೂಪಗೊಳ್ಳುವವರ ದೇಹಕ್ಕೆ ಹೊಸರೂಪ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಸ್ಕಿನ್ ಬ್ಯಾಂಕ್‌ಗೆ ಖಾಸಗಿ ಆಸ್ಪತ್ರೆಗಳು ಚರ್ಮಕ್ಕಾಗಿ ಮುಗಿಬಿದ್ದಿವೆ.ಸೆಂಟ್‌ಜಾನ್ಸ್, ಬಿಜಿಎಸ್ ಗ್ಲೋಬಲ್ ಸೇರಿದಂತೆ ಹಲವು ಖಾಸಗಿ ಆಸ್ಪತ್ರೆಗಳು ಚರ್ಮಕ್ಕಾಗಿ ಬೇಡಿಕೆ ಇಟ್ಟಿದ್ದು, ಸ್ಕಿನ್ ಬ್ಯಾಂಕ್ ತುರ್ತಾಗಿ ಬೇಕಾಗಿರುವ ಪ್ರಕರಣಗಳಿಗೆ ಮಾತ್ರ ಪೂರೈಕೆ ಮಾಡಲಾಗುತ್ತಿವೆ.
Related Articles
Advertisement
ದೇಶದ 3ನೇ ಸ್ಕಿನ್ ಬ್ಯಾಂಕ್ಮುಂಬೈನ ರಾಷ್ಟ್ರೀಯ ಸುಟ್ಟ ಗಾಯಗಳ ಕೇಂದ್ರ ಹಾಗೂ ಚೆನ್ನೈನಲ್ಲಿನ ರೈಟ್ಸ್ ಆಸ್ಪತ್ರೆಯಲ್ಲಿ ಸ್ಕಿನ್ ಬ್ಯಾಂಕ್ ಹೊರತು ಪಡಿಸಿದರೆ, ಬೆಂಗಳೂರು ನಗರದ ಸ್ಕಿನ್ ಬ್ಯಾಂಕ್ ದೇಶದಲ್ಲಿಯೇ ಮೂರನೇ ಬ್ಯಾಂಕ್ ಆಗಿದೆ. ಮುಂಬೈನ ಮಾದರಿಯಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದ್ದು, ತಜ್ಞ ವೈದ್ಯರು ಮತ್ತು ಸಿಬ್ಬಂದಿ ಮುಂಬೈಗೆ ಹೋಗಿ ತರಬೇತಿ ಪಡೆದು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟಗಾಯಗಳ ವಿಭಾಗದ ಮುಖ್ಯಸ್ಥ ಡಾ.ಕೆ.ಟಿ.ರಮೇಶ್ ತಿಳಿಸಿದ್ದಾರೆ. 30 ಮಂದಿಯಿಂದ ದಾನ:
ಸ್ಕಿನ್ ಬ್ಯಾಂಕ್ ಪ್ರಾರಂಭಗೊಂಡು ವರ್ಷದಲ್ಲಿಯೇ 30 ದಾನಿಗಳು ಚರ್ಮದಾನ ಮಾಡಿದ್ದಾರೆ. ಜನರಲ್ಲಿ ಜಾಗೃತಿಯ ಕೊರತೆಯ ನಡುವೆಯೂ 30ದಾನಿಗಳ ಚರ್ಮ ದಾನವಾಗಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ಜಾಗೃತಿಯ ಕೊರತೆ ಕಾರಣ ಹಲವು ಮಂದಿ ಚರ್ಮ ದಾನಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ನಟರನ್ನು ರಾಯಭಾರಿಗಳನ್ನಾಗಿ ಮಾಡಿಕೊಳ್ಳುವ ಮೂಲಕ ಜನತೆಯಲ್ಲಿ ಮತ್ತಷ್ಟು ಜಾಗೃತಿ ಮೂಡಿಸುವ ಯೋಚನೆ ವೈದ್ಯರಾಗಿದ್ದಾರೆ. ಈಗಾಗಲೇ ನೆನಪಿರಲಿ ಖ್ಯಾತಿ ನಟ ಪ್ರೇಮ್ ಮತ್ತು ಕಾಂಗ್ರೆಸ್ ಮುಖಂಡರೂ ಆಗಿರುವ ನಟ ಕುಮಾರ್ ಬಂಗಾರಪ್ಪ ರಾಯಭಾರಿಗಳಾಗಲು ಸಹಮತ ವ್ಯಕ್ತಪಡಿಸಿದ್ದಾರೆ. ಮತ್ತಷ್ಟು ಸೆಲೆಬ್ರಿಟಿಗಳನ್ನು ಆಯ್ಕೆ ಮಾಡಿಕೊಂಡು ಪ್ರಚಾರ ಕಾರ್ಯ ಆರಂಭಿಸಲು ನಿರ್ಧರಿಸಲಾಗಿದೆ. – ಪ್ರಭುಸ್ವಾಮಿ ನಟೇಕಲ್